ಬೆಂಗಳೂರು: ಫಿಲ್ಮ್ ಛೇಂಬರ್ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು, 20 ಅಂಶಗಳ ದಾಖಲೆಯೊಂದಿಗೆ ಅವ್ಯವಹಾರಕ್ಕೆ ಉತ್ತರ ನೀಡುವಂತೆ ರಾಜೇಂದ್ರ ಸಿಂಗ್ ಬಾಬು ಮತ್ತು ಕೃಷ್ಣೇಗೌಡರ ತಂಡದಿಂದ ನೂತನ ಅಧ್ಯಕ್ಷ ಭಾ ಮಾ ಹರೀಶ್ ಅವರಿಗೆ ಪೊರಕೆ ಫಿನಾಯಿಲ್ ನೀಡಿ ಮನವಿ ಮಾಡಿದ್ದಾರೆ.
ʼʼನಮ್ಮಲ್ಲಿ ದಾಖಲೆಗಳಿವೆ. ಸತ್ಯ ಏನೆಂಬುದನ್ನು ಪರಿಶೀಲಿಸಿ ನೀವು ಉತ್ತರ ನೀಡಿ. ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾ ಮೂಲಕ ನಮ್ಮ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಮಾಡಿರುವ ಆರೋಪದ ಬಗ್ಗೆ ನೀವು ಉತ್ತರ ಕೊಡಬೇಕು. ನಮ್ಮ ಆರೋಪದಲ್ಲಿ ಸತ್ಯಾಂಶ ಇಲ್ಲ ಎನ್ನುವುದಾರೆ ನೀವು ಕ್ಲೀನ್ ಚಿಟ್ ಕೊಡಿʼʼ ಎಂದು ಈ ತಂಡ ಮನವಿ ಮಾಡಿದೆ.
ಇದನ್ನೂ ಓದಿ | KFCC Election | ಭಾ. ಮಾ. ಹರೀಶ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಸಾ. ರಾ ಸೋಲು
ಈ ತಂಡ ಕಚೇರಿಗೆ ಭೇಟಿ ನೀಡಿ, ಪೊರಕೆ ಫಿನಾಯಿಲ್ ನೀಡಿ ಫಿಲ್ಮ್ ಛೇಂಬರ್ ಶುದ್ಧೀಕರಿಸಿ ಎಂಬ ಸಂದೇಶ ಸಾರಿದ್ದಾರೆ. ʼʼಫಿಲ್ಮ್ ಛೇಂಬರ್ನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಇದು ನಮ್ಮೆಲ್ಲರ ದುಡ್ಡು. ಕೋರ್ಟ್ನಲ್ಲಿ ಕೂಡ ಕೇಸ್ಗಳು ನಡೆಯುತ್ತಿವೆ. ಹೊಸಬರಿಗೆ ಅವಕಾಶ ನೀಡುತ್ತಿಲ್ಲ. ನಮ್ಮ ಚಿತ್ರರಂಗ ಮುಂದೆ ಬರಬೇಕು ಎಂದಾಗ ನಮ್ಮವರಿಂದಲೇ ತೊಂದರೆ ಆಗುತ್ತಿದೆ. ಹೊಸಬರಿಗೆ ಅವಕಾಶ ನೀಡಿ. ಇಷ್ಟ ಆಗಿಲ್ಲ ಎಂದಾದರೆ ಇಳಿಸಿ. ಮಾಫಿಯಾ ರೀತಿ ಆದರೆ ಹೇಗೆʼʼ ಎಂದು ಈ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿ ರಾಜೇಂದ್ರ ಸಿಂಗ್ ಬಾಬು ಪ್ರಶ್ನಿಸಿದ್ದರು.
ಇದನ್ನೂ ಓದಿ | ಕನ್ನಡ ಚಿತ್ರರಂಗಕ್ಕೆ ಒಂದೇ ಫಿಲಂ ಚೇಂಬರ್ ಇರಬೇಕು: ಭಾ. ಮಾ. ಹರೀಶ್ ಪ್ರತಿಪಾದನೆ