Site icon Vistara News

Award Ceremony : ಪಾಂಚಜನ್ಯ ಪ್ರತಿಷ್ಠಾನದ 11ನೇ ವಾರ್ಷಿಕೋತ್ಸವ, ಪುರಸ್ಕಾರ ಪ್ರದಾನ ಇಂದು

Panchajanya award Suresh Kulakarni

ಬೆಂಗಳೂರು: ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ – ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ (Panchajanya Foundation) ಹನ್ನೊಂದನೇ ವಾರ್ಷಿಕೋತ್ಸವ ಮತ್ತು ಧಾರವಾಡದ ನಿವೃತ್ತ ಶಿಕ್ಷಕ ಸುರೇಶ್.ವಿ.ಕುಲಕರ್ಣಿ (Suresh V Kulakarni) ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ (Panchajanya puraskara) ಪ್ರದಾನ ಸಮಾರಂಭ (Award Ceremony) ಡಿಸೆಂಬರ್‌ 9 (ಭಾನುವಾರ) ಬೆಂಗಳೂರಿನ ಜಯನಗರದಲ್ಲಿ ನಡೆಯಲಿದೆ.

ಪಾಂಚಜನ್ಯ ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರತಿಷ್ಠಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಷರ, ಆರೋಗ್ಯ, ಅಧ್ಯಾತ್ಮ ಕ್ಷೇತ್ರದಲ್ಲಿನ ಸಾಧಕ ಶ್ರೇಷ್ಠರನ್ನು ಗುರುತಿಸಿ ಪಾಂಚಜನ್ಯ ಪುರಸ್ಕಾರ ನೀಡಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ. ಅದರಂತೆ ಈ ಬಾರಿಯ ಪುರಸ್ಕಾರವನ್ನು ಸುರೇಶ್‌ ವಿ. ಕುಲಕರ್ಣಿ ಅವರಿಗೆ ನೀಡಲಾಗುತ್ತಿದೆ.

ಡಿಸೆಂಬರ್‌ 9ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ಜಯನಗರ 4ನೇ ಬ್ಲಾಕ್‌ನ ಯುವಪಥ, ವಿವೇಕ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಆರ್.ವಿ.ಶಿಕ್ಷಣ ಸಮೂಹದ ನಿರ್ದೇಶಕರಾಗಿರುವ ಡಾ.ಟಿ.ವಿ.ರಾಜು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಿಹೆಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ಕೆ.ಎಸ್.ಸಮೀರ ಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಎಂಇಎಸ್ ಶಿಕ್ಷಣ ಸಮೂಹ ಶೈಕ್ಷಣಿಕ ನಿರ್ದೇಶಕರು ಡಾ.ಎಚ್.ಎಸ್.ಗಣೇಶ ಭಟ್ಟ ಪಾಲ್ಗೊಳ್ಳುವರು ಮತ್ತು ಕಾರ್ಯಕ್ರಮವನ್ನು ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್‌ ಲಿ. ಮತ್ತು ಬ್ಲೂನೀಮ್ ಮೆಡಿಕಲ್ ಡಿವೈಸೆಸ್ ಪ್ರೈ.ಲಿ ಪ್ರಾಯೋಜಿಸಿದ್ದಾರೆ , ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್.ವಿ.ಸುಬ್ರಹ್ಮಣ್ಯ , ಅನಂತ ವೇದಗರ್ಭಂ ಹಾಗು ವೆಂಕಟೇಶ ಆರ್. ವೇದಾಂತಿ ಉಪಸ್ಥಿತರಿರುವರು ಎಂದು ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತ ಸುರೇಶ್‌ ವಿ. ಕುಲಕರ್ಣಿ ಕಿರು ಪರಿಚಯ

ಸುರೇಶ್.ವಿ.ಕುಲಕರ್ಣಿ ಅವರು ಧಾರವಾಡದ ಕೆ.ಇ. ಬೋರ್ಡ್ ಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯರು. ಪ್ರಸಿದ್ಧ ಕಲಾವಿದರೂ ಹೌದು. ದ.ರಾ ಬೇಂದ್ರೆ ಕುರಿತು ಸಮಗ್ರವಾಗಿ ಮಾತನಾಡುವ ವಾಗ್ಮಿ. ಕುಲಕರ್ಣಿಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದರು; ವನ್ಯಜೀವಿ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಜಿ.ಡಿ.ಆರ್ಟ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ “ವಿಜ್ಞಾನ ಸಂಗತಿ” (ವಿಜ್ಞಾನ ಮಾಸಿಕ ಪತ್ರಿಕೆ) ಸಂಪಾದಕರಾಗಿದ್ದರು. ಆಕಾಶವಾಣಿ ಧಾರವಾಡದಿಂದ ಕುಲಕರ್ಣಿಯವರ 100ಕ್ಕೂ ಹೆಚ್ಚು ಕಾರ್ಯಕ್ರಮಗಳು ಪ್ರಸಾರವಾಗಿವೆ.

ಇದನ್ನೂ ಓದಿ : The Nandi Awards: ನಂದಿ ಫಿಲ್ಮ್‌ ಅವಾರ್ಡ್; ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ

ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮ ವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು, ಹಲವಾರು ಜನಮುಖಿ ಕಾರ್ಯಗಳನ್ನು ನಡೆಸುತ್ತ ಒಂದು ದಶಕದಿಂದ ನಿಸ್ವಾರ್ಥ ಚಿಂತನೆ ವಿಶಾಲದೃಷ್ಟಿಯಿಂದ ಸದ್ದಿಲ್ಲದೆ ಸೇವಾಕ್ರಾಂತಿ ಮಾಡುತ್ತ ಬಂದಿದೆ. ಪಾಂಚಜನ್ಯ ಮೊಳಗುವುದಕ್ಕಾಗಿ ಅಲ್ಲ, ದೀನರ ಬಾಳು ಬೆಳಗುವುದಕ್ಕಾಗಿ ಉದಯವಾಗಿದೆ ಎನ್ನುತ್ತಾರೆ ಈ ಪ್ರತಿಷ್ಠಾನವನ್ನು ಮುನ್ನಡೆಸುತ್ತಿರುವವರು.

Exit mobile version