Site icon Vistara News

Krishi Khajane : ಸೂರ್ಯಕಾಂತಿ ಬೆಳೆದರೆ ಎಂದೂ ಕೈ ಸುಡದು!

suryakanthi cultivation
ಸೂರ್ಯನತ್ತ ಮುಖ ಮಾಡುವ ಕಾರಣದಿಂದ ಎಲ್ಲರ ಗಮನ ಸೆಳೆದಿರುವ ಸೂರ್ಯಕಾಂತಿ ನಮ್ಮ ರಾಜ್ಯದ ಮುಖ್ಯವಾದ ಎಣ್ಣೆಕಾಳಿನ ಬೆಳೆ. ಇದನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಎಲ್ಲ ತರಹದ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ರಾಜ್ಯದಲ್ಲಿ ಏನಿಲ್ಲವೆಂದರೂ 1.73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದ್ದು, 1.50 ಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ಇದರ ಬೇಸಾಯ ಸುಲಭ. ಕೊಯ್ಲು ಮಾಡುವುದರಲ್ಲಿ ಹೆಚ್ಚು ಶ್ರಮವಿಲ್ಲ. ಸರಾಸರಿ ಉತ್ಪಾದನೆ ಪ್ರತಿ ಎಕರೆಗೆ 3.48 ಕ್ವಿಂಟಾಲ್‌ ಇರುತ್ತದೆ. ಇದರ ಬೇಸಾಯದ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ಸೂರ್ಯಕಾಂತಿ ಬೆಳೆಯುತ್ತಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಂಡಗಹಳ್ಳಿಯ ರೈತ ಲೋಕೇಶ್‌ ಅವರಿಂದ ಪಡೆಯಬಹುದು. ಅವರ ಮೊಬೈಲ್‌ ಸಂಖ್ಯೆ: 96634 79678

ಇದನ್ನೂ ಓದಿ: Krishi Khajane : ಸೆಂಚುರಿ ಬಾರಿಸಿದ ಟೊಮೆಟೊ ಬೆಲೆ; ಇದನ್ನು ಬೆಳೆಯೋದು ಹೇಗೆ?

Exit mobile version