ಬೆಂಗಳೂರು: ಆಮೀರ್ ಖಾನ್ (Aamir Khan) ಕಳೆದ 14 ವರ್ಷಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಕಿಂಗ್ ಎಂದೇ ಖ್ಯಾತಿ ಪಡೆದಿದ್ದರು. 2008ರಲ್ಲಿ ‘ಗಜಿನಿ’ ಸಿನಿಮಾ (Ghajini) ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದವರು, ನಂತರ 2009ರಲ್ಲಿ ತೆರೆ ಕಂಡ 3 ಈಡಿಯಟ್ಸ್ (3 idiots) ಸಿನಿಮಾ ದಾಖಲೆಗಳನ್ನು ಮುರಿಯಿತು. ಪಿಕೆ (PK) 2014ರಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಕೊನೆಯದಾಗಿ ದಂಗಲ್ ಸಿನಿಮಾ (Dangal) ಬಳಿಕ ಅಷ್ಟಾಗಿ ಆಮೀರ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿಲ್ಲ. ಇದೀಗ ದಂಗಲ್ ಚಿತ್ರದ 7 ವರ್ಷಗಳ ಸುದೀರ್ಘ ದಾಖಲೆಯನ್ನು ಶಾರುಖ್ ಖಾನ್ ಅವರ ‘ಪಠಾಣ್’ ಮುರಿದಿದೆ.
ಗಜಿನಿ, 3 ಈಡಿಯಟ್ಸ್, PK, ಮತ್ತು ದಂಗಲ್‌ನಂತಹ ಚಿತ್ರಗಳೊಂದಿಗೆ ಆಮೀರ್ ಖಾನ್ ಕಳೆದ 14 ವರ್ಷಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು. ಅಮೀರ್ ಖಾನ್ ತಮ್ಮದೇ ದಾಖಲೆಗಳನ್ನು ನಿರ್ಮಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ವಿಮರ್ಶಕ ಮತ್ತು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಸುಮಿತ್ ಕಡೆಲ್ ಕಳೆದ 14 ವರ್ಷಗಳಿಂದ ಆಮೀರ್ ಖಾನ್ ಅಗ್ರಸ್ಥಾನದಲ್ಲಿ ಹೇಗೆ ಉಳಿದುಕೊಂಡಿದ್ದಾರೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Pathaan Movie: ಕೆಜಿಎಫ್-2 ಹಿಂದಿ ಆವೃತ್ತಿಯ ಲೈಫ್ ಟೈಮ್ ಗಳಿಕೆಯನ್ನು ಮೀರುವತ್ತ ʻಪಠಾಣ್ʼ ದಾಪುಗಾಲು
ʻʻನನಗೆ ಹಠಾತ್ ಅರಿವಾಯಿತು, ಕಳೆದ 14 ವರ್ಷಗಳಲ್ಲಿ ಆಮೀರ್ ವಿಭಿನ್ನ ಚಲನಚಿತ್ರಗಳನ್ನು ನೀಡಿದ್ದರು. ಆಮೀರ್ ಖಾನ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹೀರೊ ಆಗಿದ್ದಾರೆ. ಹಿಂದಿ ಚಲನಚಿತ್ರೋದ್ಯಮಕ್ಕೆ ಈ ಮೂಲಕ ಸೇವೆ ಸಲ್ಲಿಸಿದ್ದಾರೆ. ಇದೀಗ ಶಾರುಖ್ ʻಪಠಾಣ್ʼ ಸಿನಿಮಾ ಮೂಲಕ ಆ ಸ್ಥಾನವನ್ನು ಪಡೆದುಕೊಂಡಿದ್ದಾರೆʼʼಎಂದು ಬರೆದುಕೊಂಡಿದ್ದಾರೆ. “ಗಜಿನಿ 100 ಕೋಟಿ ರೂ. ದಾಟಿದ ಮೊದಲ ಚಿತ್ರ, 3 ಈಡಿಯಟ್ಸ್ 200 ಕೋಟಿ ರೂ. PK 300-ಕೋಟಿ ರೂ. ಮತ್ತು ದಂಗಲ್ 400 ಕೋಟಿ ರೂ. ಗಳಿಕೆ ಕಂಡ ಮೊದಲ ಹಿಂದಿ ಚಿತ್ರ. ಇದೀಗ ಹದಿನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಅಮೀರ್ ಖಾನ್ ಅಲ್ಲದ ಚಿತ್ರವೊಂದು ಅಗ್ರಸ್ಥಾನದಲ್ಲಿದೆ. ಅದುವೇ ಪಠಾಣ್ʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Pathaan Movie : ಹನ್ನೆರಡೇ ದಿನಗಳಲ್ಲಿ 830 ಕೋಟಿ ರೂ. ದಾಟಿದ ಪಠಾಣ್ ಕಲೆಕ್ಷನ್
ಇದೀಗ ಆಮೀರ್ ಖಾನ್ ಅಲ್ಲದ ಚಿತ್ರವು ಅಗ್ರಸ್ಥಾನದಲ್ಲಿದೆ. ದಂಗಲ್ ಭಾರತದ ನಿವ್ವಳ ಸಂಗ್ರಹವು 387 ಕೋಟಿ ರೂ. ಆಗಿತ್ತು ಮತ್ತು ಪ್ರಪಂಚದಾದ್ಯಂತದ ಒಟ್ಟು ಸಂಗ್ರಹವು 2000 ಕೋಟಿ ರೂ. ಮೀರಿತ್ತು ಎಂದು ವರದಿಯಾಗಿದೆ. ಹಲವಾರು ಚಿತ್ರಗಳು ಬಂದು ಹೋದದ್ದೇ ಆದರೂ ದಂಗಲ್ ಮೀರಿಸುವ ಸಿನಿಮಾ ಬಂದಿರಲಿಲ್ಲ. ಆದರೆ ಇದೀಗ ಪಠಾಣ್ ಸಿನಿಮಾ ಈ ಎಲ್ಲ ದಾಖಲೆಗಳನ್ನು ಮೀರಿಸುವಲ್ಲಿ ದಾಪುಗಾಲು ಇಡುತ್ತಿದೆ.