Edited By: Pragati Bhandari

ಬಿಗ್‌ಬಾಸ್‌ (BBK SEASON 10) ಮನೆಯಲ್ಲಿ ಕಾರ್ತಿಕ್‌ ರಾಜಕೀಯ ಮಾಡ್ತಿದ್ದಾರೆ! ಅಲ್ಲಲ್ಲ, ರಾಜಕೀಯ ಶಾಸ್ತ್ರದ ಪಾಠ ಮಾಡ್ತಿದ್ದಾರೆ. 

ಈ ವಾರದ ಬಿಗ್‌ಬಾಸ್‌ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಹೈಯರ್‌ ಎಜುಕೇಷನ್‌ಗೆ ಕಾಲಿಟ್ಟಂತಿದೆ. 

ಕಾರ್ತಿಕ್ ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ. 

‘ಬಿಗ್‌ಬಾಸ್‌ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ’ ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತಾಡಲು ಪ್ರಾರಂಭಿಸಿದ್ದಾರೆ.

 ‘ಮನೆಯೊಳಗೆ ಯಾರಿಗೆ ಕೋಪ ನಿಯಂತ್ರಣ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ?’ ಎಂಬ ಪ್ರಶ್ನೆಗೆ ಸಂಗೀತಾ ತಾನಾಗೇ, ‘ನನ್ನ ಹೆಸ್ರೇ ಬರ್ದುಬಿಡಿ’ ಎಂದು ಹೇಳಿದ್ದಾರೆ.

ಅದಕ್ಕೆ ನಕ್ಕ ಕಾರ್ತಿಕ್, ‘ಏನಪ್ಪಾ ಈವತ್ತು ಸಂಗೀತಾ ಎಲ್ಲನೂ ಅವರಾಗೇ ಒಪ್ಕೋತಿದಾರೆ?’ ಎಂದು ನಕ್ಕಿದ್ದಾರೆ.

ಟಾಸ್ಕ್‌ ಮುಗಿದ ಮೇಲೆ ಬೆಡ್‌ರೂಮ್‌ನಲ್ಲಿ ಮಾತಾಡುತ್ತ, ‘ಕಾರ್ತಿಕ್ ಯಾಕೆ ಹಿಂಗಾಡ್ತಿದಾರೆ? ಅವ್ರಿಗೆ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ ನಿಂಗೆ?’ ಎಂದು ಡ್ರೋಣ್ ಪ್ರತಾಪ್‌ಗೆ ಕೇಳಿದ್ದಾರೆ.

ಒಟ್ಟಾರೆ ಬಿಗ್‌ಬಾಸ್ ಮನೆಯೊಳಗಿನ ಶಾಲೆ ಆಟದ ಹಂತ ದಾಟಿ ಅಸಮಾಧಾನದ ಹೊಗೆ ನಿಧಾನಕ್ಕೆ ಏಳುತ್ತಿದೆ. ಅದು ಯಾವಾಗ ಕಿಡಿಯಾಗಿಹೊಮ್ಮುತ್ತದೆ? ಯಾರನ್ನೆಲ್ಲ ಸುಡುತ್ತದೆ? ಎಂದು ಕಾದು ನೋಡಬೇಕು.