ಬೆಂಗಳೂರು : ʼಇರು ನೀ ಜೊತೆ ಬದುಕಿನ ತರಗತಿಯೊಳಗೆʼ ಸಾಹಿತ್ಯದ ಮೂಲಕ ಶಾರ್ವರಿ ಮತ್ತು ಚಾರ್ಲಿಯ ಪಯಣದ ಭಾವನೆಯ ಲಿರಿಕಲ್ ಸಾಂಗ್ ಇದೀಗ ಔಟ್ ಆಗಿದೆ. ಹೌದು 777 ಚಾರ್ಲಿಯ ʼಸಹಪಾಠಿʼ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಶಾರ್ವರಿ ಬಾಲ ನಟಿಯಾಗಿ ಈ ಚಿತ್ರಕ್ಕೆ ನಟಿಸಿದ್ದಾರೆ. 777 ಚಾರ್ಲಿಯ ಹಲವಾರು ವಿಡಿಯೋ ಹಾಗೂ ಪೋಸ್ಟರ್ ಮೂಲಕ ನೋಡಿದಾಗ, ಶಾರ್ವರಿ ಮತ್ತು ಚಾರ್ಲಿಯ ಜರ್ನಿ ಬಗ್ಗೆ ಹೇಳುವಂತಿದೆ 777 ಚಾರ್ಲಿ. ಧರ್ಮ, ಚಾರ್ಲಿ ಮತ್ತು ಈ ಪುಟ್ಟ ಹುಡುಗಿಯ ಚಿತ್ರಣವನ್ನು ಸಾಹಿತ್ಯದ ಮೂಲಕ ಕಟ್ಟುಕೊಡುವಂತಿದೆ ಸಹಪಾಠಿ ಸಾಂಗ್. ಈಗಾಗಲೇ ಪಂಚ ಭಾಷೆಗಳಲ್ಲಿ ಸಾಂಗ್ ರಿಲೀಸ್ ಆಗಿದೆ. ಕಮೆಂಟ್ ಮೂಲಕ ಜನರು ಸಿನಿಮಾಗೆ ಕಾತುರತೆ ಇಂದ ಕಾಯುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.
ಈ ಹಿಂದೆ ಸಂಗೀತಾ ಶೃಂಗೇರಿ ಅವರು ಅನಿಮಲ್ ವೆಲ್‌ಫೇರ್ ಆಫಿಸರ್ ಪಾತ್ರದ ಮೂಲಕ ಚಾರ್ಲಿ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದರು. ಆರ್ನಾ ಶೆಟ್ಟಿ ಸಾಂಗ್ ಹಾಡಿದ್ದು, ಸಖತ್ ಕ್ಯೂಟ್ ಸಾಂಗ್ ಎಂದು ಕಮೆಂಟ್ ಮೂಲಕ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಶಾರ್ವರಿ ಹಾಗೂ ಚಾರ್ಲಿ ಸೆಂಟಿಮೆಂಟ್
ರಿಯಲ್ ಲೈಫ್‌ನಲ್ಲೂ ಪೆಟ್ಸ್ ತುಂಬಾ ಇಷ್ಟ ಪಡುವ ಶಾರ್ವರಿ, ಸಿನಿಮಾದಲ್ಲೂ ಚಾರ್ಲಿ ಜತೆ ಎಂಜಾಯ್ ಮಾಡುವ ಪಾತ್ರವಾಗಿದೆ ಎನ್ನುತ್ತಾಳೆ. ʼಲಾಸ್ಟ್ ಸೀನ್‌ನಲ್ಲಿ ನನಗೆ ಅಳುವ ಸೀನ್ ನೀಡಿದ್ದರು. ಸದಾ ನಗುವ ನನಗೆ ಅಳುವುದು ತುಂಬಾ ಕಷ್ಟಕರ ಆಗಿತ್ತು. ನಂತರ ನಿರ್ದೇಶಕರು ಇದು ನಿನ್ನ ಕೊನೆಯ ಸೀನ್ ಮತ್ತು ಇನ್ನು ಚಾರ್ಲಿ ನಿನಗೆ ಸಿಗುವುದಿಲ್ಲ ಎಂದು ಹೇಳಿ ರಿಯಲ್ ಆಗಿ ಅಳಿಸಿಬಿಟ್ಟರು. ಆಗ ನ್ಯಾಚುರಲ್ ಆಗಿ ಅತ್ತು ಬಿಟ್ಟೆʼ ಎಂದು ಹೇಳುತ್ತಾರೆ ಶಾರ್ವರಿ. ಸೆಟ್‌ನಲ್ಲಿಯೂ ತುಂಬಾ ಎಂಜಾಯ್ ಮಾಡಿ ನಟಿಸಿದ್ದೇನೆ ಎಂದು ಸಂತಸವನ್ನು ಹಂಚಿಕೊಳ್ಳುತ್ತಾರೆ ಶಾರ್ವರಿ.
