Site icon Vistara News

777 charlie: ಚಾರ್ಲಿಗೆ ಲಂಚ ಕೊಡುತ್ತಿದ್ದ ನಟಿ, ಶೂಟಿಂಗ್‌ ಜರ್ನಿ ನೆನಪಿಸಿಕೊಂಡ ಸಂಗೀತಾ ಶೃಂಗೇರಿ

ಬೆಂಗಳೂರು: 777 charlie ಪ್ರಮೋಷನ್‌ ರಾಜ್ಯಾದ್ಯಂತ ಅಲ್ಲದೇ ಹೊರ ರಾಜ್ಯಗಳಲ್ಲಿಯೂ ಶುರುವಾಗಿದ್ದು, ಸಕತ್‌ ಹವಾ ಕ್ರಿಯೇಟ್‌ ಮಾಡಿದೆ. ಚಾರ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಟೇಟಸ್‌ , ಪ್ರೊಫೈಲ್‌ ಅಲ್ಲಿ ಜನರು ಹಾಕಿಕೊಳ್ಳುವುದರ ಮೂಲಕ ಮನೆ ಮಾತಾಗಿದೆ. ಧರ್ಮ ಮತ್ತು ಚಾರ್ಲಿ ಜರ್ನಿಯ ಕುರಿತಾದ ಚಾರ್ಲಿ ಸಿನಿಮಾ ಟ್ರೈಲರ್‌ ಹಾಗೂ ಜರ್ನಿ ಸಾಂಗ್‌ ಔಟ್‌ ಆಗಿ ಜನರ ಮೆಚ್ಚುಗೆಯನ್ನು ಗಳಿಸಿತ್ತು.

ಇದೀಗ ಚಾರ್ಲಿ ಸಿನಿಮಾದಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಕೂಡ ಪ್ರಮೋಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಾರಿ ಚರ್ಚೆಯಲ್ಲಿದ್ದಾರೆ. ಮಾಡೆಲಿಂಗ್‌ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಸಂಗೀತಾ , ಚಾರ್ಲಿ ಸಿನಿಮಾದಲ್ಲಿ ಎನಿಮಲ್‌ ವೆಲ್‌ಫೇರ್‌ ಆಫೀಸರ್‌ ಪಾತ್ರದ ಮೂಲಕ ಬಣ್ಣ ಹಚ್ಚಿದ್ದಾರೆ.

ʼʼದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿದ್ದೇನೆ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ಪಾತ್ರ ಅಷ್ಟಾಗಿ ಇಲ್ಲ, ಚಾರ್ಲಿಯೇ ಇದರಲ್ಲಿ ಎಲ್ಲಾ. ಚಾರ್ಲಿ ಸಿನಿಮಾದಲ್ಲಿ ಒಳ್ಳೆಯ ಪಾತ್ರವನ್ನು ನಿಭಾಯಿಸಿದ್ದಾಳೆ. ನಾನು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ವ್ಯಕ್ತಿಯ ಪಾತ್ರ ನಿಭಾಯಿಸುತ್ತಿದ್ದೇನೆʼʼ ಎನ್ನುತ್ತಾರೆ ಸಂಗೀತಾ.

ಇದನ್ನೂ ಓದಿ | Journey Song: ʼ777 ಚಾರ್ಲಿʼ ಸಾಂಗ್‌ ಔಟ್‌

ಚಾರ್ಲಿಯ ಪಾತ್ರದ ಮೂಲಕ ನಾನು ಸಾಕಷ್ಟು ಕಲಿತಿದ್ದೇನೆ. ನಿರ್ದೇಶಕ ಕೆ. ಕಿರಣ್‌ರಾಜ್‌ ಅವರು ನನಗೆ ಉತ್ತಮ ಶಿಕ್ಷಕ ಎಂದು ಸಂಗೀತಾ ಹೇಳಿದರು. ಚಾರ್ಲಿ ಬಗ್ಗೆ ಮಾತನಾಡಲು ತುಂಬಾನೆ ಇದೆ. ಚಾರ್ಲಿ ಅತ್ಯಂತ ಮುಗ್ಧ ಹಾಗೂ ಪ್ಯೂರ್‌ ಸೌಲ್‌. ಅವಳು ಸುತ್ತ ಇದ್ದರೆ ತುಂಬಾ ಖುಷಿಕರ ವಾತಾವರಣ ಇರುತ್ತಿತ್ತು. ಆದರೆ ಚಾರ್ಲಿಯೊಂದಿಗೆ ಇರುವುದು ಮತ್ತು ನಟಿಸುವುದು ತುಂಬಾ ಕಷ್ಟಕರ, ಚಾಲೆಂಜಿಂಗ್‌ ಆಗಿತ್ತು. ಹಲವಾರು ದೃಶ್ಯಗಳಲ್ಲಿ ಅದರೊಂದಿಗೆ ಇದ್ದಾಗ, ಅದಕ್ಕೆ ಲಂಚ ನೀಡಬೇಕಿತ್ತು ಎಂದು ಸಂಗೀತಾ ಮುಗುಳ್ನಗುತ್ತಾರೆ.

