ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯ 2022ರ ಸಾಲಿನ ಲಾಂಗ್‌ಲಿಸ್ಟ್‌ಗೆ ಆಯ್ಕೆಯಾದ ಲೇಖಕರ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಭಾರತೀಯ ಲೇಖಕರ ಯಾವುದೇ ಕಾದಂಬರಿ ಲಿಸ್ಟಿನಲ್ಲಿ ಇಲ್ಲ.
ಲಾಂಗ್‌ಲಿಸ್ಟ್‌ನಲ್ಲಿ 13 ಕಾದಂಬರಿಕಾರರದಿದ್ದಾರೆ. ಇಂಗ್ಲಿಷ್ ಕಾದಂಬರಿಗಳಿಗೆ ಈ ಪುರಸ್ಕಾರ ದೊರೆಯುತ್ತದೆ. ನೊವೈಲೆಟ್ ಬುಲವಾಯೊ (ಗ್ಲೋರಿ), ಹೆರ್ನಾನ್ ಡಯಾಜ್ (ಟ್ರಸ್ಟ್), ಪರ್ಸಿವಲ್ ಎವೆರೆಟ್ (ದಿ ಟ್ರೀಸ್), ಕರೆನ್ ಜಾಯ್ ಫೌಲರ್ (ಬೂತ್), ಅಲನ್ ಗಾರ್ನರ್ (ಟ್ರೆಕಲ್ ವಾಕರ್), ಶಹಾನ್ ಕರುಣತಿಲಕ (ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ), ಕ್ಲೇರ್ ಕೀಗನ್ (ಸ್ಮಾಲ್ ತಿಂಗ್ಸ್ ಲೈಕ್ ದೀಸ್), ಗ್ರೇಮ್ ಮ್ಯಾಕ್ರೇ ಬರ್ನೆಟ್ (ಕೇಸ್ ಸ್ಟಡಿ), ಆಡ್ರೆ ಮ್ಯಾಗೀ (ದಿ ಕಾಲೋನಿ), ಮ್ಯಾಡಿ ಮಾರ್ಟಿಮರ್ (ಮ್ಯಾಪ್ಸ್ ಅಫ್ ಅವರ್ ಸ್ಪೆಕ್ಟಾಕ್ಯುಲರ್ ಬಾಡೀಸ್), ಲೀಲಾ ಮಾಟ್ಲಿ (ನೈಟ್‌ಕ್ರಾಲಿಂಗ್), ಸೆಲ್ಬಿ ಲಿನ್ ಶ್ವಾರ್ಟ್ಜ್ ಾಫ್ಟರ್ ಸ್ಯಾಫೋ), ಎಲಿಜಬೆತ್ ಸ್ಟ್ರೌಟ್ (ಓಹ್ ವಿಲಿಯಂ!) ಕೃತಿಗಳು ಪಟ್ಟಿಯಲ್ಲಿವೆ.
ಸಾಂಸ್ಕೃತಿಕ ಇತಿಹಾಸಕಾರ ಮತ್ತು ಬರಹಗಾರ ನೀಲ್ ಮ್ಯಾಕ್‌ಗ್ರೆಗರ್, ಅಕಾಡೆಮಿಕ್ ಮತ್ತು ಪ್ರಸಾರಕಿ ಶಾಹಿದಾ ಬ್ಯಾರಿ, ಇತಿಹಾಸಕಾರ್ತಿ ಹೆಲೆನ್ ಕ್ಯಾಸ್ಟರ್, ಲೇಖಕ ಮತ್ತು ವಿಮರ್ಶಕ ಎಂ. ಜಾನ್ ಹ್ಯಾರಿಸನ್ ಮತ್ತು ಕಾದಂಬರಿಕಾರ ಮತ್ತು ಕವಿ ಅಲೈನ್ ಮಬಾನ್‌ಕೌ ಈ ಬಾರಿಯ ತೀರ್ಪುಗಾರರು. ಪ್ರಶಸ್ತಿ ಗೆದ್ದವರಿಗೆ £ 50,000 (ಸುಮಾರು 48.21 ಲಕ್ಷ ರೂ.) ದೊರೆಯಲಿದೆ.
ಈ ಹಿಂದೆ ಭಾರತೀಯರಾದ ವಿ.ಎಸ್.ನೈಪಾಲ್ (1971), ಸಲ್ಮಾನ್ ರಶ್ದಿ (1981), ಅರುಂಧತಿ ರಾಯ್ (1997), ಕಿರಣ್ ದೇಸಾಯಿ (2006), ಅರವಿಂದ ಅಡಿಗ (2008) ಬೂಕರ್ ಪುರಸ್ಕಾರ ಪಡೆದಿದ್ದಾರೆ. ಇತರ ಭಾರತೀಯ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದ ಮಾಡಲಾದ ಕಾದಂಬರಿಗಳಿಗೆ ನೀಡಲಾಗುವ ʻಇಂಟರ್‌ನ್ಯಾಷನಲ್ ಬೂಕರ್ ಪ್ರಶಸ್ತಿʼಯು ಈ ವರ್ಷ ಗೀತಾಂಜಲಿ ಶ್ರೀ ಅವರ ʻಟಾಂಬ್ ಆಫ್ ಸ್ಯಾಂಡ್ʼಗೆ ದೊರೆತಿತ್ತು. ಬೂಕರ್ ಮತ್ತು ಇಂಟರ್‌ನ್ಯಾಷನಲ್ ಬೂಕರ್ ಒಂದೇ ಸಂಸ್ಥೆಯ ಎರಡು ವಿಭಿನ್ನ ಪ್ರಶಸ್ತಿಗಳು.
ಇದನ್ನೂ ಓದಿ: Booker award: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಕಾದಂಬರಿಗೆ ಮನ್ನಣೆ