Site icon Vistara News

Book Release : ಸಂಸ್ಕೃತದ ವ್ಯಾಕರಣದ ಕಲಿಕೆಗೆ ಹೊಸ ಆಯಾಮ ನೀಡುವ ʻಕರಾವಲಂಬನʼ ಬಿಡುಗಡೆ

book release

#image_title

ಬೆಂಗಳೂರು: ಜಗತ್ತಿನ ಅತಿ ಪ್ರಾಚೀನ ಹಾಗೂ ಸಮೃದ್ಧ ಭಾಷೆಯಾದ ಸಂಸ್ಕೃತದ ವ್ಯಾಕರಣದ ಕಲಿಕೆಗೆ ಹೊಸ ಆಯಾಮ ನೀಡುವ ʻಕರಾವಲಂಬನʼ ಎಂಬ ಕೃತಿ ಬಿಡುಗಡೆಯಾಗಿದೆ (Book Release).

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸಂಶೋಧನಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಐಐಟಿ ಮದರಾಸಿನ ಸಂಸ್ಕೃತ ಪ್ರಾಧ್ಯಾಪಕ ಪ್ರೊ. ಕೆ ಎಸ್ ಕಣ್ಣನ್ ಹಾಗೂ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ. ಹೆಚ್. ಸತ್ಯನಾರಾಯಣಾಚಾರ್ಯರ ಉಪಸ್ಥಿತಿಯಲ್ಲಿ, ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿಯವರು ಕೃತಿಯನ್ನು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಶೀನಿವಾಸ ವರಖೇಡಿ, ಎಲ್ಲ ಪುಸ್ತಕಗಳನ್ನೂ ಪ್ರಕಟವಾದ ನಂತರ ಓದುತ್ತೇವೆ. ಆದರೆ, ಈ ಕೃತಿಯಲ್ಲಿನ ಕಲಿಕಾ ಪದ್ಧತಿಯನ್ನು ಪ್ರಕಟಣೆಗೆ ಮೊದಲೇ ಅನೇಕ ವಿದ್ಯಾರ್ಥಿಗಳಿಗೆ ಬಳಸಿ, ಯಶಸ್ವಿ ಎನಿಸಿದ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಹಾಗಾಗಿ ಇದರ ಮಹತ್ವ ಇನ್ನೂ ಹೆಚ್ಚು ಎಂದು ಹೇಳಿದರು.

ಕೃತಿಕಾರರ ಆಧುನಿಕ ವಿದ್ಯೆಗಳ ಹಿನ್ನೆಲೆಯನ್ನು ಪ್ರಸ್ರಾಪಿಸಿ, ಆಧುನಿಕ ವಿದ್ಯಾರ್ಥಿಗಳ ಅಧ್ಯಯನದ ಸಮಸ್ಯೆಗಳ ಪರಿಹಾರಕ್ಕೆ ಇಂಥವರ ಪ್ರಯತ್ನಗಳು ಹೆಚ್ಚು ಫಲಕಾರಿ ಎಂದು ಅಭಿಪ್ರಾಯಪಟ್ಟರು. ಪ್ರೊ ಕಣ್ಣನ್ ಪುಸ್ತಕದ ಒಳಪಿಡಿಯನ್ನು ಪ್ರಸ್ತಾಪಿಸಿದ ಅದರ ಮಹತ್ವವನ್ನು ಉದಾಹರಣೆಗಳ ಮೂಲಕ ಸಭೆಗೆ ಮಾಹಿತಿ ನೀಡಿದರು.

ಕೃತಿಯ ಲೇಖಕ ಡಾ ಶ್ರೀಧರ ಸುಬ್ಬಣ್ಣ ಹಾಗೂ ಡಾ ಶ್ರೀನಿಧಿಯವರ ಶ್ರಮ ಶ್ಲಾಘಿಸಿದ ಡಾ ಕಣ್ಣನ್, ಈ ಕೃತಿ ಕಾರಕದ ಕಲ್ಪನೆಯನ್ನು ಪ್ರಧಾನವಾಗಿರಿಸಿಗೊಂಡಿರುವುದನ್ನು ಮೆಚ್ಚಿ, ಕಾರಕ ಎಂಬುದು ಹೇಗೆ ಸಂಸ್ಕೃತ ವ್ಯಾಕರಣದ ಜೀವಾಳ ಎಂಬುದನ್ನು ಪ್ರತಿಪಾದಿಸಿದರು. ಕಾರಕದ ಸರಿಯಾದ ಅಧ್ಯಯನಯಿಂದ ಭಾಷಾಶಾಸ್ತ್ರದ ಅಧ್ಯಯನ ಹೇಗೆ ಸುಲಭ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸಿದರು.

ಡಾ ಹೆಚ್ ಸತ್ಯನಾರಾಯಣಾಚಾರ್ಯರು ಮಾತನಾಡಿ ಕೃತಿಕಾರರಿಂದ ಇದೇ ರೀತಿ ಭಾರತೀಯ ವಿದ್ಯೆಗಳಿಗೆ ಉಪಕಾರಕ-ವಾಗುವ ಪುಸ್ತಕಗಳು ಮೂಡಿ ಬರಲಿ ಎಂದು ಶುಭಕೋರಿದರು. ರಾಮ ಬೆತ್ಮಂಗಲ್ಕರ್ ರವರ ಕಾರ್ಯಕ್ರಮ ನಿರ್ವಹಣೆ, ಹಾಗೂ ಅಪರ್ಣಾರವರ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಆಸಕ್ತರು http://www.vidyasvam.in ವೆಬ್‌ ಸೈಟ್‌ನಲ್ಲಿ ಕೃತಿಯ ಕುರಿತು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Book Release: ಮಾ.6ರಂದು ಪ್ರಕಾಶ್‌ ಶೇಷರಾಘವಾಚಾರ್‌ರ ಆತ್ಮನಿರ್ಭರ ಭಾರತ ಪುಸ್ತಕ ಲೋಕಾರ್ಪಣೆ

Exit mobile version