ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಅತ್ಯುತ್ತಮ ಔಷಧೀಯ ಗುಣಗಳ್ಳುಳ್ಳ ಕಾಯಿಪಲ್ಲೆ. ರಕ್ತ ಶುದ್ಧಿ ಮಾಡುವ ಗುಣ ಹೊಂದಿರುವ ನುಗ್ಗೆಸೊಪ್ಪಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಲವಾರು ಔಷಧಗಳಿಗೆ ನುಗ್ಗೆಸೊಪ್ಪನ್ನು ಬಳಸಾಗುತ್ತದೆ. ನುಗ್ಗೆ ಗಿಡ ಬೆಳೆಸುವುದರಿಂದ ನುಗ್ಗೆಕಾಯಿ, ನುಗ್ಗೆ ಸೊಪ್ಪು ಎರಡನ್ನೂ ಪಡೆಯಬಹುದು. ಇದರ ಕೃಷಿ ಸುಲಭ ಮತ್ತು ಸರಳ. ಒಣಭೂಮಿ ಪ್ರದೇಶದಲ್ಲಿ ಯಾವುದೇ ರೀತಿಯ ಮಣ್ಣಿನಲ್ಲಿಯಾದರೂ ಸಹ ಇದರ ಕೃಷಿ ಮಾಡಬಹುದು. ನುಗ್ಗೆ ಸೊಪ್ಪಿನ ಮಹತ್ವ ಮತ್ತು ಕೃಷಿಯ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾದ ಬಸಯ್ಯ ಹಿರೇಮಠ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂ. 98450 20948
ಇದನ್ನೂ ಓದಿ : Krishi Khajane : ಬದುಕು ಬದಲಾಯಿಸಬಹುದು ಜೇನು ಕೃಷಿ; ಮಧು ಸಂಗ್ರಹಿಸಿದವರ ಮುಖದಲ್ಲಿ ಸದಾ ಖುಷಿ!