Site icon Vistara News

777 Charlie : ಕ್ಯೂಟ್‌ ಜರ್ನಿ ಬಗ್ಗೆ ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌

777 Charlie

ಬೆಂಗಳೂರು : ರಕ್ಷಿತ್‌ ಶೆಟ್ಟಿ ಅವರ ಬಹುಭಾಷಾ ಚಿತ್ರ 777 ಚಾರ್ಲಿ (777 Charlie) ಸಾಕಷ್ಟು ನಿರೀಕ್ಷೆಯನ್ನು ಅಭಿಮಾನಿಗಳಲ್ಲಿ ಹುಟ್ಟು ಹಾಕುತ್ತಿದೆ. ಕರ್ನಾಟಕ ಮತ್ತು ಭಾರತಾದ್ಯಂತ 100ಕ್ಕೂ ಹೆಚ್ಚು ಪ್ರೀಮಿಯರ್‌ ಶೋಗಳನ್ನು ಏರ್ಪಡಿಸಿದೆ. ವಿಶ್ವಾದ್ಯಂತ ಸರಿಸುಮಾರು 1800 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.

ರಾಜ್ಯದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. 500ಕ್ಕೂ ಹೆಚ್ಚು ವಿದೇಶಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಜೂನ್‌ 10ರಂದು ಬಿಡುಗಡೆಯ ಮೊದಲು ಜೂನ್‌ 9ರಂದು ಕರ್ನಾಟಕದಲ್ಲಿಯೇ 100 ಪ್ರೀಮಿಯರ್‌ ಶೋಗಳನ್ನು ಆಯೋಜಿಸುವುದಾಗಿ ಡಿಸ್ಟ್ರಿಬ್ಯೂಟರ್‌ ಕಾರ್ತಿಕ್‌ ಗೌಡ ಹೇಳಿದ್ದಾರೆ.

ಯುಎಸ್‌ಎದಲ್ಲಿ 200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಮತ್ತು ಗಲ್ಫ್‌ನಲ್ಲಿ 100 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ನೇಪಾಳದಲ್ಲಿ ಪ್ರೀಮಿಯರ್‌ ಶೋ ನಡೆಸಲು ಉದ್ದೇಶಿಸಿದ್ದು, ಗಣ್ಯರು ಭಾಗವಹಿಸಲಿದ್ದಾರೆ.

ದನ್ನೂ ಓದಿ | 777 Charlie : ವೇಸ್ಟ್‌ ಬಾಡಿ ಚಾರ್ಲಿ ಸೂಪರ್‌ ಹೀರೊ ಆಗಿದ್ದು ಹೀಗೆ

ವಿತರಣೆ

ಚಿತ್ರವನ್ನು ಮಳಯಾಳಂನಲ್ಲಿ ಫೃಥ್ವಿರಾಜ್‌ ಸುಕುಮಾರ್‌ ಮತ್ತು ತಮಿಳಿನಲ್ಲಿ ಕಾರ್ತಿಕ್‌ ಸುಬ್ಬರಾಜ್‌ ವಿತರಿಸಿದ್ದಾರೆ. ತೆಲುಗುವಿನಲ್ಲಿ ರಾಣಾ ದಗ್ಗುಪಾಟಿ ವಿತರಿಸಿದ್ದು, ಚಿತ್ರವನ್ನು 100-150 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ₹ 21 ಕೋಟಿಗೆ ಕಲರ್ಸ್‌ ಕನ್ನಡಕ್ಕೆ ಸೇಲ್‌ ಆಗಿರೋದು ಗಮನಾರ್ಹ.

