Site icon Vistara News

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡ ಅಜಯ್‌ ದೇವಗನ್‌, ಸೂರ್ಯ

Ajay Devgan And Surya

ನವ ದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು (ಜು.22) ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಘೋಷಣೆಯಾಗಿದೆ. 2020ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಚಲನಚಿತ್ರೋತ್ಸವಗಳ ನಿರ್ದೇಶನಾಲಯ ಇಂದು ಸಮಾರಂಭವನ್ನು ಆಯೋಜಿಸಿ, ಪ್ರಶಸ್ತಿ ಪ್ರಕಟಿಸಿದೆ. ಈ ಬಾರಿಯ ಅತ್ಯುತ್ತಮ ಕಥಾಚಿತ್ರವಾಗಿ ತಮಿಳು ಚಲನಚಿತ್ರ ಸೂರರೈ ಪೊಟ್ರು ಹೊರಹೊಮ್ಮಿದೆ. ಹಾಗೇ, ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮಿಳು ನಟ ಸೂರ್ಯ ಮತ್ತು ಬಾಲಿವುಡ್‌ ನಟ ಅಜಯ್‌ ದೇವಗನ್‌ ಹಂಚಿಕೊಂಡಿದ್ದಾರೆ. ಹಾಗೇ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮಿಳು ನಟಿ ಅಪರ್ಣಾ ಬಾಲಮುರಳಿ ಗೆದ್ದುಕೊಂಡಿದ್ದಾರೆ.

ಪ್ರಶಸ್ತಿ ಗೆದ್ದವರ ಲಿಸ್ಟ್‌ ಇಲ್ಲಿದೆ
ಅತ್ಯುತ್ತಮ ಚಿತ್ರ:
ಸೂರರೈ ಪೊಟ್ರು (ತಮಿಳು)
ಅತ್ಯುತ್ತಮ ನಟರು: ಅಜಯ್‌ ದೇವಗನ್‌ (ತಾನಾಜಿ; ದಿ ಸನ್‌ಸಂಗ್‌ ವಾರಿಯರ್‌) ಮತ್ತು ಸೂರ್ಯ (ಸೂರರೈ ಪೊಟ್ರು)
ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು)
ಅತ್ಯುತ್ತಮ ನಿರ್ದೇಶನ: ಎಕೆ ಅಯ್ಯಪ್ಪನುಮ್ ಕೊಶಿಯುಮ್ (ಮಲಯಾಳಂ ಸಿನಿಮಾ), ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್‌ ಕೆ.ಆರ್‌.
ಅತ್ಯುತ್ತಮ ಮಕ್ಕಳ ಚಿತ್ರ: ಸುಮಿ (ಮರಾಠಿ); ನಿರ್ಮಾಪಕ: ಹರ್ಷಲ್‌ ಕಾಮತ್‌, ನಿರ್ದೇಶಕ: ಅಮೋಲ್‌ ವಸಂತ್‌ ಗೋಲೆ
ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ: ಸಂಚಾರಿ ವಿಜಯ್‌ ಅಭಿಯನದ ಕನ್ನಡ ಸಿನಿಮಾ ʼತಲೆದಂಡʼ
ಸಾಮಾಜಿಕ ಸಮಸ್ಯೆಗಳ ಬಗೆಗಿನ ಅತ್ಯುತ್ತಮ ಚಿತ್ರ: ಫ್ಯುನರಲ್‌ (ಮರಾಠಿ)
ಸಂಪೂರ್ಣ ಮನರಂಜನೆ ಒದಗಿಸುವ ಜನಪ್ರಿಯ ಚಿತ್ರ: ತಾನಾಜಿ; ದಿ ಅನ್‌ಸಂಗ್‌ ವಾರಿಯರ್‌
ಚೊಚ್ಚಲ ನಿರ್ದೇಶನಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿ: ಮಂಡೇಲಾ (ತಮಿಳು ಸಿನಿಮಾ)

ಅತ್ಯುತ್ತಮ ಚಿತ್ರಕಥೆ: ಸೂರರೈ ಪೊಟ್ರು (ಚಿತ್ರಕಥೆ ಬರೆದವರು: ಶಾಲಿನಿ ಉಷಾ ನಾಯರ್ & ಸುಧಾ ಕೊಂಗರ) ಮತ್ತು ಮಂಡೇಲಾ ( ಸಂಭಾಷಣೆ ಮತ್ತು ಚಿತ್ರಕಥೆ ಮಡೋನ್ ಅಶ್ವಿನ್)-ಇವೆರಡೂ ತಮಿಳು ಸಿನಿಮಾಗಳು.
ಅತ್ಯುತ್ತಮ ಹಿನ್ನೆಲೆ ಗಾಯಕಿ: ನಾಂಚಮ್ಮ (ಎಕೆ ಅಯ್ಯಪ್ಪನುಮ್ ಕೊಶಿಯುಮ್-ಮಲಯಾಳಂ ಸಿನಿಮಾ)
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್‌ ದೇಶ್‌ಪಾಂಡೆ (ಮಿ.ವಸಂತರಾವ್‌-ಮರಾಠಿ ಸಿನಿಮಾ)

ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು
ಅತ್ಯುತ್ತಮ ತಮಿಳು ಚಲನಚಿತ್ರ: ಶಿವರಂಜನಿಯುಂ ಇನ್ನುಂ ಸಿಲ ಪೆಂಗಲ್ಲುಂ
ಅತ್ಯುತ್ತಮ ತೆಲುಗು ಸಿನಿಮಾ: ಕಲರ್‌ ಫೋಟೋ
ಮಲಯಾಳಂ ಸಿನಿಮಾ: ತಿಂಕಲಶ್ಚ ನಿಶ್ಚಯಮ್
ಅತ್ಯುತ್ತಮ ತುಳು ಚಿತ್ರ: ಜೀಟಿಗೆ

ಉತ್ತಮ ಕೊರಿಯಾಗ್ರಫಿ: ನಾಟ್ಯಮ್‌ (ತೆಲುಗು)
ಅತ್ಯುತ್ತಮ ಸಾಹಿತ್ಯ: ಸೈನಾ (ಹಿಂದಿ)
ಅತ್ಯುತ್ತಮ ಸಂಗೀತ ನಿರ್ದೇಶನ: ಅಲಾ ವೈಕುಂಠಪುರಮುಲೂ (ತೆಲುಗು) – ಸಂಗೀತ ನಿರ್ದೇಶಕ : ತಮನ್ ಎಸ್.

ಇದನ್ನೂ ಓದಿ: 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ

Exit mobile version