Site icon Vistara News

Dil To Pagal Hai Film | 25 ವರ್ಷ ಪೂರೈಸಿದ ʻದಿಲ್‌ ತೋ ಪಾಗಲ್‌ ಹೈʼ!

Dil To Pagal Hai Film

ಬೆಂಗಳೂರು: ಶಾರುಖ್‌ ಖಾನ್‌, ಮಾಧುರಿ ದೀಕ್ಷಿತ್‌ ಮತ್ತು ಕರಿಷ್ಮಾ ಕಪೂರ್‌ (Dil To Pagal Hai Film ) ಮೂವರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿರುವ ʻʻದಿಲ್‌ ತೊ ಪಾಗಲ್‌ ಹೈʼʼಚಿತ್ರ 25 ವರ್ಷ ಪೂರ್ಣಗೊಂಡಿದೆ. 1997ರ ಅಕ್ಟೋಬರ್‌ 30ರಂದು ಚಿತ್ರ ಬಿಡುಗಡೆಗೊಂಡಿದ್ದು, ಹೊಸ ಇತಿಹಾಸವನ್ನು ಸೃಷ್ಟಿ ಮಾಡಿತ್ತು. ಟ್ರಯಾಂಗಲ್‌ ಲವ್‌ ಸ್ಟೋರಿ ಮೂಲಕ ಗಮನ ಸೆಳೆದಿದ್ದ ಈ ಸಿನಿಮಾ, ಹಾಡುಗಳಿಂದ ಸಖತ್‌ ಫೇಮಸ್‌ ಆಗಿತ್ತು.

ಯಶ್ ಫಿಲಂ ಬ್ಯಾನರ್‌ನಲ್ಲಿ ದಿವಂಗತ ಯಶ್‌ ಚೋಪ್ರಾ ನಿರ್ದೇಶಿಸಿದ ಈ ಚಿತ್ರ ಬಾಲಿವುಡ್ ಇದುವರೆಗೆ ಕಂಡಿರುವ ಅತ್ಯಂತ ಪ್ರಸಿದ್ಧವಾದ ತ್ರಿಕೋನ ಪ್ರೇಮಕಥೆಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿದೆ. ಚಿತ್ರವು ಬಿಡುಗಡೆಯಾಗಿ 25 ವರ್ಷಗಳಾಗುತ್ತಿದ್ದಂತೆ, ಇದುವರೆಗೆ ಹೇಳಲಾದ ಅತ್ಯುತ್ತಮ ಪ್ರೇಮಕಥೆಗಳಲ್ಲಿ ಒಂದಾಗಿದೆ. ಪ್ರೀತಿ ಎಂದರೆ ಒಬ್ಬ ವ್ಯಕ್ತಿಯನ್ನು ಇಷ್ಟ ಪಡುವುದು ಅಲ್ಲ. ಮರೆತು ಬಿಡಬೇಕು, ಸ್ನೇಹಕ್ಕೂ ಅರ್ಥವಿದೆ ಎಂಬ ಪಾಠವನ್ನು ಈ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ | Modi Birthday | ಒಂದು ದಿನವಾದರೂ ರಜೆ ತೆಗೆದುಕೊಳ್ಳಿ ಎಂಬ ಸಲಹೆ ಜತೆ ಮೋದಿಗೆ ಶುಭ ಕೋರಿದ ಶಾರುಖ್‌ ಖಾನ್‌

ಯಾವತ್ತು ನಂಬಿಕೆ ಕಳೆದುಕೊಳ್ಳಬಾರದು!
ಚಿತ್ರವು ಪ್ರೀತಿ, ಸ್ನೇಹ ಮತ್ತು ಸಂಬಂಧಗಳ ತ್ಯಾಗದ ಬಗ್ಗೆ ಒಳಗೊಂಡಿದೆ. ಪ್ರೀತಿಯ ವಿಷಯಕ್ಕೆ ಬಂದಾಗ, ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ತಾಳ್ಮೆ ಮತ್ತು ಸರಿಯಾದ ಸಮಯಕ್ಕಾಗಿ ಕಾಯುವುದು ಎಂಬ ಸಂದೇಶ ಈ ಸಿನಿಮಾದಲ್ಲಿದೆ.


ಈ ಸಿನಿಮಾ ಪ್ರೇಕ್ಷರನ್ನು ಆವರಿಸಿಕೊಳ್ಳುವ ರೀತಿಯೇ ಬೇರೆ. ಆಗಿನ ಕಾಲಕ್ಕೆ 60ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಉತ್ತಮ್‌ ಸಿಂಗ್‌ ಸಂಗೀತ, ಮನಮೋಹನ್ ಸಿಂಗ್‌ ಛಾಯಾಗ್ರಹಣ ಚಿತ್ರಕ್ಕಿತ್ತು. ಅಕ್ಷಯ್‌ ಕುಮಾರ್‌ ಕೂಡ ಬಣ್ಣ ಹಚ್ಚಿದ್ದರು.

ದಿಲ್ ತೋ ಪಾಗಲ್ ಹೈ ಸಿನಿಮಾ ಅನೇಕ ಪ್ರಶ್ತಿಗಳನ್ನು ಪಡೆದುಕೊಂಡಿತ್ತು. ಕರಿಷ್ಮಾ ಕಪೂರ್‌ ಅವರಿಗೆ ಅತ್ಯುತ್ತಮ ಪೋಷಕ ನಟಿ ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಶಿಯಾಮಕ್ ದಾವರ್‌ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರು. 43ನೇ ಫಿಲಂ ಫೇರ್‌ನಲ್ಲಿ 11 ವಿಭಾಗಗಳಲ್ಲಿ ನಾಮಿನೇಟ್‌ ಆಗಿತ್ತು.

ಇದನ್ನೂ ಓದಿ | 20 Years Of Devdas | 20 ವರ್ಷ ಪೂರೈಸಿದ ದೇವದಾಸ್‌ ಸಿನಿಮಾ: ಐಶ್‌ ಕಿವೀಲಿ ರಕ್ತ ಬಂದಿತ್ತಂತೆ!

Exit mobile version