ಬೆಂಗಳೂರು : ದೇಶಾದ್ಯಂತ 777 ಚಾರ್ಲಿ ಬಿಡುಗಡೆಗೊಂಡಿದ್ದು, ಭಾರಿ ಮೆಚ್ಚುಗೆಯನ್ನು ಪಡೆದಿದೆ. ಟ್ವೀಟ್ ಮೂಲಕ ಜನರು ಚಾರ್ಲಿ ಪೋಟೊ ಹಾಕಿ, ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ರಾಜಕಾರಣಿ, ಪರಿಸರವಾದಿ ಮೇನಕಾ ಗಾಂಧಿ ಚಾರ್ಲಿಗೆ ಶುಭ ಹಾರೈಸಿದ್ದಾರೆ. ಸಂಸ್ಕೃತಿ ಸಚಿವೆಯಾಗಿ ಮನೇಕಾ ಅನೇಕ ಪರಿಸರ ಮತ್ತು ಪ್ರಾಣಿ ಸಂರಕ್ಷಣಾ ಆಂದೋಲನಗಳ ನಾಯಕತ್ವವನ್ನು ವಹಿಸಿಕೊಂಡವರು. ಶುಕ್ರವಾರ 777 ಚಾರ್ಲಿ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ.
ʼʼನಾನು ಸಿನಿಮಾಗಳನ್ನು ದ್ವೇಷಿಸುತ್ತೇನೆ. ಆದರೂ 777 ಚಾರ್ಲಿ ನೋಡಿದ್ದು ಅದು ಶ್ವಾನಪ್ರೇಮಿ ಎಂಬ ಕಾರಣಕ್ಕೆ ಮಾತ್ರ. ಸಿನಿಮಾದಲ್ಲಿ ಯಾವುದೇ ನಾಟಕೀಯತೆ ಇಲ್ಲ. ಮುಗ್ಧತೆ ಹೊಂದಿರುವ ಸಿಂಪಲ್ ಸ್ಟೋರಿ. ನಿರ್ದೇಶಕ ಕಿರಣ್ ರಾಜ್ ಪ್ರಾಣಿ ಮತ್ತು ಮನುಷ್ಯನ ಬಾಂಧವ್ಯವನ್ನು ಅದ್ಭುತವಾಗಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆʼʼ ಎಂದು ವಿಡಿಯೊ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | 777 Charlie: ಶಾರ್ವರಿ ಹಾಗೂ ಚಾರ್ಲಿಯ Friendship ಕಥೆ ಹೇಳುವ ʼಸಹಪಾಠಿʼ ಸಾಂಗ್
ಮೇನಕಾ ಸಂಜಯ್ ಗಾಂಧಿ ಸಿನಿಮಾಗಳನ್ನು ಹೆಚ್ಚು ಇಷ್ಟ ಪಡುವುದಿಲ್ಲ. ಆದರೂ ಕನ್ನಡದ ಸಿನಿಮಾ ನೋಡಿ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ಹೇಳಿದ್ದಾರೆ.
ಸಿನಿಪ್ರಿಯರ ಮೆಚ್ಚುಗೆ ಮಾತುಗಳು
ʼʼಎದೆಯಲ್ಲಿ ಕಲ್ಲಿದ್ದರೆ ಅಳು ಬರುವುದಿಲ್ಲ, ಆದರೆ ಚಾರ್ಲಿ ನೋಡಿದ ಮೇಲೆ ಆ ಕಲ್ಲು ಕೂಡ ಕರಗಿ ಹೋಗುತ್ತೆʼʼ ಎಂದು ಅಭಿಮಾನಿ ಒಬ್ಬರು ಟ್ವೀಟ್ ಮೂಲಕ ಚಾರ್ಲಿ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚ್ಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಮಾತ್ರವಲ್ಲ, ಪೃಥ್ವಿರಾಜ್ ಫ್ಯಾನ್ಸ್ ಕೂಡ ಟ್ವೀಟ್ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ , ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೊಂಡಿದೆ.
ಇದನ್ನೂ ಓದಿ | 777 Charlie : ಕ್ಯೂಟ್ ಜರ್ನಿ ಬಗ್ಗೆ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್
ಅಭಿಮಾನಿಗಳು ಈ ಹಿಂದೆ ಚಾರ್ಲಿ ಟ್ರೇಲರ್ ಬಿಡುಗಡೆಗೊಂಡಾಗಲೂ, ತಮ್ಮ ಸಾಕು ನಾಯಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದರು. ಇದೀಗ ಚಾರ್ಲಿ ಸಕ್ಸಸ್‌ಗೆ ಕ್ರಿಯೇಟಿವ್ ಪೋಸ್ಟ್‌ಗಳ ಮೂಲಕ ಜನರು 777 ಚಾರ್ಲಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಟ್ವೀಟ್ ಮೂಲಕ 777 ಚಾರ್ಲಿಯನ್ನು ಬೇರೆ ರಾಜ್ಯಗಳಲ್ಲಿ ಕನ್ನಡದಲ್ಲಿಯೇ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಲಕ್ಷ ಜನರು ಬೇರೆ ರಾಜ್ಯಗಳಲ್ಲಿ ನೆಲೆಸಿರುತ್ತಾರೆ. ಮೇಜರ್ ಸಿಟಿಗಳಲ್ಲಾದರೂ ಕನ್ನಡ ಭಾಷೆಯಲ್ಲಿ ರಿಲೀಸ್ ಮಾಡಿ ಎಂದು ಟ್ವೀಟ್ ಮೂಲಕ ರಿಕ್ವೆಸ್ಟ್ ಮಾಡುತ್ತಿದ್ದಾರೆ.
ಸಿನೆಮಾದಲ್ಲಿ ನಟಿಸಿದ ಚಾರ್ಲಿ ಕೂಡ ಜನರೊಂದಿಗೆ ಥಿಯೇಟರ್‌ನಲ್ಲಿ ಸಿನಿಮಾ ನೋಡುವ ವಿಡಿಯೋ ಕೂಡ ವೈರಲ್ ಆಗಿದೆ.
ಇದನ್ನೂ ಓದಿ | 777 ಚಾರ್ಲಿ: ಚಾರ್ಲಿನಾ ಭೇಟಿ ಮಾಡಿದ್ರಾ ಸಾಯಿಪಲ್ಲವಿ? ಚಿತ್ರಕ್ಕೆ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್