Site icon Vistara News

Actor Yash: ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿಗೆ ಹರಿದುಬಂದ ಅಭಿಮಾನಿಗಳ ದಂಡು!

Actor Yash 19

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌ (Actor Yash ) ಭೇಟಿ ಮಾಡಲು ಅಭಿಮಾನಿಗಳ ದಂಡೇ ಹರಿದು ಬಂದಿದೆ. ಕೆಲವು ಅಭಿಮಾನಿಗಳಿಗೆ ಯಶ್‌ ಆಹ್ವಾನ ನೀಡಿದ್ದು, ಈ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಆಗಮಿಸಿದ್ದಾರೆ. ಬೆಳಗ್ಗೆ ಗಾಲ್ಫ್‌ ಕೋರ್ಸ್ ಬಳಿಯ ನಿವಾಸದಲ್ಲಿ ಯಶ್‌ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ಸಿದ್ದೇಶ್ವರ ಸ್ವಾಮಿಜಿಯ ಫೋಟೊ ನೀಡಿ, ಯಶ್‌ ಜತೆಗೆ ಅವರ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಯಶ್‌ 19ನೇ ಸಿನಿಮಾವನ್ನು ಅನೌನ್ಸ್‌ ಮಾಡುತ್ತೇನೆ ಎಂದಿದ್ದಾರೆ. ಜನವರಿ ೮ ಯಶ್‌ ಅವರ ಜನುಮದಿನ. ಫ್ಯಾನ್ಸ್​ ಜತೆ ಬರ್ತ್​ಡೇ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದರು. ಬರ್ತ್ ಡೇ ದಿನ ಭೇಟಿ ಮಾಡಲು ಸಾಧ್ಯವಾಗದೇ ಇರುವ ಕಾರಣ ಯಶ್‌ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: Dulquer Salmaan: ಯಶ್‌ ಒಬ್ಬ ಅತ್ಯುತ್ತಮ ಹೋಸ್ಟ್ ಎಂದು ಹೊಗಳಿದ ದುಲ್ಕರ್ ಸಲ್ಮಾನ್: ಕನ್ನಡ ಚಿತ್ರರಂಗಕ್ಕೆ ಬರಲಿದ್ದಾರಾ ಕೇರಳದ ನಟ?

ಇದನ್ನೂ ಓದಿ: Makar Sankranti 2023 | ಮಕರ ಸಂಕ್ರಮಣವನ್ನು ಅದ್ಧೂರಿಯಾಗಿ ಆಚರಿಸಿದ ಯಶ್‌ ಮತ್ತಿತರ ತಾರೆಯರು

ಯಶ್ ಹೊಸ ಸಿನಿಮಾಗೆ 400 ಕೋಟಿ ರೂ. ಬಜೆಟ್‌?
ಯಶ್ ಅವರ ಮುಂದಿನ ಸಿನಿಮಾ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ. ತಮಿಳು ನಿರ್ದೇಶಕರೊಬ್ಬರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಯಶ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರಂತೆ. ಆ ಬ್ಯಾನರ್ ಮೂಲಕವೇ ಪತ್ನಿ ರಾಧಿಕಾ ಪಂಡಿತ್ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಯು ಯಶ್ ಅವರ ಮಗಳ ಹೆಸರಿನಲ್ಲಿ ಇರಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

Exit mobile version