Site icon Vistara News

95th Academy Awards: ರೆಡ್ ಕಾರ್ಪೆಟ್ ಮೇಲೆ ದೀಪಿಕಾ ಹೇಗೆಲ್ಲ ಕಾಣಿಸಿಕೊಂಡಿದ್ದರು?

95th-academy-awards Deepika Padukonefashionable red carpet looks

ಬೆಂಗಳೂರು: 95ನೇ ಅಕಾಡೆಮಿ (95th Academy Awards) ಪ್ರಶಸ್ತಿ ಇದೇ ಮಾರ್ಚ್ 12ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಿಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೋನೆ, ಜೊ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರ ಜತೆಗೆ ಇವರ ಹೆಸರು ಸೇರಿದೆ.

95ನೇ ಆಸ್ಕರ್ ಪ್ರಶಸ್ತಿ ಎಬಿಸಿಯಲ್ಲಿ ಮಾರ್ಚ್‌ 12ರ ಭಾನುವಾರ ನೇರ ಪ್ರಸಾರವಾಗಲಿದೆ. ಸಭೆಯ ರೆಡ್ ಕಾರ್ಪೆಟ್‌ನಲ್ಲಿ ನಟಿ ಯಾವ ರೀತಿಯ ಉಡುಪನ್ನು ಧರಿಸಬಹುದೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ದೀಪಿಕಾ ಅವರ ಕೆಲವು ಫ್ಯಾಶನ್ ರೆಡ್ ಕಾರ್ಪೆಟ್ ಲುಕ್‌ಗಳ ಝಲಕ್‌ ಇಲ್ಲಿದೆ.

ಗೌನ್‌ನಲ್ಲಿ ಮಿಂಚಿದ ನಟಿ

ಕಾನ್(Cannes) 2022ರಲ್ಲಿ ದೀಪಿಕಾ ಪಡುಕೋಣೆ ಅವರ ಅದ್ಭುತವಾದ ಉದ್ದದ ಗೌನ್‌ನೊಂದಿಗೆ ಕಪ್ಪು ಮತ್ತು ಬಂಗಾರ ಬಣ್ಣದ ಮಿಶ್ರಿತ ಗೌ ಮಿಂಚಿದ್ದರು. ಪಡುಕೋಣೆ ಅವರು ಸ್ಮೋಕಿ ಐ ಲುಕ್ ಮತ್ತು ಕಂದು ಬಣ್ಣದ ಲಿಪ್‌ಸ್ಟಿಕ್‌ನೊಂದಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Deepika Padukone: ʻಪ್ರಾಜೆಕ್ಟ್ ಕೆʼ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆದರಾ ದೀಪಿಕಾ ಪಡುಕೋಣೆ?

ರೆಟ್ರೋ ಲುಕ್‌ನಲ್ಲಿ ದೀಪಿಕಾ

ದೀಪಿಕಾ ಪಡುಕೋಣೆ ತನ್ನ ರೆಟ್ರೋ ಲುಕ್‌ನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದರು.

ಕೆಂಪು ಲ್ಯಾಟೆಕ್ಸ್ ಬಾಡಿಕಾನ್‌ನಲ್ಲಿ ದೀಪಿಕಾ

ದೀಪಿಕಾ ಪಡುಕೋಣೆ ಅವರ ಕೆಂಪು ಲ್ಯಾಟೆಕ್ಸ್ ಬಾಡಿಕಾನ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್‌ ಗೌನ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಕಸ್ಟಮ್ ರಫಲ್ಡ್ ಸೀರೆಯಲ್ಲಿ ದೀಪಿಕಾ

ಕಸ್ಟಮ್-ಮೇಡ್ ಲೈಮ್ ಗ್ರೀನ್ ರಫಲ್ಡ್ ಗೌನ್‌

ದೀಪಿಕಾ ಪಡುಕೋಣೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಇಟಾಲಿಯನ್ ಫ್ಯಾಶನ್ ಹೌಸ್ ಜಿಯಾಂಬಟ್ಟಿಸ್ಟಾವಲ್ಲಿ ಅವರ ಕಸ್ಟಮ್-ಮೇಡ್ ಲೈಮ್ ಗ್ರೀನ್ ರಫಲ್ಡ್ ಗೌನ್‌ನಲ್ಲಿ ಕಂಡದ್ದು ಹೀಗೆ.

ಕಾನ್‌ 2018ರಲ್ಲಿ ದೀಪಿಕಾ ಪಡುಕೋಣೆ ಅವರ ಗುಲಾಬಿ ಬಣ್ಣದ ರಫಲ್ಡ್ ಗೌನ್.

ಕಸ್ಟಮ್ ಝಾಕ್ ಪೋಸೆನ್ ಗೌನ್‌

ದೀಪಿಕಾ ಪಡುಕೋಣೆ ಅವರ ಕಸ್ಟಮ್ ಝಾಕ್ ಪೋಸೆನ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರು. ಪಿಂಕ್ ಬಾಲ್ ಗೌನ್ ಬಾರ್ಬಿ ಗೊಂಬೆಗಳನ್ನು ನೆನಪಿಸುವಂತೆ ಲೇಯರ್ಡ್ ರಫಲ್ಡ್ ಸ್ಕರ್ಟ್ ಧರಿಸಿದ್ದು ಹೀಗೆ.

ಈ ಬಾರಿ ಆಸ್ಕರ್ ವೇದಿಕೆಯ ಮೇಲೆ ನಿರಂತರವಾಗಿ ದೀಪಿಕಾ ಕಾಣಿಸಿಕೊಂಡರೆ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಲೈವ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲದೇ, ಅದೇ ವೇದಿಕೆಯಲ್ಲೇ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಲಿದ್ದಾರೆ. ಶಾರುಖ್ ಖಾನ್ ಜತೆಗೆ ಇತ್ತೀಚೆಗೆ ಬ್ಲಾಕ್‌ಬಸ್ಟರ್ ಹಿಟ್ ಪಠಾಣ್‌ನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ, ಮುಂದಿನ ಪ್ರಾಜೆಕ್ಟ್ ʻಕೆʼ ಮತ್ತು ʻಫೈಟರ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version