Site icon Vistara News

Actor Nani: ಹೋರಾಟದ ದಿನಗಳನ್ನು ನೆನಪಿಸಿಕೊಂಡ ಟಾಲಿವುಡ್‌ ಸ್ಟಾರ್‌ ನಾನಿ!

A Director Insulted Nani On A Film Set

ಬೆಂಗಳೂರು: ಟಾಲಿವುಡ್‌ ಸ್ಟಾರ್‌ ನಾನಿ (Actor Nani) ಮಾರ್ಚ್ 30ರಂದು ತಮ್ಮ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಚಲನಚಿತ್ರ ದಸರಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಪ್ರಸ್ತುತ ತಮ್ಮ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸಂದರ್ಶನವೊಂದರಲ್ಲಿ, ಸಹಾಯಕ ನಿರ್ದೇಶಕರಾಗಿ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ

ಬಾಲಿವುಡ್‌ ಬಬಲ್‌ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ನಟ ಮಾತನಾಡಿ ʻʻಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ ಸಾಕಷ್ಟು ಅವಮಾನಗಳಿಗೆ ಗುರಿಯಾಗುತ್ತಿದ್ದೆವು. ಅದರಲ್ಲಿಯೂ ಕ್ಲ್ಯಾಪ್‌ ಅಸಿಸ್ಟೆಂಟ್‌ ಆದಾಗ ಸೆಟ್‌ಗಳಲ್ಲಿ ನಮಗೆ ಪವರ್‌ಗಳು ಇರುತ್ತಿರಲಿಲ್ಲ. ಆ ಕಾರಣ ಸಹಾಯಕರಿಗೆ ಏನು ಬೇಕಾದರೂ ಹೇಳುವ ಹಕ್ಕಿದೆ ಎಂದು ಅಲ್ಲಿ ಭಾವಿಸುತ್ತಿದ್ದರು. ಚಲನಚಿತ್ರ ನಿರ್ದೇಶಕರು ಒಮ್ಮೆ ಇಡೀ ತಂಡದ ಮುಂದೆ ನನನ್ನು ಅವಮಾನಿಸಿದ್ದರುʼʼ ಎಂದು ನೆನಪಿಸಿಕೊಂಡಿದ್ದಾರೆ.

ಮಾರ್ಚ್ 22ರಂದು ಧೂಮ್ ಧಾಮ್ ದೋಸ್ತಾನ್ ಅಧಿಕೃತ ವಿಡಿಯೊವನ್ನು ಬಿಡುಗಡೆ ಮಾಡಿದಾಗಿನಿಂದ ದಸರಾ ಸಿನಿಮಾದ ಕ್ರೇಜ್‌ ಹೆಚ್ಚಾಗಿದೆ. ರಾಹುಲ್ ಸಿಪ್ಲಿಗುಂಜ್ ಮತ್ತು ಗೊಟ್ಟೆ ಕನಕವ್ವ ಈ ಹಾಡನ್ನು ಹಾಡಿದ್ದಾರೆ.
ನಟ ರಾಣಾ ದಗ್ಗುಬಾಟಿ ಕೂಡ ವಿಶೇಷ ಅತಿಥಿಯಾಗಿ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಚಿತ್ರದ ನಾಯಕಿ ಕೀರ್ತಿ ಸುರೇಶ್ ಜತೆಗೆ ರಾಣಾ ಮತ್ತು ನಾನಿ ಹಾಡಿಗೆ ನೃತ್ಯ ಮಾಡಿದರು. ಬಿಡುಗಡೆಯಾದ ಕೇವಲ ಒಂದು ದಿನದಲ್ಲಿ, ಧೂಮ್ ಧಾಮ್ ದೋಸ್ತಾನ್‌ ಒಳ್ಳೆಯ ವಿಮರ್ಶೆಗಳನ್ನು ಗಳಿಸಿದೆ.

ಇದನ್ನೂ ಓದಿ: Actor Nani: ಕ್ರೇಜಿ ಸ್ಟಾರ್ ರವಿಚಂದ್ರನ್ ಭೇಟಿ ಮಾಡಿದ ನ್ಯಾಚುರಲ್ ಸ್ಟಾರ್ ನಾನಿ

ಅಭಿಮಾನಿಗಳು ದಸರಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್‌ನಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.

Exit mobile version