Site icon Vistara News

ಹೊಸ ಕತೆಗಾರರಿಗೆ ಛಂದ ಪುಸ್ತಕ ಹಸ್ತಪ್ರತಿ ಆಹ್ವಾನ

chanda award

ಬೆಂಗಳೂರು: ಕಳೆದ ಹದಿನೇಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ʻಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.

ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಕತೆಗಾರರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು ಎಂಟರಿಂದ ಹತ್ತು ಸ್ವಂತ ಕತೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಮುದ್ರಿತ ಪುಟಗಳನ್ನು ಕೊರಿಯರ್ ಮೂಲಕ ಕಳುಹಿಸಬೇಕು. ಪ್ರಕಟವಾದ ಅಥವಾ ಅಪ್ರಕಟಿತ ಕತೆಗಳೆರಡನ್ನೂ ಪರಿಗಣಿಸಿದರೂ, ಅಪ್ರಕಟಿತ ಕತೆಗಳಿಗೆ ಹೆಚ್ಚು ಪ್ರಾಮುಖ್ಯ ಕೊಡುತ್ತೇವೆ. ಆಯ್ಕೆಯಾದ ಕತೆಗಾರರಿಗೆ ನಲವತ್ತು ಸಾವಿರ ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಸುಂದರವಾದ ಪುಸ್ತಕ ಬಿಡುಗಡೆ ಸಮಾರಂಭವನ್ನೂ ಮಾಡಲಾಗುವುದು ಎಂದು ಕತೆಗಾರ, ಛಂದ ಪ್ರಕಾಶನದ ವಸುಧೇಂದ್ರ ತಿಳಿಸಿದ್ದಾರೆ. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಜುಲೈ 31, 2022.

ಕತೆಗಳನ್ನು ಕಳಿಸಬೇಕಾದ ವಿಳಾಸ: ಛಂದ ಪುಸ್ತಕ, C/O ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076 (ವಾಟ್ಸಾಪ್- 98444 22782) ಹೆಚ್ಚಿನ ವಿವರಗಳಿಗೆ: vas123u@rocketmail.com

ಇದನ್ನೂ ಓದಿ: ಡಾ. ಗುರುಲಿಂಗ ಕಾಪಸೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

Exit mobile version