ಬಹು ಬೇಡಿಕೆ ಇರುವ ಅಪರೂಪದ ಹಣ್ಣು ಎಂದರೆ ಜಾಂಬೂ ಹಣ್ಣು. ಇದನ್ನು ವಾಟರ್ ಆ್ಯಪಲ್ ಎಂದು ಕರೆಯಲಾಗುತ್ತದೆ. ರೋಸ್ ಆ್ಯಪಲ್ ಎಂದೂ ಕರೆಯುವುದುಂಟು. ಬಿಪಿ ಶುಗರ್ ಕಂಟ್ರೋಲ್ ಮಾಡುತ್ತೆ, ಫೈಬರ್ ಕಂಟೆಂಟ್ ಇದರಲ್ಲಿ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಈ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಈ ಹಣ್ಣಿನ ಕೃಷಿ ಕಷ್ಟವೇನಲ್ಲ. ಮಾರುಕಟ್ಟೆಯೂ ಇದೆ. ಇದನ್ನು ಮೂರು ಎಕರೆ ಜಾಗದಲ್ಲಿ ಬೆಳೆದು 15 ಲಕ್ಷ ರೂ. ಲಾಭ ಪಡೆಯುತ್ತಿರುವ ರೈತರು ನಮ್ಮ ಕೋಲಾರ ಜಿಲ್ಲೆಯಲ್ಲಿದ್ದಾರೆ. ಈ ಹಣ್ಣಿನ ಕೃಷಿಯ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನಲ್ಲಿ ಇದರ ಕೃಷಿಯಲ್ಲಿ ತೊಡಗಿರುವ ಕಲ್ಲಾವಿ ಹೊಸಹಳ್ಳಿಯ ವಾಸುದೇವ ರೆಡ್ಡಿ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂ. 88674 78581.
ಇದನ್ನೂ ಓದಿ : Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!