ಬೆಂಗಳೂರು: ಸುಗಮ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಯನ ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ಡಾ. ಜಯಶ್ರೀ ಅರವಿಂದ್ ಪ್ರತಿಷ್ಠಾನ ಉದ್ಘಾಟನೆ ಕಾರ್ಯಕ್ರಮ (Book release) ನಡೆಯಲಿದೆ. ಇದೇ ಜ.5 ರಂದು ಬೆಂಗಳೂರಿನ ಜಯನಗರ ಟಿ. ಬ್ಲಾಕಿನಲ್ಲಿರುವ ಯುವ ಪಥ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಗೀತ ಪ್ರೀತಿ ಸುಗಮ ಸಂಗೀತಸಿರಿ ಡಾ.ಜಯಶ್ರೀ ಅರವಿಂದ್ ಎಂಬ ಡಾ.ಜಯಶ್ರೀ ಅರವಿಂದ್ ಅವರ ಅಭಿನಂದನಾ ಮತ್ತು ಸುಗಮ ಸಂಗೀತ ಕ್ಷೇತ್ರದ ಅಧ್ಯಯನ ಗ್ರಂಥದಲ್ಲಿ ವಿಶ್ವದಾದ್ಯಂತ 115 ಲೇಖಕರ ಜ್ಞಾನಾನುಭವದ ಲೇಖನಗಳಿವೆ.
ಈ ಗ್ರಂಥವನ್ನು ಕವಿ, ಸಾಹಿತಿ ಮುರಲಿಕೃಷ್ಣ ಬೆಳಾಲು ಸಂಪಾದಿಸಿದ್ದಾರೆ. ಗೀತ ಪ್ರೀತಿ ಗ್ರಂಥ ಲೋಕಾರ್ಪಣೆ ಸಮಾರಂಭದ ಉದ್ಘಾಟನೆಯನ್ನು ಕವಿ, ಸಾಹಿತಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕವಿ, ಸಾಹಿತಿ ಆಗಿರುವ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ವಹಿಸಲಿದ್ದಾರೆ. ಗ್ರಂಥ ಬಿಡುಗಡೆಯನ್ನು ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಮಾತನಾಡಲಿದ್ದಾರೆ.
ಅಲ್ಲದೆ ಕರ್ನಾಟಕ ಕಲಾಶ್ರೀ ಡಾ. ಜಯಶ್ರೀ ಅರವಿಂದ್ ಅವರನ್ನು ಈ ಸಮಾರಂಭದಲ್ಲಿ ಅಭಿನಂದಿಸಲಾಗುತ್ತಿದೆ. ಗ್ರಂಥ ಸಂಪಾದಕ, ಕವಿ, ಸಾಹಿತಿ ಮುರಲಿಕೃಷ್ಣ ಬೆಳಾಲು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಆಶಯ ನುಡಿಗಳನ್ನಾಡಲಿದ್ದು, ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಅಲ್ಲದೆ ಈ ಸಮಾರಂಭದಲ್ಲಿ ಡಾ. ಜಯಶ್ರೀ ಅರವಿಂದ್ ಪ್ರತಿಷ್ಠಾನವು ಉದ್ಘಾಟನೆಗೊಳ್ಳಲಿದೆ. ಅದರ ಲಾಂಚನವನ್ನು ಫ್ರೀಡಂಪಾರ್ಕ್ ಅಧ್ಯಕ್ಷರಾದ ಗಂಡಸಿ ಸದಾನಂದ ಸ್ವಾಮಿ ಅವರು ಬಿಡುಗಡೆಗೊಳಿಸಲಿದ್ದಾರೆ. ಗೀತ ಪ್ರೀತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುಗಮ ಸಂಗೀತಕ್ಕೆ ಸೇರಿದ ಎಲ್ಲಾ ಮಜಲುಗಳನ್ನು ಪರಿಚಯಿಸುವ ನೃತ್ಯ, ಗೀತ ಕಾರ್ಯಕ್ರಮವೂ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