ಬೆಂಗಳೂರು: ಕೆಜಿಎಫ್ (KGF) ಸರಣಿ ಚಿತ್ರಗಳ ಮೂಲಕ ಇಡೀ ದೇಶದ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದವರು ಪ್ರಶಾಂತ್ ನೀಲ್ (Prashanth Neel). ಇದೀಗ ಅವರು ‘ಸಲಾರ್’ (Salaar) ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಮುಂದಾಗುತ್ತಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಅಭಿನಯದ ‘ಸಲಾರ್’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಸಲಾರ್: ಭಾಗ 1’ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಈಗ ‘ಸಲಾರ್’ (Salaar) ಸಿನಿಮಾಗೆ ಸೆನ್ಸಾರ್ ಬೋರ್ಡ್ನಿಂದ ‘ಎ’ ಸರ್ಟಿಫಿಕೇಟ್ (A certificate) ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
`ಎ’ ಸರ್ಟಿಫಿಕೇಟ್ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಹೀಗಾಗಿ ಸಲಾರ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡೋದು ಡೌಟ್ ಅಂತಿದ್ದಾರೆ ಸಿನಿ ತಜ್ಞರು. ಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Salaar Movie: ವಿಶೇಷ ಚೇತನ ಗಾಯಕಿಗೆ ಬಂಪರ್ ಆಫರ್ ಕೊಟ್ಟ ಪ್ರಶಾಂತ್ ನೀಲ್!
Censor done for #SalaarCeaseFire 🔥
— Hombale Films (@hombalefilms) December 11, 2023
Get ready for an intense ‘𝐀’ction drama in cinemas from December 22nd 💥#Salaar #Prabhas #PrashanthNeel @PrithviOfficial @shrutihaasan @VKiragandur @hombalefilms @IamJagguBhai @sriyareddy @bhuvangowda84 @RaviBasrur @vchalapathi_art @anbariv… pic.twitter.com/OdP97BN0GZ
ʼʼಸಲಾರ್ʼ ಚಿತ್ರದ ಕಥೆ ದೀರ್ಘವಾಗಿದೆ. ಈ ಕಥೆಯನ್ನು ಹೇಳಲು ಎರಡು ಭಾಗ ಬೇಕೇ ಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಆದರೆ ʼಕೆಜಿಎಫ್ʼ ಆರಂಭಿಸುವಾಗ ಎರಡು ಪಾರ್ಟ್‌ಗಳಲ್ಲಿ ತೆರೆಗೆ ತರುವ ಉದ್ದೇಶವಿರಲಿಲ್ಲ. ಆದರೆ ʼಸಲಾರ್ʼ ವಿಚಾರದಲ್ಲಿ ಎರಡು ಭಾಗ ಎನ್ನುವುದು ಪೂರ್ವ ನಿರ್ಧರಿತವಾಗಿತ್ತುʼʼ ಎಂದು ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.
ʼಕೆಜಿಎಫ್ʼ-ʼಸಲಾರ್ʼ ಬೇರೆ ಬೇರೆ
“ಸಲಾರ್‌ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್ʼ ಹೇಳುವ ಬೇರೆಯದೇ ಕಥೆಗಾಗಿ ಜನರು ಅದನ್ನು ನೋಡುತ್ತಾರೆ ಎಂದು ಭಾವಿಸುತ್ತೇನೆ. ʼಸಲಾರ್ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆ. ಭಾರತದಲ್ಲಿ ಕಥೆ ಹೇಳಲಿರುವ ಅತ್ಯುತ್ತಮ ಮಾಧ್ಯಮ ಚಲನಚಿತ್ರವಾಗಿರುವುದರಿಂದ ಅದನ್ನು ʼಸಲಾರ್ʼ ಮೂಲಕ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲಿದ್ದೇನೆ ಎನ್ನುವ ನಿರೀಕ್ಷೆ ಇದೆʼʼ ಎಂದು ಪ್ರಶಾಂತ್ ತಿಳಿಸಿದ್ದರು.
6 ಗಂಟೆಗಳ ಸಿನಿಮಾ!
ʼʼಸಲಾರ್ʼನ ಕಥೆಯನ್ನು ಸುಮಾರು 6 ಗಂಟೆಗಳ ಚಲನಚಿತ್ರವನ್ನಾಗಿಸಬಹುದು. ಅದಕ್ಕಾಗಿ ಎರಡು ಪಾರ್ಟ್ ಮಾಡಿದ್ದೇನೆ ಎಂದು ಹೇಳಿರುವ ಪ್ರಶಾಂತ್ ನೀಲ್ ಇನ್ನೊಂದು ಅಚ್ಚರಿಯ ಸಂಗತಿಯನ್ನೂ ರಿವೀಲ್ ಮಾಡಿದ್ದಾರೆ. ʼಕೆಜಿಎಫ್ʼಗಿಂತ ಮೊದಲೇ ʼಸಲಾರ್ʼ ಕಥೆ ಬರೆದಿದ್ದರಂತೆ. ʼʼಸಲಾರ್ʼ ಮೊದಲ ಪಾರ್ಟ್‌ನಲ್ಲಿ ಅರ್ಧ ಕಥೆ ಹೇಳುತ್ತೇವೆ. ಉಳಿದರ್ಧ ಕಥೆ ಎರಡನೇ ಪಾರ್ಟ್‌ನಲ್ಲಿ ಬರಲಿದೆʼʼ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Salaar Movie: ಪ್ರಭಾಸ್ ಜತೆ ಐಟಂ ಸಾಂಗ್‌ಗೆ ಸೊಂಟ ಬಳುಕಿಸುತ್ತಿದ್ದಾರೆ ಗದರ್ 2 ನಟಿ?
ಕಥೆ ಏನು?
ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್ʼನ ಪ್ರಮುಖ ಭಾವನೆ. ಡಿಸೆಂಬರ್ 1ರಂದು ಟ್ರೈಲರ್ ಬಿಡುಗಡೆಯಾಗಲಿದ್ದು, ಇದರಲ್ಲಿ ʼಸಲಾರ್ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಹೇಳಿ ಪ್ರಶಾಂತ್ ಕುತೂಹಲ ಹುಟ್ಟು ಹಾಕಿದ್ದಾರೆ.
ʼಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಮೊದಲ ಬಾರಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಒಂದಾಗುತ್ತಿದ್ದು, ಸಿನಿಮಾದ ಇತರ ಮುಖ್ಯ ಪಾತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಕಾಣಿಸಿಕೊಂಡಿದ್ದಾರೆ. ಸದ್ಯ ಪೋಸ್ಟರ್ ಮೂಲಕವೇ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.