ವಿಜಯಪುರ: ಬಿಸಿಲುನಾಡಲ್ಲಿ ಕೃಷಿ ಮಾಡುವುದು ಹೇಗೆ, ನೀರೇ ಇಲ್ಲ ಎಂದು ತಲೆ ಮೇಲೆ ಕೈಹೊತ್ತು ಕೂರುವವರೇ ಹೆಚ್ಚು. ಆದರೆ ಕೆಲ ರೈತರು ಮನಸ್ಸಿದ್ದರೆ ಮಾರ್ಗ ಎನ್ನುತ್ತ ಸವಾಲುಗಳನ್ನೇ ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ. ಅಂತಹ ಒಬ್ಬ ಸಾಧಕ ರೈತರ ಜಮೀನಿಗೆ ಕರ್ನಾಟಕ ಸರ್ಕಾರದ ಸಚಿವರೇ ಭೇಟಿ ನೀಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಕೊಲ್ಹಾರದಲ್ಲಿ ಸೇಬಿನ ಹಣ್ಣು ಬೆಳೆದ ಪ್ರಗತಿಪರ ರೈತ ಸಿದ್ದಪ್ಪ ಬಾಳಗೊಂಡವರ ಜಮೀನು ಈಗ ಈ ಭಾಗದ ಎಲ್ಲರ ಮನೆಮಾತಾಗಿದೆ.
ಸೇಬು ಬೆಳೆದು ಸೈ ಎನಿಸಿಕೊಂಡ ರೈತನ ತೋಟಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಗಳವಾರ ಭೇಟಿ ನೀಡಿ, ಬೆಳೆ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಕೊಲ್ಹಾರದ ಪ್ರಗತಿಪರ ರೈತರಾದ ಸಿದ್ದಪ್ಪ ಬಾಲಗೊಂಡರವರ ತೋಟಕ್ಕೆ ಭೇಟಿ ನೀಡಿದ ಸಚಿವರು, ಕೃಷಿ ಬಗ್ಗೆ ಮಾಃಇತಿ ಪಡೆದುಕೋಂಡಿದ್ದಾರೆ. ಬಿಸಿಲುನಾಡು ವಿಜಯಪುರದ ಕೋಲ್ಹಾರದಲ್ಲಿ ಪ್ರಗತಿ ಪರ ರೈತರಾದ ಸಿದ್ದಪ್ಪ ಬಾಲಗೊಂಡ ಅವರು ಕಾಶ್ಮೀರದ ಸೇಬು ಬೆಳೆದು ಬೆರಗು ಮೂಡಿಸಿದ್ದಾರೆ.
ಇದನ್ನೂ ಓದಿ| 16 ಚಿನ್ನದ ಪದಕ ಪಡೆದ ಕಾಫಿ ನಾಡಿನ ಹುಡುಗಿ; ರೈತನ ಮಗಳ ಗೋಲ್ಡನ್ ಸಾಧನೆ
ಸಿದ್ದಪ್ಪ ಬಾಲಗೊಂಡ ಅವರು ತಮ್ಮ 20 ಎಕರೆ ಜಮೀನಿನಲ್ಲಿ ಕಾಶ್ಮೀರಿ ಸೇಬು ಬೆಳೆದಿದ್ದಾರೆ. ಅಷ್ಟೇ ಅಲ್ಲ, ಡ್ರ್ಯಾಗನ್ ಫ್ರೂಟ್, ಫ್ಯಾಷನ್ ಫ್ರೂಟ್, ಖರ್ಜೂರ, ಸೀತಾ ಫಲ, ರಾಮ ಫಲ, ಲಕ್ಷ್ಮಣ ಫಲ, ನೇರಳೆ, ಏಲಕ್ಕಿ ಬಾಳೆ, ಸೀಡ್ ಲೆಸ್ ಲಿಂಬೆ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಮಾದರಿಯಾಗಿದ್ದಾರೆ.
ತೋಟದಲ್ಲೆಲ್ಲಾ ಓಡಾಡಿ ಅಲ್ಲಿನ ಸೇಬು ಸೇರಿದಂತೆ ವಿಭಿನ್ನ ಬೆಳೆಗಳ, ಅವುಗಳ ಪೋಷಣೆ, ಫಸಲು ಕುರಿತಂತೆ ಮಾಹಿತಿ ಪಡೆದ ಸಚಿವ ಗೋವಿಂದ ಕಾರಜೋಳ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಇವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| ರೈತರಿಗೆ ಮಾದರಿಯಾದ ಇಸ್ರೇಲಿ ತೋಟಗಾರಿಕಾ ಫಾರ್ಮ್