ಬೆಂಗಳೂರು: ಚಿತ್ತಕಲಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ತ್ಯಾಗರಾಜ ಹೃತ್ಸದನ ಕಾರ್ಯಕ್ರಮವನ್ನು (Cultural Events) ಆಯೋಜಿಸಲಾಗಿದೆ. ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಡಿಸೆಂಬರ್ 13 ಮತ್ತು 14 ರಂದು ಸಂಜೆ 7 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. 8 ಜನರ ನೃತ್ಯ ವೈಭವದ ಜತೆಗೆ ಐವರು ಸಂಗೀತ ವಿದ್ವಾಂಸರ ಹಿಮ್ಮೇಳದ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ನೃತ್ಯದಿಂದ ತೀರಾ ಸಾಮಾನ್ಯರನ್ನು ತಮ್ಮತ್ತ ಸೆಳೆಯುವ ಶಕ್ತಿಯನ್ನು ಗುರು ವಿದ್ವಾನ್ ಪ್ರವೀಣ್ ಕುಮಾರ್ ಅವರು ಹೊಂದಿದ್ದಾರೆ. ಇವರ ನಾಟ್ಯವನ್ನು ನೋಡ ನೋಡುತ್ತಿದ್ದಂತೆ ಮುಗಿದುಬಿಟ್ಟಿತೇ, ಇನ್ನೂ ಇರಬೇಕಿತ್ತು ಎಂಬ ಭಾವ ಪ್ರೇಕ್ಷಕರಲ್ಲಿ ಹುಟ್ಟಿಸುತ್ತದೆ. ಪ್ರವೀಣ್ ಕುಮಾರ್ ಮತ್ತವರ ಶಿಷ್ಯವರ್ಗ ತ್ಯಾಗರಾಜರ ಕೃತಿಗಳಿಗೆ ತಮ್ಮ ನಾಟ್ಯಮಾಲೆಯನ್ನು ಪೋಣಿಸಲಿದ್ದಾರೆ.
ನಾದಬ್ರಹ್ಮ ಎಂದೆನಿಸಕೊಂಡು, ನಾದವನ್ನೇ ಬ್ರಹ್ಮನನ್ನಾಗಿ ಕಂಡ ತ್ಯಾಗರಾಜರ ಕೃತಿಗಳಿಗೆ ನೃತ್ಯವನ್ನೇ ಉಸಿರಾಗಿಸಿಕೊಂಡಿರುವ ಪ್ರವೀಣ್ ಕುಮಾರ್ ಅವರು ನೃತ್ಯ ಸಂಯೋಜಿಸಿ ತಮ್ಮ ಶಿಷ್ಯಗಣದೊಂದಿಗೆ ಅದನ್ನು ರಸಿಕ ಲೋಕಕ್ಕೆ ಉಣಬಡಿಸಲು ಮುಂದಾಗಿದ್ದಾರೆ. ತ್ಯಾಗರಾಜ ಹೃತ್ಸದನ ಹೆಸರಿನೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಯಾರಿದು ತ್ಯಾಗರಾಜ
ಶ್ರೀರಾಮನ ಪರಮಭಕ್ತರಾದ ತ್ಯಾಗರಾಜರಿಗೆ ರಾಮನನ್ನು ಎಷ್ಟು ಬಣ್ಣಿಸಿದರೂ, ಬಗೆಬಗೆಯಾಗಿ ಹಾಡಿ ಓಲೈಸಿದರೂ ಇನ್ನೂ ಏನೋ ಕಡಿಮೆ ಎಂಬ ಭಾವವಿತ್ತು. ಗಾನಲೋಲರನ್ನಾಗಿಸಬಲ್ಲ ತ್ಯಾಗರಾಜರು ಸುಮಾರು ಏಳುನೂರು ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಲೇ ಸಾಗಿದ್ದರೆಂದು ತಿಳಿದುಬಂದಿದೆ. ತ್ಯಾಗರಾಜರ ಭಕ್ತಿ ಶ್ರೇಷ್ಠತೆಗೆ ತಲೆಬಾಗಿದವರೇ ಇಲ್ಲ.
ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.