ಬೆಂಗಳೂರು: ‘ಪಠಾಣ್’ ಸಿನಿಮಾ ಯಶಸ್ಸಿನ ಬಳಿಕೆ ನಟಿ ದೀಪಿಕಾ ಪಡುಕೋಣೆ (Deepika Padukone) ಸಾಲು ಸಾಲು ಸಿನಿಮಾಗಳನ್ನು ಹೊಂದಿದ್ದಾರೆ. ಪ್ಯಾನ್-ಇಂಡಿಯಾ ಸಿನಿಮಾವಾದ ʻಪ್ರಾಜೆಕ್ಟ್ ಕೆʼ (Project K) ಚಿತ್ರದ ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಬಹು ತಾರಾಗಣವನ್ನು ಹೊಂದಿದೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 10 ಕೋಟಿ ರೂ. ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿನ ದಿನಗಳಲ್ಲಿ, ನಟಿ ಸಾಕಷ್ಟು ಜಾಗತಿಕ ಮನ್ನಣೆ ಗಳಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಐಷಾರಾಮಿ ಬ್ರ್ಯಾಂಡ್ ಎಂದು ಖ್ಯಾತಿ ಪಡೆದ ನಂತರ ನಟಿ ಫಿಫಾ ವಿಶ್ವಕಪ್ ಮತ್ತು ಪ್ಯಾರಿಸ್ ಫ್ಯಾಶನ್‌ನಲ್ಲಿ ಗುರುತಿಸಿಕೊಂಡಿದ್ದು, ಆಸ್ಕರ್ 2023ರಲ್ಲಿ (Oscars 2023) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈಗಾಗಲೇ ʻಪ್ರಾಜೆಕ್ಟ್ ಕೆʼ ಚಿತತಂಡ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಚಿತ್ರದ ಸೆಟ್‌ನಲ್ಲಿ ಗಾಯಗೊಂಡಿದ್ದರು. ಅವರು ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ, “ಹೈದರಾಬಾದ್‌ನಲ್ಲಿ ʻಪ್ರಾಜೆಕ್ಟ್ ಕೆʼ ಚಿತ್ರೀಕರಣದಲ್ಲಿ, ನನಗೆ ಗಾಯವಾಯಿತು, ಪಕ್ಕೆಲುಬಿನ ಕಾರ್ಟಿಲೆಜ್ ಮುರಿದಿದೆ, ಚಿತ್ರೀಕರಣ ರದ್ದುಗೊಂಡಿದೆ, ವೈದ್ಯರು ಸಲಹೆ ನೀಡಿದ್ದಾರೆʼ ಎಂದು ಹೇಳಿಕೊಂಡಿದ್ದರು. ಇದೀಗ ʻಪ್ರಾಜೆಕ್ಟ್ ಕೆʼಚಿತ್ರಕ್ಕೆ ದೀಪಿಕಾ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Deepika Padukone: ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ ದೀಪಿಕಾ: ಹಾಡಿ ಹೊಗಳಿದ ನೆಟ್ಟಿಗರು!
ಪ್ರಾಜೆಕ್ಟ್ ಕೆ
ʻಪ್ರಾಜೆಕ್ಟ್ ಕೆʼ ಸಿನಿಮಾದ ದೃಷ್ಟಿ ಮತ್ತು ಕಥಾವಸ್ತುವು ತುಂಬಾ ದೊಡ್ಡದಾಗಿದೆ. ಹಾಗಾಗಿ ತಯಾರಕರು ಇದನ್ನು 2 ಭಾಗದ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಮೊದಲ ಭಾಗವು ಈ ಸಿನಿಮಾ ಜಗತ್ತನ್ನು ಪರಿಚಯಿಸಿ, ಸಂಘರ್ಷವನ್ನು ಆರಂಭಿಸುತ್ತದೆ. ಬಾಹುಬಲಿ ಫ್ರಾಂಚೈಸ್‌ನಂತೆಯೇ ದ್ವಿತೀಯ ಭಾಗದಲ್ಲಿ ಇಡೀ ನಾಟಕವು ತೆರೆದುಕೊಳ್ಳಲಿದೆ. ಇದು ಭಾರತೀಯ ಚಿತ್ರರಂಗವು ಹಿಂದೆಂದೂ ಕಾಣದ ಸಂಘರ್ಷದ ಸಿನಿಮಾವಾಗಿರಲಿದೆ” ಎಂದು ಮೂಲವು ತಿಳಿಸಿದೆ.
ಸಿನಿಮಾದಲ್ಲಿ ಪ್ರಭಾಸ್ ಬೇರೆಯದ್ದೇ ರೀತಿಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲನೇ ಬಾರಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರಭಾಸ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ 2024ರಲ್ಲಿ ತೆರೆ ಕಾಣುವ ಸಾಧ್ಯತೆಯಿದೆ.