Site icon Vistara News

Krishi Khajane : ಸುಖದ ಬೆಳೆ; ಸುಗಂಧಿ ಬಾಳೆ

sugandhi banana
ಬಾಳೆ ಬೇಸಾಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಐದನೇ ಸ್ಥಾನದಲ್ಲಿದೆ. ಒಂದು ಅಂದಾಜಿನ ಪ್ರಕಾರ 37 ಲಕ್ಷಟನ್‌ ಬಾಳೆಯನ್ನು ಪ್ರತಿ ವರ್ಷ ಬೆಳೆಯಲಾಗುತ್ತದೆ. ಸುಮಾರು ಐದವತ್ತಕ್ಕೂ ಹೆಚ್ಚು ತಳಿಯ ಬಾಳೆಗಳನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದ್ದು, ಇದರಲ್ಲಿ ಸುಗಂಧಿ ಬಾಳೆಯೂ ಒಂದು. ಇದರ ಮೂಲ ತಮಿಳುನಾಡು. ಅಲ್ಲಿ ಇದನ್ನು ʻಪೂವನ್‌ʼ ಎಂದು ಕರೆಯಲಾಗುತ್ತದೆ. ಈ ಬಾಳೆಗೆ ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಭಾರಿ ಬೇಡಿಕೆ ಇದೆ. ಒಂದು ಎಕರೆ ಜಾಗದಲ್ಲಿ 8 ರಿಂದ 10 ಟನ್‌ ಬೆಳೆಯಬಹುದು. ಸುಮಾರು ಒಂದು ಲಕ್ಷ ಆದಾಯ ಪಡೆಯಬಹುದು ಎನ್ನುತ್ತಾರೆ ಬೆಳೆಗಾರರು. ನಮ್ಮ ರಾಜ್ಯದ ವಿಶ್ವ ವಿಖ್ಯಾತ ಪ್ರವಾಸಿ ಸ್ಥಳ ಹಂಪಿಯ ಸುತ್ತಮುತ್ತ ಈ ಬಾಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬಾಳೆಯನ್ನು ಬೆಳೆಯುವುದು ಹೇಗೆ? ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ಸುಗಂಧಿ ಬಾಳೆ ಬೆಳೆಯುತ್ತಿರುವ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರದ ಪ್ರವೀಣ್ ಕುಮಾರ್ ಅವರಿಂದ ಪಡೆಯಬಹುದು. ಅವರ ಮೊಬೈಲ್‌ ಸಂಖ್ಯೆ: 72044 72784

ಕೃಷಿಯ ಕುರಿತ ಈ ವಿಡಿಯೋವನ್ನೂ ನೋಡಿ : Krishi Khajane : ಸಮಗ್ರ ಕೃಷಿ ಸ್ವಾವಲಂಬನೆಗೆ ದಾರಿ!

Exit mobile version