ಟಾಲಿವುಡ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರ ಶಾಕುಂತಲಂ ಸಿನಿಮಾ ಬಿಡುಗಡೆಯಾಗಿದ್ದು, ಅದು ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಈ ಮಧ್ಯೆ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. 16ವರ್ಷಗಳ ಹಿಂದೆ ಸಮಂತಾ ಹೇಗಿದ್ದರು ಎಂಬುದನ್ನು ನೋಡಬೇಕು ಎಂದರೆ ನೀವು ಈ ಫೋಟೋವನ್ನು ನೋಡಬೇಕು. ಈ ಫೋಟೋ ಸ್ವಲ್ಪ ಬ್ಲ್ಯಾಕ್ ಆ್ಯಂಡ್ ವೈಟ್ ಆಗಿದೆ. ಈ ಫೋಟೋದಲ್ಲಿ ಸಮಂತಾ ಒಂದು ಮಂಚದ ಮೇಲೆ ಕುಳಿತಿದ್ದಾರೆ. ಕೂದಲಿನಲ್ಲಿ ಕೈ ಇಟ್ಟುಕೊಂಡು, ಮಾದಕವಾಗಿ ಎಲ್ಲೋ ನೋಟ ಬೀರುತ್ತಿದ್ದಾರೆ. ಒಟ್ನಲ್ಲಿ ತುಂಬ ಮುದ್ದಾಗಿ ಕಾಣಿಸುತ್ತಿದ್ದಾರೆ. ಫೋಟೋ ಶೇರ್ ಮಾಡಿಕೊಂಡಿರುವ ಅವರು ‘ನನ್ನ 16ವರ್ಷಗಳ ಹಿಂದಿನ ಫೋಟೋ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಸಮಂತಾ ಅನಾರೋಗ್ಯದ ಸುದ್ದಿ ಜೋರಾಗಿಯೇ ಹಬ್ಬಿತ್ತು. ನಾಗಚೈತನ್ಯ ಅವರಿಂದ ಡಿವೋರ್ಸ್ ಪಡೆದು, ದಾಂಪತ್ಯ ಜೀವನದಿಂದ ದೂರವಾದ ಬೆನ್ನಲ್ಲೇ ಅವರು ಕೆಲ ದಿನಗಳ ಕಾಲ ಕಣ್ಮರೆಯಾಗಿದ್ದರು. ಸಮಂತಾಗೆ ಗಂಭೀರವಾದ ಕಾಯಿಲೆ ಇದೆ. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರಣಕ್ಕೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು. ಈಗ ಸಮಂತಾ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದಾರೆ. ಅಭಿಮಾನಿಗಳಿಗೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸಮಂತಾಗೆ 35ವರ್ಷ. 16ವರ್ಷದ ಹಿಂದಿನ ಫೋಟೋ ಎಂದರೆ ಆಗ ಅವರಿಗೆ 19ವರ್ಷ. ಸಮಂತಾ ತಮ್ಮ ಪದವಿ ಪೂರ್ವದಲ್ಲಿ ಇದ್ದ ಕಾಲವದು. ಆಗ ಅವರು ಮಾಡೆಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಸಿಟಾಡೆಲ್ ವೆಬ್ಸರಣಿ ಪ್ರೀಮಿಯರ್ ಶೋ ನಿಮಿತ್ತ ಸಮಂತಾ ರುತ್ ಪ್ರಭು ಇತ್ತೀಚೆಗೆ ಲಂಡನ್ಗೆ ತೆರಳಿದ್ದರು. ಅಲ್ಲಿ ತೆಗೆಯಲಾದ ಹಲವು ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವರುಣ್ ಧವನ್ ಮತ್ತು ಇತರ ಕಲಾವಿದರ ಜತೆಗೂ ಅವರು ಫೋಸ್ ಕೊಟ್ಟಿದ್ದಾರೆ.