ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಮತ್ತು ನಟಿ ಫಾತಿಮಾ ಸನಾ ಶೇಖ್ (Fatima Sana Shaikh) ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಊಹಾಪೋಹಗಳು ಮತ್ತೆ ಮರುಕಳಿಸಿವೆ. ಇಬ್ಬರೂ ಜತೆಗೂಡಿ ಆಡುತ್ತಿರುವ ವಿಡಿಯೊ ಹಾಗೂ ವಿವಾದಾತ್ಮಕ ವ್ಯಕ್ತಿಯಂತಲೇ ಖ್ಯಾತಿ ಪಡೆದ ಕಮಾಲ್ ಆರ್ ಖಾನ್ ಅಕಾ (ಕೆಆರ್‌ಕೆ) ಟ್ವೀಟ್‌ನಿಂದಾಗಿ ಇವರಿಬ್ಬರ ಸಂಬಂಧದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಆಮೀರ್ ಖಾನ್ ಶೀಘ್ರದಲ್ಲೇ ಫಾತಿಮಾ ಸನಾ ಶೇಖ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಕಮಾಲ್ ಆರ್. ಖಾನ್ (Kamaal R Khan) ಟ್ವೀಟ್ ಮಾಡಿದ್ದಾರೆ.
ದಂಗಲ್ ಸಿನಿಮಾ ಸಮಯದಲ್ಲಿಯೇ ಆಮೀರ್ ಮತ್ತು ಫಾತಿಮಾ ಸನಾ ಶೇಖ್ ಮಧ್ಯೆ ಪ್ರೀತಿ ಹುಟ್ಟಿತ್ತು ಎಂಬ ಸುದ್ದಿಗಳು ವೈರಲ್ ಆಗಿತ್ತು. ಇವರಿಬ್ಬರ ಸಂಬಂಧದ ವದಂತಿಯು ಹಲವಾರು ವರ್ಷಗಳಿಂದ ಚರ್ಚೆಗಳಾಗುತ್ತಿತ್ತು. ಅನೇಕ ಸೆಲೆಬ್ರಿಟಿಗಳ ಬಗ್ಗೆ ಅವರು ಆಕ್ಷೇಪಾರ್ಹವಾಗಿ ಟ್ವೀಟ್ ಮಾಡುವ ಕಮಾಲ್ ಆರ್. ಖಾನ್ ಇದೀಗ ʻʻಆಮೀರ್ ಖಾನ್ ತಮ್ಮ ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆಮೀರ್ ಖಾನ್ ತಮ್ಮ ಚಿತ್ರದ ಸಮಯದಿಂದಲೂ ಸನಾ ಜತೆ ಡೇಟಿಂಗ್ ಮಾಡುತ್ತಿದ್ದಾರೆʼʼ ಎಂದು ಟ್ವೀಟ್ ಮಾಡಿದ್ದಾರೆ.
ಆಮೀರ್ ಮತ್ತು ಮಾಜಿ ಪತ್ನಿ ಕಿರಣ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು 2021ರಲ್ಲಿ ವಿಚ್ಛೇದನ ಪಡೆಯುವದರ ಮೂಲಕ ಕೊನೆಗೊಳಿಸಿದ್ದರು. ಮಗ ಆಜಾದ್ ರಾವ್ ಖಾನ್ ಸಲುವಾಗಿ ಆಮೀರ್ ಮತ್ತು ಕಿರಣ್ ರಾವ್ ಇಬ್ಬರೂ ಪೋಷಕರಾಗಿ ಮುಂದುವರೆಯುವುದಾಗಿ ಹೇಳಿದ್ದರು. ವಿಚ್ಛೇದನ ನೀಡಿದ ಬಳಿಕ ಆಮೀರ್ ಮತ್ತು ಫಾತಿಮಾ ಸನಾ ಶೇಖ್ ಬಗ್ಗೆ ಅನೇಕ ಬಗೆಯ ಗಾಸಿಪ್‌ಗಳು ಹಬ್ಬಿದ್ದುಂಟು. ನಟಿ ಫಾತಿಮಾ ಸಹಾ ಶೇಖ್ ಜತೆ ಆಮೀರ್ ಮದುವೆಯಾಗಲಿದ್ದಾರೆ ಎಂಬುವ ಸುದ್ದಿಯೂ ಇದೆ.
ಇದನ್ನೂ ಓದಿ: Aamir Khan: ಧ್ಯಾನ ಮಾಡಲು ನೇಪಾಳಕ್ಕೆ ಆಮೀರ್ ಖಾನ್ ಹೋಗಿದ್ಯಾಕೆ?
ಕಮಾಲ್ ಆರ್. ಖಾನ್ (Kamaal R Khan) ಟ್ವೀಟ್
Breaking News:- Aamir Khan is going to get married with his daughter’s age Fatima Sana Shaikh soon. Aamir Khan is dating Sana from the time of their film #Dangal.
— KRK (@kamaalrkhan) May 25, 2023
ಈ ಹಿಂದೆ ಫಿಲ್ಮ್‌ಫೇರ್‌ನೊಂದಿಗೆ ಫಾತಿಮಾ ಸನಾ ಶೇಖ್ ಈ ವದಂತಿಗಳ ಬಗ್ಗೆ ಮಾತನಾಡಿ “ಈ ಗಾಸಿಪ್‌ಗಳು ಹರಿದಾಡಿದಾಗ ನನಗೆ ಬಹಳ ಬೇಸರವಾಯಿತು. ಕೆಲವರು ನಾನು ‘ಒಳ್ಳೆಯ ವ್ಯಕ್ತಿಯಲ್ಲ’ ಎಂದು ಭಾವಿಸುತ್ತಾರೆ. ನಾನು ಅನಗತ್ಯ ವಿಷಯಗಳನ್ನು ನಿರ್ಲಕ್ಷಿಸಲು ಕಲಿತಿದ್ದೇನೆʼʼಎಂದಿದ್ದರು.
ಆಮೀರ್ ಸಿನಿಮಾದಲ್ಲಿ ನಟನೆಯಿಂದ ದೂರವಿದ್ದರೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದಾಗಿ ಆಮೀರ್ ಖಾನ್ ಹೇಳಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು.