ನಟಿ ಪ್ರಣೀತಾ ಸುಭಾಷ್(Pranitha Subhash), ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಇದನ್ನೂ ಓದಿ: Pranitha Subhash: ಹಿಂದು ಆಚರಣೆಗಳು ಕೇವಲ ಪಿತೃಪ್ರಧಾನವಲ್ಲಎಂದ ನಟಿ ಪ್ರಣಿತಾ ಸುಭಾಷ್
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದೆ. ಈ ‘ಪ್ರಾಣ ಪ್ರತಿಷ್ಠಾ’ (Pran Pratistha-ಪ್ರತಿಷ್ಠಾಪನಾ ಸಮಾರಂಭ) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಪ್ರತಿಷ್ಠಾಪನಾ ಸಮಾರಂಭದ ನಂತರ ರಾಮ್ ಲಲ್ಲಾ (Lord Ram Lalla) ವಿಗ್ರಹವನ್ನು ರಾಮ ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ.
ಅಯೋಧ್ಯೆಯ ಶ್ರೀ ರಾಮಮಂದಿರ (Ram Mandir) ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲಿಸಿ 1 ಲಕ್ಷ ರೂ. ನಟಿ ನೀಡಿದ್ದಾರೆ. ಈ ಕುರಿತು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವೆಲ್ಲರೂ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಣೀತಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Pranitha Subhash : ಮೆರೂನ್ ಲೆಹೆಂಗಾದಲ್ಲಿ ಮಿಂಚಿದ ಪ್ರಣಿತಾ; ಲುಕ್‌ಗೆ ಫಿದಾ ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ಬಾಲಿವುಡ್‌ನ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಮಾಧುರಿ ದೀಕ್ಷಿತ್, ಅಕ್ಷಯ್ ಕುಮಾರ್, ಆಲಿಯಾ ಭಟ್, ಆಯುಷ್ಮಾನ್ ಕುರಾನ, ಅಜಯ್ ದೇವಗನ್, ಅನುಪಮ್ ಖೇರ್, ಸಂಜಯ್ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ. ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರೊಂದಿಗೆ ಚಿರಂಜೀವಿ ಅವರು ಕೂಡ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.