Site icon Vistara News

ಹರಿ ಕಥೆ ಅಲ್ಲ ಗಿರಿ ಕಥೆ | ಶೆಟ್ರು ಹೇಳಲಿದ್ದಾರೆ ಡೈರೆಕ್ಟ್ರ ಕಥೆ!

ಹರಿ ಕಥೆ ಅಲ್ಲ ಗಿರಿ ಕಥೆ

ಬೆಂಗಳೂರು: ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ಅವರು ನಟನೆ ಮತ್ತು ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ ಮುಂಬರುವ ಸಿನಿಮಾ ʼಹರಿ ಕಥೆ ಅಲ್ಲ ಗಿರಿ ಕಥೆ ʼಸಿನಿಮಾ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಆಗಿದೆ. ಜೂನ್‌ 23ರಂದು ತೆರೆ ಕಾಣಲಿದೆ ʼಹರಿ ಕಥೆ ಅಲ್ಲ ಗಿರಿ ಕಥೆ ʼ ಸಿನಿಮಾ.

ಈ ಸಿನಿಮಾದಲ್ಲಿ ಸಿನಿಮಾ ಕುರಿತ ಕಥೆಯೇ ಇರುವುದು ವಿಶೇಷ. ನಿರ್ದೇಶಕನಾಗಬೇಕೆಂಬುವ ಹಂಬಲ ಇರುವ ಗಿರಿ ಎಂಬ ವ್ಯಕ್ತಿಯ ಸುತ್ತ ಕಥೆ ಸಾಗಲಿದೆ. ಚಿತ್ರದ ಹಾಡು ಕೂಡ ಕಳೆದ ಎರಡು ವಾರಗಳ ಹಿಂದೆ ಔಟ್‌ ಆಗಿತ್ತು. ʼಜೂನಿಯರ್‌ ಮೋನಾಲಿಸಾʼ ಎಂಬ ಹಾಡನ್ನು ಯೋಗರಾಜ್‌ ಭಟ್‌ ರಿಲೀಸ್‌ ಮಾಡಿದ್ದರು. ಈ ಹಾಡಿಗೆ ವಾಸುಕಿ ವೈಭವ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ | ದಸರಾ ಹಬ್ಬಕ್ಕೆ ಬರಲಿದೆ ರಿಷಭ್‌ ಶೆಟ್ಟಿಯ ಕಾಂತಾರ, ಕಥೆ ಏನಿರಬಹುದು?

ಚಿತ್ರತಂಡ ಎರಡು ಪಾತ್ರಗಳನ್ನು ಈಗ ರಿವೀಲ್‌ ಮಾಡಿದೆ. ರಚನಾ ಇಂದರ್‌ ನಾಯಕಿಯಾಗಿ ʼಗಿರಿಜಾ ಥಾಮಸ್‌ʼ ಎಂಬ ಪಾತ್ರದ ಮೂಲಕ ಬಣ್ಣ ಹಚ್ಚಲಿದ್ದಾರೆ. ಅನಿರುದ್ಧ ಮಹೇಶ್‌ ʼ5D ಥಾಮಸ್‌ʼ ಆಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರಮೋದ್‌ ಶೆಟ್ಟಿ ಅವರ ಪಾತ್ರವನ್ನು ಕೂಡ ರಿವೀಲ್‌ ಮಾಡಿದ್ದರು ಚಿತ್ರತಂಡ.

ಚಿತ್ರರಂಗದಲ್ಲಿ ಸಾಕಷ್ಟು ಅನುಭವವಿರುವ ಹೊನ್ನವಳ್ಳಿ ಕೃಷ್ಣ ಅವರು ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗಕ್ಕೆ ನಿರ್ದೇಶಕನಾಗಲು ಬಂದ ಹುಡುಗ ಪಟ್ಟ ಸರ್ಕಸನ್ನು ಇದರಲ್ಲಿ ತೋರಿಸಿಕೊಟ್ಟಿದೆ. ಸಂದೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್‌ ಮಹೇಶ್‌ ಮತ್ತು ಕರಣ್‌ ಅನಂತ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 

ಅನಿರುದ್ಧ್‌ ಈ ಮೊದಲು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡುʼದಲ್ಲಿ ನಟಿಸಿದ್ದರು. ಇನ್ನು, ಕರಣ್‌ ಅನಂತ್‌ ‘ಕಥಾ ಸಂಗಮ’ ಸಿನಿಮಾದಲ್ಲಿ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಇದೀಗ ಇವರಿಬ್ಬರು ಸೇರಿಕೊಂಡು ‘ಹರಿ ಕಥೆ ಅಲ್ಲ ಗಿರಿ ಕಥೆ’ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಚನಾ ಇಂದರ್‌ ಹಾಗೂ ತಪಸ್ವಿನಿ ಪೂಣಚ್ಚ ಕಾಣಿಸಿಕೊಳ್ಳುತ್ತಿದ್ದಾರೆ. ರಚನಾ ಇಂದರ್‌ ʼಲವ್‌ 360ʼ ಸಿನಿಮಾದಲ್ಲಿ ಕೂಡ ನಟಿಸಿದ್ದು, ಸಿಡ್‌ ಶ್ರೀರಾಮ ಹಾಡಿದ್ದರು. ಈ ಸಾಂಗ್‌ ಕೂಡ ಔಟ್‌ ಆಗಿತ್ತು. ಲವ್‌ ಮಾಕ್ಟೆಲ್‌ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ನೀಡಿದ ರಚನಾ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮಾಡುತ್ತಿದ್ದಾರೆ. ಆಗಸ್ಟ್‌ 27ರಂದು ರಿಷಭ್ ಶೆಟ್ಟಿ ಅವರ ‌ʼಕಾಂತಾರಾʼ ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ | ‘ಗೋದ್ರಾʼ ಸಿನಿಮಾ ಟೈಟಲ್‌ ಚೇಂಜ್‌ ಆಯ್ತು ಡಿಯರ್‌ !

Exit mobile version