ಹೀರೋ ಧರ್ಮನ ನೇಬರ್ ರೋಲ್ ಮೂಲಕ ಬಣ್ಣ ಹಚ್ಚಿರುವ ಶಾರ್ವರಿ ಈ ಹಿಂದೆ ತಮ್ಮ ಹುಟ್ಟು ಹಬ್ಬದ ಪ್ರಯುಕ್ತವಾಗಿ 777 ಚಾರ್ಲಿ ಸಿನಿಮಾ ತಂಡ ಸಣ್ಣ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಅದೂ ಕೂಡ ಚಾರ್ಲಿ ಮತ್ತು ಶಾರ್ವರಿಯ ಸೆಟ್‌ನ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ | 777 Charlie : ವೇಸ್ಟ್ ಬಾಡಿ ಚಾರ್ಲಿ ಸೂಪರ್ ಹೀರೊ ಆಗಿದ್ದು ಹೀಗೆ
ಇದೇ ಜೂನ್ 10 ರಂದು ಚಾರ್ಲಿ ಸಿನಿಮಾ ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಕ್ಷಿತ್ ಶೆಟ್ಟಿಯ ಪ್ಯಾನ್ ಇಂಡಿಯಾ ಸಿನಿಮಾ ʼ777 ಚಾರ್ಲಿʼ ಜೂನ್ 10ಕ್ಕೆ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಉತ್ತರ ಭಾರತದ ದೆಹಲಿ, ಅಹಮದಾಬಾದ್, ಕೋಲ್ಕೊತಾ ಸೇರಿದಂತೆ ವಿವಿಧ ಕಡೆ ಹಾಗೂ ವಿದೇಶದ ಕೆಲವೆಡೆ ಚಿತ್ರದ ಸೆಲೆಬ್ರಿಟಿ ಶೋಗಳು ನಡೆದಿವೆ. ಜೂನ್ 9ರಂದು ರಾಜ್ಯದೆಲ್ಲೆಡೆ ʼ777 ಚಾರ್ಲಿʼ ನೂರಕ್ಕೂ ಅಧಿಕ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ ಎನ್ನುವುದು ವಿಶೇಷ.
ಇದೇ ಮೊದಲ ಬಾರಿಗೆ ಜೂನ್ 9ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪ್ರಿಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ 55 ಕಡೆ ಚಿತ್ರ ಪ್ರದರ್ಶನ ನಡೆದರೆ, ಉಳಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರದರ್ಶನವಿರಲಿದೆ.
ಇದನ್ನೂ ಓದಿ | 777 charlie: ಚಾರ್ಲಿಗೆ ಲಂಚ ಕೊಡುತ್ತಿದ್ದ ನಟಿ, ಶೂಟಿಂಗ್ ಜರ್ನಿ ನೆನಪಿಸಿಕೊಂಡ ಸಂಗೀತಾ ಶೃಂಗೇರಿ