Krishi Khajane : ಬೆಳೆದರೆ ಬದನೆ, ಕೈ ತುಂಬಾ ಸಂಪಾದನೆ! Ramaswamy Hulakodu 1 ವರ್ಷ ago ನಮ್ಮ ದೇಶದಲ್ಲಿ ಅಡುಗೆಗೆ ಹೆಚ್ಚು ಬಳಸುವ ತರಕಾರಿಗಳಲ್ಲಿ ಒಂದು ಬದನೆ. ಹೆಚ್ಚು ಪೌಷ್ಟಿಕತೆಯನ್ನು ಹೊಂದಿರುವ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬದನೆಗೆ ಸದಾ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿ ʻಏನು ಬದನೆ ಬೆಳೆಯೋದೇʼ ಎಂದು ಮೂಗು ಮುರಿಯುವಂತಿಲ್ಲ. ಇದನ್ನು ಬೆಳೆದು ಎಕರೆಗೆ ಆರು ಲಕ್ಷ ರೂ. ಲಾಭ ಗಳಿಸಬಹುದು ಎನ್ನುತ್ತಾರೆ ರಾಯಚೂರಿನ ರೈತರು. ಬದನೆ ಬೆಳೆಯುವ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ಬದನೆ ಬೆಳೆದು ಬದುಕು ಕಟ್ಟಿಕೊಂಡಿರುವ ರಾಯಚೂರು ಜಿಲ್ಲೆ ಪಲ್ಕಂದೊಡ್ಡಿ ಗ್ರಾಮದ ಹನುಮರೆಡ್ಡಿಗೌಡ ಅವರಿಂದ ಪಡೆಯಬಹುದು. ಅವರ ಮೊಬೈಲ್ ಸಂಖ್ಯೆ: 99011 75107 ಇದನ್ನೂ ಓದಿ : Krishi Khajane : ಬೆಳೆದರೆ ಹೊಲದಲ್ಲಿ ಪಪ್ಪಾಯ; ವರ್ಷಕ್ಕೆ 5-6 ಲಕ್ಷ ರೂ. ಆದಾಯ!