Site icon Vistara News

Selfie With Ramotsava : ಇಲ್ಲಿದ್ದಾರೆ ಕರುನಾಡ ರಾಮಲಲ್ಲಾ; ಎಲ್ಲೆಲ್ಲೂ ರಾಮನನ್ನೇ ಕಂಡೆನಲ್ಲ!

ದೇಶಾದ್ಯಂತ ರಾಮೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಈ ಐತಿಹಾಸಿಕ ದಿನವನ್ನು ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ಅದ್ಧೂರಿಯಾಗಿ (Ram Mandir) ಆಚರಿಸಲಾಗುತ್ತಿದೆ. ಕೋಟ್ಯಂತರ ಭಕ್ತ ಸಮೂಹ, ಭಕ್ತಿ ಭಾವದಲ್ಲಿ ಭಾವೈಕ್ಯತೆಯೊಂದಿಗೆ ಮಿಂದೇಳುತ್ತಿದೆ. ವಿಶಿಷ್ಟ, ವಿಭಿನ್ನ ಸೇವೆ ಮೂಲಕ ರಾಮನ (Ayodhya Mandir) ಕೃಪೆಗೆ ಪಾತ್ರರಾಗುತ್ತಿದ್ದಾರೆ. ದೇಶದ ಮೂಲೆ-ಮೂಲೆಯಲ್ಲೂ ರಾಮಜಪವೇ ಝೇಂಕರಿಸುತ್ತಿದೆ.

ರಾಜ್ಯದಲ್ಲಿ ಮಕ್ಕಳು ಬಾಲ ರಾಮನ ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳು ಮದರಂಗಿಯ ಮೂಲಕ ರಾಮನ ಹೆಸರನ್ನು ಬಿಡಿಸಿಕೊಂಡಿದ್ದಾರೆ. ಈ ವೇಳೆ ವಿಸ್ತಾರ ನ್ಯೂಸ್‌ ಸಹ ಜನರ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸೆಲ್ಫಿ ವಿತ್‌ ರಾಮೋತ್ಸವಕ್ಕೆ (Selfie With Ramotsava) ಕರೆ ನೀಡಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದ್ದು, ಫೋಟೋಗಳನ್ನು ಕಳಿಸಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ರಾಮೋತ್ಸವದ ಸಂತಸವು ಹೇಗಿತ್ತು? ಇಲ್ಲಿದೆ ನೋಡಿ ಫೋಟೊ ಗ್ಯಾಲರಿ.

ಆನೇಕಲ್‌ನ ಹೆಬ್ಬಗೋಡಿಯ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಮಕ್ಕಳಿಗೆ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವೇಷ ಹಾಕಿ ಮೆರವಣಿಗೆ
ಬೆಂಗಳೂರಿನ ಗಗನ್‌.ಆರ್. ಕಿತ್ತೂರು
ಇಗ್ಗಲೂರಿನ ವೇಣುಗೋಪಾಲಸ್ವಾಮಿ ಆಲಯದಲ್ಲಿ ಶಾಲಾ ಮಕ್ಕಳಿಂದ ರಾಮ ನಾಮ ಕೀರ್ತನೆ
ಬಳ್ಳಾರಿಯಲ್ಲಿ ಮನೆಯ ಮುಂದೆ ಬೃಹತ್‌ ರಂಗೋಲಿ ಚಿತ್ತಾರ ಬಿಡಿಸಿದ ಮಹಿಳೆಯರು.ಜೈ ಶ್ರೀರಾಮ್‌ ಎಂದ ಮಕ್ಕಳು
ಶಿವಮೊಗ್ಗದ ಭದ್ರಾವತಿ ತಾಲೂಕಿನ ಉಜ್ಜನಿಪುರ ಗ್ರಾಮ ಕಲಾವಿದ ವಿಷ್ಣು ಅವರು ರಚಿಸಿದ ರಾಮಾಂಜನೇಯರ ಮೂರ್ತಿ
ರಾಮ, ಲಕ್ಷ್ಮಣ, ಸೀತಾ ರೂಪದಲ್ಲಿ ಯಾದಗಿರಿಯ ಶ್ರೀವಿಜಯ್ ಶ್ರೀನಂದನ್ ಹಾಗೂ ಅನ್ವಿತ
ಶಿವಮೊಗ್ಗದಲ್ಲಿ ಎಪಿಎಂಸಿ ಆವರಣ ತರಕಾರಿ‌‌ ಮಾರ್ಕೆಟ್‌ನಲ್ಲಿ ಮಹಿಳೆಯರ ರಾಮ ನಾಮ ಜಪ
ಉಡುಪಿಯ ಬ್ರಹ್ಮಾವರ ಸಮೀಪದ ಹೇರೂರು ಮಹಾಲಿಂಗೇಶ್ವರ ದೇವಳದಲ್ಲಿ ಕಲಾವಿದೆ ಸ್ಪೂರ್ತಿ ಆಚಾರ್ಯ , ಅಶ್ವಥ್ ಆಚಾರ್ಯ, ಪ್ರಶಾಂತ್ ಶ್ರೀಯಾನ್, ಅಭಿಷೇಕ್ ಆಚಾರ್ಯರ ಕೈಚಳಕ
ವಿಜಯಪುರದಲ್ಲಿ ಆಂಜನೇಯ ದೇವಸ್ಥಾನಕ್ಕೆ ರಾಮನ ವೇಷ ಧರಿಸಿದ ಪುಟಾಣಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version