Edited By: Pragati Bhandari
Edited By: Pragati Bhandari
ಪ್ರತೀದಿನ ತಪ್ಪದೆ ವ್ಯಾಯಾಮ ಮಾಡಿ. ದಣಿವಾದ ದೇಹಕ್ಕೆ ನಿದ್ದೆ ಹತ್ತುವುದು ಕಷ್ಟವಲ್ಲ
ಒಳ್ಳೆಯ ಹಾಸಿಗೆಯನ್ನು ಖರೀದಿಸಿ. ಗಂಟಾದ, ಬೆನ್ನಿಗೆ ಒತ್ತುವ, ಅತೀ ಮೃದುವಾದ, ಧೂಳು ಹಿಡಿದುಕೊಳ್ಳುವ ಹಾಸಿಗೆಗಳು ನಿದ್ದೆ ಕೊಡಲಾರವು
ಮಲಗುವ ಹಾಸಿಗೆ ಅಥವಾ ಹಾಸುಗಳು ಕಣ್ಣಿಗೆ ರಾಚುವ ಭಯಾನಕ ಬಣ್ಣಗಳದ್ದು ಬೇಡ. ಸೌಮ್ಯ, ಹಿತವಾದ ಬಣ್ಣಗಳು ಕಣ್ಣಿಗೆ ಬೀಳಲಿ
ದಿಂಬು ಹೇಗಿದೆ? ನಿಮ್ಮ ಅನುಕೂಲಕ್ಕೆ ಸರಿಯಾಗಿ ಇಲ್ಲದಿದ್ದರೆ ಕುತ್ತಿಗೆ ನೋವು ಕಟ್ಟಿಟ್ಟಿದ್ದು, ಜೋಕೆ!
ಮಲಗುವ ಜಾಗವೂ ಮುಖ್ಯ. ಅತೀ ಸೆಕೆ ಅಥವಾ ಚಳಿಯ ಜಾಗಗಳಲ್ಲಿ ನಿದ್ದೆ ಬಾರದು. ಮಂದ ಬೆಳಕು, ಹಿತವಾದ ಜಾಗದಲ್ಲಿ ನಿದ್ದೆ ಚೆನ್ನಾಗಿ ಬರುತ್ತದೆ
ದಿನವೂ ನಿಗದಿತ ಸಮಯಕ್ಕೆ ಮಲಗಿ. ಇದರಿಂದ ದೇಹದ ಆಂತರಿಕ ಗಡಿಯಾರಕ್ಕೆ ನಿಮ್ಮನ್ನು ನಿದ್ದೆಗೆ ತಳ್ಳುವುದು ಕಷ್ಟವಾಗುವುದಿಲ್ಲ.
ಮಲಗುವ ನಾಲ್ಕಾರು ತಾಸುಗಳ ಮುನ್ನ ಕೆಫೇನ್ ಸೇವನೆ ಬೇಡ. ಆಲ್ಕೋಹಾಲ್ ಸೇವನೆಗೆ ಮಿತಿ ಅಗತ್ಯ
ಊಟ ಅತಿಯಾದರೂ ಕಷ್ಟ, ತೀರಾ ಕಡಿಮೆಯಾದರೂ ನಿದ್ದೆ ಬರುವುದಿಲ್ಲ.
ಹಿತ-ಮಿತವಾಗಿ
ರಾತ್ರಿಯೂಟ ಮಾಡಿ.
For Web Stories
For Articles