ಆಗಾಗ ಶೂಟ್‌ ಆದ ಕೂಡಲೆ ಚಾರ್ಲಿಗೆ ಆಹಾರ ನೀಡಬೇಕಿತ್ತು. ಅದರ ಫುಡ್‌ ಅನ್ನು ನಾನು ಬಾಯಲ್ಲಿ ಇಟ್ಟುಕೊಂಡಾಗ ಅದು ತುಂಬಾ ಭಾವುಕ ಆಗುತ್ತಿತ್ತು. ಅದನ್ನು ನಿಭಾಯಿಸುವುದು ಬಹಳ ಮುಖ್ಯವಾಗಿರುತ್ತಿತ್ತು. ಚಾರ್ಲಿ ಇರಲಿ, ಇಲ್ಲದೇ ಇರಲಿ. ಪ್ರತೀ ಶೂಟ್‌ ನಡೆಯುವಾಗ ತುಂಬಾ ಅಲರ್ಟ್‌ ಆಗಿ ಇರಬೇಕಿತ್ತು ಎನ್ನುತ್ತಾರೆ ಸಂಗೀತಾ.

ರಕ್ಷಿತ್‌ ಶೆಟ್ಟಿ ತುಂಬಾ ಚುರುಕು. ಅವರು ನಟಿಸುವಾಗ ತುಂಬಾ ಆನಂದ ಎನಿಸುತ್ತದೆ. ಸದಾ ಕಾಲೆಳೆಯುತ್ತ ಕುಟುಂಬದ ತರಹ ಸೆಟ್‌ನಲ್ಲಿ ಇದ್ದೆವು ಎನ್ನುತ್ತಾರೆ ಸಂಗೀತಾ.

ಪ್ಯಾನ್‌ ಇಂಡಿಯಾ ಸಿನಿಮಾ

ಇತ್ತೀಚಿನ ದಿನಗಳಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳ ಪಟ್ಟಿ ದಿನೇದಿನೆ ಹೆಚ್ಚಾಗುತ್ತಿದೆ. ಇನ್ನು 777 ಚಾರ್ಲಿ ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಲಿಸ್ಟಿಗೇ ಸೇರುತ್ತದೆ. ಅಷ್ಟು ಒಳ್ಳೆಯ ಕಟೆಂಟ್‌ ಹೊಂದಿದೆ. ಇದು ವಿಶ್ವಾದ್ಯಂತ ರೀಚ್‌ ಆಗಬೇಕು ಎಂಬುದು ನನ್ನ ಆಸೆ. ಪ್ರಾಣಿ ಪ್ರೇಮಿಗಳಿಗೆ ಹೆಚ್ಚಾಗಿ ಇಷ್ಟ ಆಗುವ ಸಿನಿಮಾ ಇದು ಎನ್ನುತ್ತಾರೆ ಸಂಗೀತಾ.

ಇದನ್ನೂ ಓದಿ | Trailer Release | ಧರ್ಮನ ಕಥೆ ಹೇಳುವ ʼ777 ಚಾರ್ಲಿʼ

ಈಗಾಗಲೇ ನನ್ನ ಬಳಿ ಎರಡು ಬೆಕ್ಕುಗಳಿವೆ. ನಾನು ಸ್ಕೂಲ್‌ಗೆ ಹೋಗುವಾಗ ಒಂದು ನಾಯಿಗೆ ಹುಡುಗರು ತೊಂದರೆ ಕೊಡುತ್ತಿದ್ದರು. ಆಗ ನಾನು ಅದನ್ನು ತಪ್ಪಿಸಿದ್ದೆ ಮತ್ತು ಚಿನ್ನೂ ಎಂದು ಹೆಸರಿಟ್ಟಿದ್ದೆ. ಅದು ತುಂಬಾ ದಿನ ನನ್ನ ಜೊತೆಯೇ ಇತ್ತು ಎಂದು ಪ್ರಾಣಿ ಬಗೆಗಿನ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ ಸಂಗೀತಾ.

ಚಾರ್ಲಿ ಸಿನಿಮಾ ಜೂನ್‌ 10ರಂದು ಪಂಚ ಭಾಷೆಗಳಲ್ಲಿ ತೆರೆ ಕಾಣಲಿದೆ. ರಕ್ಷಿತ್‌ ಶೆಟ್ಟಿ, ಡ್ಯಾನಿಶ್‌ ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್‌ ರಾಜ್‌ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ರಕ್ಷಿತ್‌ ಶೆಟ್ಟಿ ತಮ್ಮ ಹೋಮ್‌ ಬ್ಯಾನರ್‌ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ. ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ | 777 Charlie | ರಕ್ಷಿತ್‌ ಶೆಟ್ಟಿ ಸಿನಿಮಾ ವಿತರಣೆ ಮಾಡಲಿದೆ UFO: ಮೇ 16ಕ್ಕೆ ಟ್ರೈಲರ್‌ ಬಿಡುಗಡೆ

Exit mobile version