Site icon Vistara News

15th BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಶಸ್ತಿ ಗೆದ್ದವರ ಪಟ್ಟಿ ಇದು!

15th Bengaluru International Film Festival Awards List

ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (15th BIFFES) ಜಗತ್ತಿನಾದ್ಯಂತ ವಿವಿಧ ದೇಶ-ಭಾಷೆಗಳ ಪ್ರದರ್ಶನದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ನಿರ್ದೇಶಕ ಎಂ.ಎಸ್​. ಸತ್ಯು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. . ಭಾರತೀಯ ಚಲನಚಿತ್ರ ಸ್ಪರ್ಧೆ, ಕನ್ನಡ ಚಲನಚಿತ್ರ ಸ್ಪರ್ಧೆ, ಏಷ್ಯನ್​ ಚಲನಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

ಕನ್ನಡ ಚಲನಚಿತ್ರ ಸ್ಪರ್ಧೆ

ನವೀನ್ ಶಂಕರ್ ಅಭಿನಯದ `ಕ್ಷೇತ್ರಪತಿ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನ ನೀಡಲಾಗಿದೆ. ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೂ ನೆಟ್​ಪ್ಯಾಕ್​ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ಏಷ್ಯನ್ ಚಿತ್ರ ಪ್ರಶಸ್ತಿ ವಿಭಾಗದಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ `ಮಿಥ್ಯ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ.

ಮೊದಲ ಅತ್ಯುತ್ತಮ ಸಿನಿಮಾ: ʻನಿರ್ವಾಣʼ (ನಿರ್ದೇಶನ: ಅಮರ್​ ಎಲ್​. ನಿರ್ಮಾಣ: ಕೆ ಮಂಜು ಅವಿನಾಶ್​ ಶೆಟ್ಟಿ) ಎರಡನೇ ಅತ್ಯುತ್ತಮ ಸಿನಿಮಾ: ʻಕಂದೀಲು (ನಿರ್ದೇಶನ, ನಿರ್ಮಾಣ: ಕೆ. ಯಶೋದಾ ಪ್ರಕಾಶ್​)

ಮೂರನೇ ಅತ್ಯುತ್ತಮ ಸಿನಿಮಾ: ʻಆಲ್​ಇಂಡಿಯಾ ರೇಡಿಯೊ (ನಿರ್ದೇಶನ: ರಾಮಸ್ವಾಮಿ. ನಿರ್ಮಾಣ: ದೇವಗಂಗಾ ಪ್ರೇಮ್ಸ್​)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಕ್ಷೇತ್ರಪತಿ (ನಿರ್ದೇಶನ: ಶ್ರೀಕಾಂತ್​ ಕಟಗಿ. ನಿರ್ಮಾಣ: ಅಶ್ರಗ ಕ್ರಿಯೇಷನ್ಸ್​)

ನೆಟ್​ಪ್ಯಾಕ್​ ತೀರ್ಪುಗಾರರ ಪ್ರಶಸ್ತಿ: ಸ್ವಾತಿ ಮುತ್ತಿನ ಮಳೆ ಹನಿಯೇ (ನಿರ್ದೇಶನ: ರಾಜ್​ ಬಿ. ಶೆಟ್ಟಿ. ನಿರ್ಮಾಣ: ರಮ್ಯ)

ಭಾರತೀಯ ಚಲನಚಿತ್ರ ಸ್ಪರ್ಧೆ

ಮೊದಲ ಅತ್ಯುತ್ತಮ ಸಿನಿಮಾ: ಶ್ಯಾಮ್ಚಿ ಆಯಿ (ನಿರ್ದೇಶನ: ಸುಜಯ್​ದಹಕೆ. ನಿರ್ಮಾಣ: ಪುಣೆ ಫಿಲ್ಮ್​ಕಂಪನಿ) ಎರಡನೇ ಅತ್ಯುತ್ತಮ ಸಿನಿಮಾ: ಅಯೋಥಿ: (ನಿರ್ದೇಶನ: ಮಂದಿರಾ ಮೂರ್ತಿ. ನಿರ್ಮಾಣ: ಆರ್​. ರವೀಂದ್ರನ್)​ಮೂರನೇ ಅತ್ಯುತ್ತಮ ಸಿನಿಮಾ: ಛಾವೆರ್​; (ನಿರ್ದೇಶನ: ತನು ಪಾಪಚ್ಚನ್​. ನಿರ್ಮಾಣ: ಅರುಣ್​ನಾರಾಯಣ) ಪ್ರೊಡಕ್ಷನ್ಸ್​ಫಿಪ್ರೆಸ್ಕಿ ಪ್ರಶಸ್ತಿ: ಶ್ಯಾಮ್ಚಿ ಆಯಿ : (ನಿರ್ದೇಶನ: ಸುಜಯ್​ದಹಕೆ. ನಿರ್ಮಾಣ: ಪುಣೆ ಫಿಲ್ಮ್​ಕಂಪನಿ)

ಇದನ್ನೂ ಓದಿ: Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಏಷ್ಯನ್​ ಚಲನಚಿತ್ರ ಸ್ಪರ್ಧೆ

ಮೊದಲ ಅತ್ಯುತ್ತಮ ಸಿನಿಮಾ: ಇನ್ಶಾಅಲ್ಲಾ ಎ ಬಾಯ್​ (ನಿರ್ದೇಶನ: ಅಮ್ದಜ್​ ಅಲ್​ ರಶೀದ್​. ನಿರ್ಮಾಣ: ಇಮೇಜಿನೇರಿಯಂ ಫಿಲ್ಮ್ಸ್​, ಜಾರ್ಜಸ್​ ಫಿಲ್ಮ್ಸ್​)

ಎರಡನೇ ಅತ್ಯುತ್ತಮ ಸಿನಿಮಾ: ಸ್ಥಳ್​ (ನಿರ್ದೇಶನ: ಜಯಂತ್​ ದಿಗಂಬರ್​ ಸೋಮಾಲ್ಕರ್​. ನಿರ್ಮಾಣ: ಧುನ್​) ಮೂರನೇ ಅತ್ಯುತ್ತಮ ಸಿನಿಮಾ: ಸಂಡೇ (ನಿರ್ದೇಶನ: ಶೋಕಿರ್​ ಕೊಲಿಕೊಬ್​. ನಿರ್ಮಾಣ: ಫಿರ್ದವಾಸ್​ ಅಬ್ದುಕೊಲಿಕೊವ್​)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಮಿಥ್ಯ (ನಿರ್ದೇಶನ: ಸುಮಂತ್​ ಭಟ್​. ನಿರ್ಮಾಣ: ಪರಂವಃ ಪಿಕ್ಚರ್ಸ್​)

ಫೆಬ್ರವರಿ 29ರಿಂದ ಮಾರ್ಚ್ 7ರ ವರೆಗೆ ಸುಮಾರು ಎಂಟು ದಿನಗಳ ಕಾಲ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆದಿದೆ.ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ಇದರಲ್ಲಿ 50 ರಾಷ್ಟ್ರಗಳ ಸುಮಾರು 180 ಸಿನಿಮಾಗಳು ಪ್ರದರ್ಶನಗೊಂಡಿದ್ದವು.

ನಟ ಡಾಲಿ ಧನಂಜಯ್‌ ರಾಯಭಾರಿ

ಇತ್ತೀಚೆಗೆ 2023-24ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ಡಾಲಿ ಧನಂಜಯ್‌ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಚಲನಚಿತ್ರೋತ್ಸವದ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ʼʼಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆʼʼ ಎಂದು ಹೇಳಿದ್ದರು.

Exit mobile version