Site icon Vistara News

Hoysala Movie: ಕೋಟಿ ರೂ. ಬೆಲೆಯ ಟೊಯೋಟಾ ವೆಲ್ಫೈರ್ ಕಾರ್‌ ಗಿಫ್ಟ್‌ ನೀಡಿದ ʻಹೊಯ್ಸಳʼ ಸಿನಿಮಾ ನಿರ್ಮಾಪಕರು

1 Crore Rs. Hoysala movie producers gifted a valuable car

ಬೆಂಗಳೂರು: ಡಾಲಿ ಧನಜಂಜಯ್‌ ಅಭಿನಯದ ಹೊಯ್ಸಳ ಸಿನಿಮಾ (Hoysala Movie) ಮಾರ್ಚ್‌ 30ರಂದು ತೆರೆ ಕಂಡಿದೆ. ಇದೀಗ ಡಾಲಿ ಅವರಿಗೆ ನಿರ್ಮಾಪಕ ಕಾರ್ತಿಕ್ ಹಾಗೂ ಯೋಗಿ ಅವರು 1 ಕೋಟಿ ರೂ. ಬೆಲೆಯ ಟೊಯೋಟಾ ವೆಲ್ಫೈರ್ (toyota vellfire) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹೇಳಿಕೊಂಡಿದ್ದಾರೆ.

ಡಾಲಿ ತಮ್ಮ ಟ್ವೀಟ್‌ನಲ್ಲಿ ʻʻ25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗೆ ಧನ್ಯವಾದಗಳು. ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆʼʼಎಂದು ಬರೆದುಕೊಂಡಿದ್ದಾರೆ.

ಧನಂಜಯ್‌ ಪೋಸ್ಟ್‌

ಡಾಲಿ- ಅಮೃತಾ ನಟನೆಯ ಹೊಯ್ಸಳ’ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾಲಿ, ಅಮೃತಾ, ನವೀನ್ ಶಂಕರ್, ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಡಾಲಿ ಇದೀಗ ಕೋಟಿ ಕಾರಿನ ಒಡೆಯನಾಗಿದ್ದಾರೆ. ಕಾರಿನ ಜತೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಧನಂಜಯ್ ಹಂಚಿಕೊಂಡಿದ್ದಾರೆ. ಯೋಗಿ ಹಾಗೂ ಕಾರ್ತಿಕ್ ಕೂಡ ಜತೆಗಿದ್ದಾರೆ.

ಹೊಂಬಾಳೆ ಸಂಸ್ಥೆಯ ವಿಜಯ್‌ ಕಿರಗಂದೂರ್‌ ಅರ್ಪಿಸುವ, ಕೆ.ಆರ್‌.ಜಿ. ಸ್ಟುಡಿಯೋಸ್‌ ನಿರ್ಮಾಣ ಸಂಸ್ಥೆಯ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್‌ ಹಾಗೂ ಯೋಗಿ ಜಿ. ರಾಜ್‌ ಅವರು ಚಿತ್ರ ನಿರ್ಮಿಸಿದ್ದಾರೆ. ಕಾರ್ತಿಕ್‌ ಎಸ್‌. ಚಿತ್ರದ ಛಾಯಾಗ್ರಾಹಕರಾದರೆ, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ; Hoysala Movie: ಡಾಲಿ ಧನಂಜಯ್‌ ಅಭಿನಯದ ಹೊಯ್ಸಳ ಸಿನಿಮಾದ ಮೆಲೋಡಿ ಲವ್ ಸಾಂಗ್ ಔಟ್‌

ಧನಂಜಯ್‌ ಅವರು ಗುರುದೇವ್‌ ಪಾತ್ರಧಾರಿಯಾದರೆ, ಗಂಗಾ ಆಗಿ ಅಮೃತಾ ಅಯ್ಯಂಗಾರ್‌ ಬಣ್ಣ ಹಚ್ಚಿದ್ದಾರೆ. ಇನ್ನು ನವೀನ್‌ ಶಂಕರ್‌, ಅವಿನಾಶ್‌ ಸೇರಿ ಹಲವು ನಟರು ಸಿನಿಮಾದ ಭಾಗವಾಗಿದ್ದಾರೆ.

Exit mobile version