Site icon Vistara News

ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್‌ ನೈಟ್ಸ್‌

happy birthday karan johar

ಬುಧವಾರ ರಾತ್ರಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಅದ್ಧೂರಿ ಪಾರ್ಟಿಯಲ್ಲಿ ಕರಣ್ ಜೋಹರ್ 50ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮ ಆತ್ಮೀಯರ ಜತೆಗೆ ಆಚರಿಸಿಕೊಂಡರು.

ಕರಣ್ ಜೋಹರ್

ಬಾಲಿವುಡ್‌ನಲ್ಲಿರುವ ಎಲ್ಲರೂ ಅಲ್ಲಿದ್ದರು. ಚಿತ್ರನಿರ್ಮಾಪಕ ಕರಣ್ ಜೋಹರ್ ಮೇ 25ರಂದು 50ನೇ ವರ್ಷಕ್ಕೆ ಕಾಲಿಟ್ಟರು. ಸಲ್ಮಾನ್ ಖಾನ್, ಶಾರುಖ್ ಖಾನ್, ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ನೀತು ಕಪೂರ್ ಮತ್ತು ಸೇರಿದಂತೆ ಅನೇಕ ಎಲ್ಲಾ ದಿಗ್ಗಜರು ಅಲ್ಲಿ ಇದ್ದರು. ಪಾರ್ಟಿ ಯಲ್ಲಿ ಫೋಟೋಗಳು ಮನಸೂರೆಗೊಳ್ಳುತ್ತಿವೆ. ಪಾರ್ಟಿಯಲ್ಲಿ ಎಲ್ಲರೂ ಸಿಕ್ಕಾಪಟ್ಟೆ ಮೋಜು ಮಾಡಿದ್ದಾರೆ.

ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ರಿಪ್ಡ್‌ ಬ್ಲೂ ಜೀನ್ಸ್‌ನೊಂದಿಗೆ ಆಗಮಿಸಿದರು.

ಸಲ್ಮಾನ್ ಖಾನ್

ಕಳೆದ ಡಿಸೆಂಬರ್‌ನಲ್ಲಿ ಮದುವೆಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹಾಗು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮನಮೋಹಕ ಜೋಡಿಯ ಪ್ರವೇಶವನ್ನು ಮಾಡಿದರು. ಅಭಿಷೇಕ್ ಮತ್ತು ಕರಣ್ ಜೋಹರ್ ಅವರು ಬಾಲ್ಯದಿಂದಲೂ ಸ್ನೇಹಿತರು.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹಾಗು ಐಶ್ವರ್ಯಾ ರೈ ಮತ್ತು ಅಭಿಷೇಕ್

ಕರಣ್ ಜೋಹರ್ ಅವರ ಆತ್ಮೀಯ ಸ್ನೇಹಿತೆ ಗೌರಿ ಖಾನ್ ತನ್ನ ಪತಿ ಶಾರುಖ್ ಖಾನ್ ಇಲ್ಲದೆ ರೆಡ್ ಕಾರ್ಪೆಟ್ ಮೇಲೆ ನಡೆದರು. ಪಾರ್ಟಿಯಲ್ಲಿ ಕಾಜೋಲ್ ಮತ್ತು ಅನುಷ್ಕಾ ಶರ್ಮಾ ಸಹ ಇದ್ದರು.

ಗೌರಿ ಖಾನ್, ಕಾಜೋಲ್ ಮತ್ತು ಅನುಷ್ಕಾ ಶರ್ಮಾ

ಬಹು ನಿರೀಕ್ಷಿತ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದ ತಾರೆಯರು ಪ್ಲಸ್-ಒನ್‌ಗಳೊಂದಿಗೆ ಆಗಮಿಸಿದರು – ಕರಣ್ ಜೋಹರ್ ಅವರ ಆಪ್ತ ಸ್ನೇಹಿತೆ ಕರೀನಾ ಕಪೂರ್ ಅವರ ಪತಿ ಸೈಫ್ ಅಲಿ ಖಾನ್ ಮತ್ತು ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ಹಾಜರಿದ್ದರು.

ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್

ರಣಬೀರ್ ಕಪೂರ್ ಅವರ ತಾಯಿ ನೀತು ಮತ್ತು ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ, ಮುಂಬರುವ ಚಿತ್ರ ಜುಗ್‌ಜುಗ್‌ ಜೀಯೋದಲ್ಲಿ ನೀತು ಅವರ ಜತೆ ಸಹ-ನಟಿಯರು ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಪೋಸ್ ನೀಡಿದರು.

ರಣಬೀರ್ ಕಪೂರ್, ತಾಯಿ ಮತ್ತು ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ

ಕರಣ್ ಜೋಹರ್ ಅವರ ಕೆಲವು ಆಪ್ತ ಸ್ನೇಹಿತರು ಪಾರ್ಟಿಗೆ ಆಗಮಿಸಿದರು ಶ್ವೇತಾ ಬಚ್ಚನ್, ಫರಾ ಖಾನ್ ಮತ್ತು ಮನೀಶ್ ಮಲ್ಹೋತ್ರಾ.

ಶ್ವೇತಾ ಬಚ್ಚನ್, ಫರಾ ಖಾನ್ ಮತ್ತು ಮನೀಶ್ ಮಲ್ಹೋತ್ರಾ.

ಒಡಹುಟ್ಟಿದವರಾದ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಒಟ್ಟಿಗೆ ಕಾಣಿಸಿಕೊಂಡರು. ಶನಾಯಾ ಅವರ ಸೋದರಸಂಬಂಧಿ ಜಾನ್ವಿ ಕಪೂರ್ ಕೂಡ ಹಾಜರಿದ್ದರು.

ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಮತ್ತು ಜಾನ್ವಿ ಕಪೂರ್

ಕರಣ್ ಜೋಹರ್ ರಾಣಿ ಮುಖರ್ಜಿ ಜತೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಇಲ್ಲದೆ ಮಲೈಕಾ ಅರೋರಾ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಕರಣ್ ಜೋಹರ್ ರಾಣಿ ಮುಖರ್ಜಿ ಮತ್ತು ಮಲೈಕಾ ಅರೋರಾ

ಪ್ರೀತಿ ಜಿಂಟಾ ಮತ್ತು ಪತಿ ಜೀನ್ ಗುಡೆನೊಫ್ ದಂಪತಿ, ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶಮುಖ್, ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಮತ್ತು ಇತರರು ಬಂದಿದ್ದರು.

ಪ್ರೀತಿ ಜಿಂಟಾ ಪತಿ ಜೀನ್ ಗುಡೆನೊಫ್, ಜೆನಿಲಿಯಾ ಡಿಸೋಜಾ ಪತಿ ರಿತೇಶ್ ದೇಶಮುಖ್, ನೇಹಾ ಧೂಪಿಯಾ ಪತಿ ಅಂಗದ್ ಬೇಡಿ

ಕರಣ್ ಜೋಹರ್ ಅವರ ಹಳೆಯ ಸ್ನೇಹಿತೆ ಟ್ವಿಂಕಲ್ ಖನ್ನಾ ಅವರು ಇತ್ತೀಚೆಗೆ COVID ನಿಂದ ಚೇತರಿಸಿಕೊಂಡ ಪತಿ ಅಕ್ಷಯ್ ಕುಮಾರ್ ಇಲ್ಲದೆ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಸೋನಾಲಿ ಬೇಂದ್ರೆ, ಟಬು, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ ಮತ್ತು ರವೀನಾ ಟಂಡನ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.


ಟ್ವಿಂಕಲ್, ಟಬು ಮತ್ತು ಸೋನಾಲಿ
ಮಾಧುರಿ ಮತ್ತು ಕುಟುಂಬ, ಜೂಹಿ ಮತ್ತು ರವೀನಾ

ಪಾರ್ಟಿಯಲ್ಲಿ ಪ್ರಸ್ತುತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರನ್ನು ನಿರ್ದೇಶಿಸುತ್ತಿರುವ ಕರಣ್ ಜೋಹರ್‌ ತಮ್ಮ ಹುಟ್ಟುಹಬ್ಬದಂದೇ ಈ ಚಿತ್ರವನ್ನು ಘೋಷಿಸಿದರು.

ಇದನ್ನೂ ಓದಿ| ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು

Exit mobile version