Site icon Vistara News

Budget 2024 : ಆದಾಯ ತೆರಿಗೆಯಲ್ಲಿ ಬದಲಾವಣೆ ಇದೆಯೇ? ಇಲ್ಲಿದೆ ಟ್ಯಾಕ್ಸ್​ ಸ್ಲ್ಯಾಬ್​

Income Tax

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಸಂಬಳ ಪಡೆಯುವ ವೃತ್ತಿಪರರು, ವಿಶೇಷವಾಗಿ, ಆದಾಯ ತೆರಿಗೆಯ ಬಗ್ಗೆ ಅವರ ಘೋಷಣೆಗಳ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದರು. ಅವರೆಲ್ಲರಿಗೂ ಶುಭ ಸುದ್ದಿ ನೀಡಿದ್ದು ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದೇ ರೀತಿ ಪರಿಹಾರ ನಿರೀಕ್ಷೆ ಮಾಡಿದ್ದವರಿಗೆ ಬೇಸರವಾಗಿದೆ.

ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್​​ನಲ್ಲಿ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್​ಗಳು ಹಿಂದಿನದ್ದನ್ನೇ ಉಳಿಸಿಕೊಳ್ಳಲಾಗಿದೆ. ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಕೊಟ್ಟಿಲ್ಲ . ಅಸ್ತಿತ್ವದಲ್ಲಿರುವ ಸ್ಲ್ಯಾಬ್ (ಕಳೆದ ವರ್ಷದ ಬಜೆಟ್​ನಲ್ಲಿ ಪ್ರಕಟಿಸಿರುವ ಹೊಸ ಮಾದರಿಯ ತೆರಿಗೆ ಪದ್ಧತಿ) ಪ್ರಕಾರ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ.

ಇದೇ ವೇಳೆ ಅದಕ್ಕಿಂತ ಹಿಂದಿನ (ಓಲ್ಡ್​ ರೆಜಿಮ್​) ಆದಾಯ ಸ್ಲ್ಯಾಬ್​ಗಳನ್ನು ಅದೇ ರೀತಿ ಮುಂದುವರಿಸಲಾಗಿದೆ. 2023ರವರೆಗೆ ಒಟ್ಟು 5 ಲಕ್ಷ ರೂ. ತನಕದ ಆದಾಯಕ್ಕೆ ವಿನಾಯಿತು ಲಭಿಸುತ್ತಿತ್ತು. ಹೊಸ ಮಾದರಿಯಲ್ಲಿ (ನ್ಯೂ ರೆಜಿಮ್​) 7 ಲಕ್ಷ ರೂ.ಗೆ ವಿಸ್ತರಿಸಲಾಗಿತ್ತು. 5 ಲಕ್ಷ ರೂ. ತನಕದ ಆದಾಯಕ್ಕೆ 12,500 ರೂ. ತನಕ ತೆರಿಗೆ ರಿಬೇಟ್‌ ಸಿಗುತ್ತಿತ್ತು. ಹೀಗಾಗಿ ವೈಯಕ್ತಿಕ ತೆರಿಗೆದಾರರು 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ನೀಡದೆ ಇರಬಹುದು.

ಇದನ್ನೂ ಓದಿ : Budget 2024: ದೇಶ, ರಾಜ್ಯಕ್ಕೆ ಮೋದಿ ಕೊಡುಗೆ ಏನು? ಕೇಂದ್ರ ಬಜೆಟ್‌ ಲೈವ್‌ ಇಲ್ಲಿ ವೀಕ್ಷಿಸಿ

ಆಮದು ಸುಂಕ ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಒಂದೇ ರೀತಿಯ ತೆರಿಗೆ ದರಗಳನ್ನು ಉಳಿಸಿಕೊಳ್ಳಲು ನಾನು ಪ್ರಸ್ತಾಪಿಸುತ್ತೇನೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಳೆ ತೆರಿಗೆ ಸ್ಲ್ಯಾಬ್​ ಈ ರೀತಿ ಇದೆ

Exit mobile version