ದೇಶದಲ್ಲಿ ಅತಿ ದೊಡ್ಡ ವಿತರಣಾ ಜಾಲ ಹೊಂದಿರುವ ಯುಎಫ್‌ಒ(UFO) ಸಂಸ್ಥೆ ಹಿಂದಿ ಅವತರಣಿಕೆಯ ವಿತರಣೆ ಹೊಣೆ ಹೊತ್ತಿದ್ದು, 777 Charlie ಸಿನಿಮಾ ಸಕ್ಸೆಸ್‌ ಸಾಧ್ಯತೆ ಮತ್ತಷ್ಟು ನಿಚ್ಚಳವಾಗಿದೆ. ಈಗಾಗಲೇ ಉತ್ತರ ಭಾರತದ ದೆಹಲಿ, ಅಹಮದಾಬಾದ್‌, ಕೋಲ್ಕೊತಾ ಸೇರಿದಂತೆ ವಿವಿಧ ಕಡೆ ಹಾಗೂ ವಿದೇಶದ ಕೆಲವೆಡೆ ಚಿತ್ರದ ಸೆಲೆಬ್ರಿಟಿ ಶೋಗಳು ನಡೆದಿವೆ.

ಖುಷಿ ಹಂಚಿಕೊಂಡ ರಕ್ಷಿತ್‌ ಟೀಮ್‌

ʼʼಬಿಡುಗಡೆ ಆದ ಬಳಿಕ ಜನರೇ ನಿರ್ಧಾರ ಮಾಡಬೇಕು. ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆ ತರುವುದು ನಮ್ಮ ಜವಬ್ದಾರಿʼʼ ಎಂದು ಹೇಳಿಕೊಂಡಿದ್ದಾರೆ ರಕ್ಷಿತ್‌ ಶೆಟ್ಟಿ. ಸತತ 5 ವರ್ಷದ ಚಾರ್ಲಿ ಜರ್ನಿ ಬಗ್ಗೆ ಮಾತನಾಡಿ, ʼʼಜನರು ಚಾರ್ಲಿ ನೋಡುವಾಗ ಭಾವನಾತ್ಮಕ ಜರ್ನಿಯನ್ನು ಹೊಂದುತ್ತಾರೆ. ಇದರ ಬಗ್ಗೆ ನನಗೆ ಅಪಾರವಾದ ನಂಬಿಕೆ ಇದೆ. ಚಾರ್ಲಿಯಿಂದ ತೆಗೆದುಕೊಳ್ಳಲು ಸಕರಾತ್ಮಕ ಸಂದೇಶಗಳೂ ಕೂಡ ಇವೆʼʼ ಎನ್ನುತ್ತಾರೆ ರಕ್ಷಿತ್‌.

ಚಾರ್ಲಿ ಜರ್ನಿಯೊಂದಿಗೆ ರಕ್ಷಿತ್‌

ʼʼನಾಯಿಗಳು ಯಾವಾಗಲೂ ಮಾನವನ ಉತ್ತಮ ಸ್ನೇಹಿತ. ಲಾಕ್‌ಡೌನ್‌ನಲ್ಲೂ ನಮಗೆ ನಾಯಿಗಳು ಅತ್ಯುತ್ತಮ ಕಂಪನಿ ಎಂದು ಅದಾಗಲೇ ಸಾಬೀತು ಆಗಿದೆ. ನಾಯಿ ಪ್ರೇಮಿಗಳು ಖಂಡಿತವಾಗಿಯೂ 777 Charlieಯನ್ನು ಇಷ್ಟ ಪಡುತ್ತಾರೆ ಎಂದು ಹಂಚಿಕೊಂಡರು. ಈಗಾಗಲೇ ಹಾಡು ಬಿಡುಗಡೆ ಮಾಡಿ, ಸ್ವಲ್ಪ ಹಿಂಟ್‌ ಕೊಡುವುದರ ಮೂಲಕ ಚಿತ್ರತಂಡ ಧರ್ಮ ಮತ್ತು ಚಾರ್ಲಿ ಪಯಣವನ್ನು ಕಟ್ಟಿಕೊಟ್ಟಿದೆʼʼ ಎನ್ನುತ್ತಾರೆ ರಕ್ಷಿತ್‌.

ಇದನ್ನೂ ಓದಿ | 777 ಚಾರ್ಲಿ: ಸಾಲು ಸಾಲು ಪ್ರೀಮಿಯರ್‌ ಶೋ, ಸೆಲೆಬ್ರಿಟಿಗಳು ಹೇಳಿದ್ದೇನು?

