Site icon Vistara News

12th Fail Movie: ‘12th ಫೇಲ್’ ಸಿನಿಮಾ ಆಸ್ಕರ್‌ಗೆ ನಾಮನಿರ್ದೇಶನ!

12th Fail cinema

ಬೆಂಗಳೂರು: ‘12th ಫೇಲ್’ ಸಿನಿಮಾ (12th Fail Movie) ಸೂಪರ್‌ ಹಿಟ್‌ ಆಗಿದ್ದು ಗೊತ್ತೇ ಇದೆ. ವಿಧು ವಿನೋದ್ ಚೋಪ್ರಾ ನಿರ್ದೇಶನ ಮತ್ತು ವಿಕ್ರಾಂತ್ ಮೆಸ್ಸಿ ನಾಯಕನಾಗಿ ನಟಿಸಿರುವ ಚಿತ್ರ ಇದೀಗ ಸ್ವತಂತ್ರ ನಾಮನಿರ್ದೇಶನವಾಗಿ ಆಸ್ಕರ್‌ಗೆ ಸಲ್ಲಿಸಲ್ಪಟ್ಟಿದೆ. ವಿಕ್ರಾಂತ್ ಮೆಸ್ಸಿ ಸ್ವತಃ ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಕ್ರಾಂತ್ ಮೆಸ್ಸಿ ಅವರು ಸಿನಿಮಾ ಕುರಿತಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ʻʻನಾನು ಕೇವಲ 15 ವರ್ಷ ವಯಸ್ಸಿನವನಾಗಿದ್ದಾಗ ಚಿತ್ರರಂಗದಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ನನ್ನ ಕಾಲೇಜಿನ ಫೀಸ್‌ ತಂದೆಗೆ ತೊಂದರೆಯಾಗಬಾರದು ಎಂದು ಕೆಲಸ ಮಾಡಿದೆ. ನಾನು ಅವರಿಗೆ ಹೊರೆಯಾಗಲು ಬಯಸುವುದಿಲ್ಲʼʼ ಎಂದು ಉಲ್ಲೇಖಿಸಿದ್ದಾರೆ.

ಟಿವಿ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ, ಡ್ಯಾನ್ಸರ್ ಕೂಡ. ಶಿಯಾಮಕ್ ದಾವರ್ ಅವರ ಬಳಿ ತರಬೇತಿ ಪಡೆದಿದ್ದಾರೆ ಎಂತಲೂ ಹೇಳಿದರು.

ಇದನ್ನೂ ಓದಿ: Sports Movies: ಕ್ರಿಕೆಟ್‌ ಆಧಾರಿತ ಟಾಪ್‌ 10 ಬಾಲಿವುಡ್‌ ಚಿತ್ರಗಳಿವು

‘12th ಫೇಲ್’ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅಕ್ಟೋಬರ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಚಿತ್ರದಲ್ಲಿ ಮನೋಜ್ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ ಮತ್ತು ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. 12th ಫೇಲ್‍ ಚಿತ್ರ ಅನುರಾಗ್‍ ಪಾಠಕ್‍ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.

‘ಪರಿಂದಾ’, ‘1942 ಎ ಲವ್‍ ಸ್ಟೋರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ ಮುನ್ನಾಭಾಯ್, ತಾರೇ ಜಮೀನ್‌ ಪರ್‌, 3 ಈಡಿಯೆಟ್ಸ್‌ ಸಿನಿಮಾಗಳನ್ನು ನೀಡಿದ ಬಾಲಿವುಡ್‌ನ ವಿಧು ವಿನೋದ್‍ ಚೋಪ್ರಾ ಅವರೊಂದಿಗೆ ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ ರಾಜ್‍ ಒಡೆತನದ ಕೆಆರ್‌ಜಿ ಸ್ಟುಡಿಯೋಸ್‍ ಕೈಜೋಡಿಸಿತ್ತು.

Exit mobile version