ಬೆಂಗಳೂರು: ಭಾರತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು (ಆಗಸ್ಟ್ 16) ರಂದು ಘೋಷಣೆ ಆಗಲಿದೆ. ಕನ್ನಡದ ‘ಕಾಂತಾರ’ ಸಿನಿಮಾ ಈ ಬಾರಿ ಪ್ರಶಸ್ತಿ ಪಟ್ಟಿಯಲ್ಲಿದೆ. ಮಲಯಾಳಂನ ಮಮ್ಮುಟಿ ನಟನೆಯ ಕೆಲ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಮಧ್ಯಾಹ್ನ ಮೂರು ಗಂಟೆಗೆ ಪ್ರಶಸ್ತಿ ಪಟ್ಟಿ ಘೋಷಣೆ ಆಗಲಿದೆ. 2022 ಜನವರಿಯಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಆಗಿರುವ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿವೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ವಿಜೇತ ಪಟ್ಟಿಯನ್ನು ಪ್ರಕಟಿಸಲಿದೆ. ಮಮ್ಮುಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗಾಗಿ ರೇಸ್‌ನಲ್ಲಿದ್ದಾರೆ. 70 ನೇ ರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ 2024 ವಿಜೇತರ ಹೆಸರು ಪಟ್ಟಿಯನ್ನು ಶುಕ್ರವಾರ (ಆಗಸ್ಟ್ 16) ಘೋಷಿಸಲಾಗುತ್ತದೆ. ವಿಶೇಷವಾಗಿ ಈ ಬಾರಿ ಅತ್ಯುತ್ತಮ ನಟ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಕನ್ನಡದ ‘ಕಾಂತಾರ’ ಸಿನಿಮಾ ಈ ಬಾರಿ ಪ್ರಶಸ್ತಿ ಪಟ್ಟಿಯಲ್ಲಿದೆ. ಅತ್ಯುತ್ತಮ ಸಿನಿಮಾ, ಸಂಗೀತ, ಎಡಿಟಿಂಗ್, ಪ್ರೊಡಕ್ಷನ್ ಡಿಸೈನ್, ಅತ್ಯುತ್ತಮ ನಟನೆ, ಅತ್ಯುತ್ತಮ ಸಿನಿಮಾ ಮತ್ತು ನಿರ್ದೇಶನ, ವಸ್ತ್ರ ವಿನ್ಯಾಸ ಇನ್ನೂ ಕೆಲವು ವಿಭಾಗಗಳಲ್ಲಿ ‘ಕಾಂತಾರ’ ಸಿನಿಮಾ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ. ʻನನ್ಪಕಲ್ ನೆರತು ಮಯಕ್ಕಮ ’ ಮತ್ತು ‘ರೋರ್ಸ್ಚಾಚ್’ ಚಿತ್ರಗಳಿಗೆ ಮಮ್ಮುಟ್ಟಿ ಹೆಸರನ್ನು ಆಯ್ಕೆ ಮಾಡಲಾಗಿದೆ
‘ಕೆಜಿಎಫ್ 2’ ಸಿನಿಮಾ ಸಹ ಪ್ರಶಸ್ತಿ ಪಟ್ಟಿಯಲ್ಲಿದ್ದು ಅತ್ಯುತ್ತಮ ಸಾಹಸ, ಅತ್ಯುತ್ತಮ ನಟನೆ, ಪ್ರೊಡಕ್ಷನ್ ಡಿಸೈನ್, ವಿಎಫ್ಎಕ್ಸ್, ಹಿನ್ನೆಲೆ ಸಂಗೀತ ಇನ್ನೂ ಕೆಲವು ವಿಭಾಗಗಳಲ್ಲಿ ಇದೆ. ಪೃಥ್ವಿ ಕೋಣನೂರು ಅವರ ಸಿನಿಮಾ ‘ಹದಿನೇಳೆಂಟು’, ‘ಕೋಳಿ ಎಸ್ರು’, ‘ಪೆದ್ರೊ’, 19.20.21, ‘ಫೋಟೊ’, ‘ವಿರಾಟಪುರದ ವಿರಾಗಿ’, ‘ನಾನು ಕುಸುಮ’ ಇನ್ನೂ ಕೆಲವು ಸಿನಿಮಾಗಳು ಇವೆ.
ಇದನ್ನೂ ಓದಿ: Duniya Vijay: ಗಣೇಶ್ ಸಿನಿಮಾ ಹಿಂದಿಕ್ಕಿತೇ ‘ಭೀಮ’? ದುನಿಯಾ ವಿಜಯ್ ಸಿನಿಮಾ ಭರ್ಜರಿ ಕಲೆಕ್ಷನ್!
ಪೃಥ್ವಿರಾಜ್ ಸುಕುಮಾರ್ ನಟನೆಯ ‘ಜನ ಗಣ ಮನ’, ಮಲಯಾಳಂ ನ ಇತರೆ ಕೆಲವು ಸಿನಿಮಾಗಳಾದ, ‘ರೊರಸಾಚ್’, ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’, ‘ಜಯ ಜಯ ಜಯ ಹೇ’, ‘ಪುಜು’, ‘ಅರಿಪ್ಪು’, ‘ಸಲ್ಯೂಟ್’ ಇನ್ನೂ ಕೆಲವು ಸಿನಿಮಾಗಳಿವೆ. ‘ಸೀತಾ ರಾಮಂ’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿದ್ದು ಸ್ಪರ್ಧೆಯಲ್ಲಿದೆ.
69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024 ಗಾಗಿ, ತೆಲುಗು ಚಿತ್ರ ಪುಷ್ಪ: ದಿ ರೈಸ್‌ಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. ಮತ್ತು ಅತ್ಯುತ್ತಮ ನಟಿ ಗೌರವವನ್ನು ಆಲಿಯಾ ಮತ್ತು ಕೃತಿ ಗೆದ್ದಿದ್ದರು. ಮೂವರೂ ನಟರಿಗೆ ಇದು ಮೊದಲ ರಾಷ್ಟ್ರೀಯ ಪ್ರಶಸ್ತಿ.