ಸಹ ನಟರೊಂದಿಗೆ ಚಾರ್ಲಿಯ ಪ್ರಮುಖ ಪಾತ್ರ

777 Charlie ಕುರಿತು ಸಂಗೀತಾ ಶೃಂಗೇರಿ ಸದಾ ತಮ್ಮ ಇನ್ಸ್ಸ್ಟಾ ಪೋಸ್ಟ್‌ ಮೂಲಕ ಹೇಳಿಕೊಳ್ಳುತ್ತಿರುತ್ತಾರೆ. ಅದರಲ್ಲಿ 777 ಚಾರ್ಲಿ ಚಿತ್ರದಲ್ಲಿ ತಾನು ಅನಿಮಲ್‌ ವೆಲ್‌ಫೇರ್‌ ಆಫೀಸರ್‌ ಆಗಿದ್ದು, ಚಾರ್ಲಿಯ ಟೇಕ್‌ ಕೇರ್‌ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿದ್ದರು. ಡ್ರಾಮಾ  ಜ್ಯೂನಿಯರ್ಸ್‌ ಖ್ಯಾತಿಯ ಶಾರ್ವರಿ ಜತೆಗಿನ ಹಾಡು ಕೂಡ ಔಟ್‌ ಆಗಿದ್ದು, ಚಾರ್ಲಿ ಮತ್ತು ಪುಟ್ಟ ಹುಡುಗಿಯ ನಂಟಿನ ಕಥೆಯನ್ನು ಲಿರಿಕಲ್‌ ವಿಡಿಯೋ ಕಟ್ಟಿ ಕೊಡುವಂತಿದೆ. ನೆರೆಮನೆಯ ಹುಡುಗಿ ಪಾತ್ರದಲ್ಲಿ ಶಾರ್ವರಿ ಬಣ್ಣ ಹಚ್ಚಿದ್ದು, ಮುಗ್ಧತೆಯ ಜತೆಗೆ ಭಾವನಾತ್ಮಕ ಸಂಬಂಧಗಳ ಅನಾವರಣ ಸಾಂಗ್‌ನಲ್ಲಿ ತೋರಿಸಿದ್ದಾರೆ.

ಸೆಲೆಬ್ರಿಟಿಗಳ ಸಂದೇಶ

ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಈ ಹಿಂದೆ ಚಾರ್ಲಿ ಸಕ್ಸಸ್‌ ಆಗಲಿ ಎಂದು ಟ್ವೀಟ್‌ ಮೂಲಕ ಖುಷಿಯನ್ನು ವ್ಯಕ್ತ ಪಡಿಸಿದ್ದರು. ರಮ್ಯಾ ಕನ್ನಡದ ಹೊಚ್ಚ ಹೊಸ ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡುವುದು ಹೊಸತೇನಲ್ಲ. ಅವರಿಗೆ ಶ್ವಾನಗಳೆಂದರೆ ಹುಚ್ಚು  ಪ್ರೀತಿ. ಇದೀಗ ಅದೇ ಸಬ್ಜೆಕ್ಟ್ ಸಿನಿಮಾ ಆಗಿರೋ ʼ777 ಚಾರ್ಲಿʼಗೆ ಸಾಥ್ ನೀಡಿದ್ದಾರೆ.

777 ಚಾರ್ಲಿ ಟೀಮ್‌

ಶ್ವಾನ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾ ನಾಯಕನಾಗಿ ರಕ್ಷಿತ್‌ ಶೆಟ್ಟಿ ನಟಿಸಿದರೆ, ರಾಜ್‌ ಬಿ ಶೆಟ್ಟಿ, ಡ್ಯಾನಿಶ್‌ ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್‌ ರಾಜ್‌ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್‌ ಶೆಟ್ಟಿ ತಮ್ಮ ಹೋಮ್‌ ಬ್ಯಾನರ್‌ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಭ್‌ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್‌ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್‌, ಕಾರ್ತಿಕಾ ನೈನನ್‌ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್‌ ಡಿಸೋಜಾ, ಸಾಯೇಶ್‌ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದಾರೆ.

ಇದನ್ನೂ ಓದಿ | 777 Charlie: ಶಾರ್ವರಿ ಹಾಗೂ ಚಾರ್ಲಿಯ Friendship ಕಥೆ ಹೇಳುವ ʼಸಹಪಾಠಿʼ ಸಾಂಗ್‌

Exit mobile version