Site icon Vistara News

Aamir Khan: ಹೊಸ ಸಿನಿಮಾ ಘೋಷಿಸಿದ ಆಮೀರ್ ಖಾನ್; ‘ತಾರೆ ಜಮೀನ್ ಪರ್’ಗೆ ಲಿಂಕ್‌ ಇದ್ಯಾ?

Aamir Khan Taare Zameen Par

ಬೆಂಗಳೂರು: ‘ತಾರೇ ಜಮೀನ್​ ಪರ್’ ಸಿನಿಮಾದಲ್ಲಿ ನಟಿಸುವ ಮೂಲಕ ಫೇಮಸ್ ಆದವರು ದರ್ಶೀಲ್ ಸಫಾರಿ. (Darsheel Safary ) 2007ರಲ್ಲಿ ದರ್ಶೀಲ್ ಸಫಾರಿ ಮತ್ತು ಆಮೀರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಆಮೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಚಿಕ್ಕ ಹುಡುಗನ ಕುರಿತಾಗಿ ಈ ಸಿನಿಮಾ ಇತ್ತು. ಅಮೋಲ್ ಗುಪ್ತೆ ಬರೆದ ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಇದೀಗ ಆಮೀರ್ ಖಾನ್ ತಮ್ಮ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಸಿನಿಮಾ (Sitare Zameen Par) ಘೋಷಿಸಿದ್ದಾರೆ. ಚಿತ್ರದ ಥೀಮ್ ‘ತಾರೆ ಜಮೀನ್ ಪರ್’ಅನ್ನು ಹೋಲುತ್ತದೆ ಎಂದು ನಟ ಉಲ್ಲೇಖಿಸಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತ ಬಳಿಕ ಆಮೀರ್‌ ಮುಂದಿನ ಪ್ರಾಜೆಕ್ಟ್‌ ಘೋಷಿಸಿದ್ದಾರೆ. ಈ ಬಗ್ಗೆ ಆಮೀರ್‌ ಮಾಧ್ಯಮವೊಂದರಲ್ಲಿ ಮಾತನಾಡಿ “ನಾನು ಸಿನಿಮಾ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ, ಈಗ ನಾನು ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ನಾನು ಶೀರ್ಷಿಕೆಯನ್ನು ಹೇಳಬಲ್ಲೆ. ಚಿತ್ರದ ಶೀರ್ಷಿಕೆ ‘ಸಿತಾರೆ ಜಮೀನ್ ಪರ್’. ನಿಮಗೆ ನನ್ನ ‘ತಾರೆ ಜಮೀನ್ ಪರ್’ ಚಿತ್ರ ನೆನಪಿರಬೇಕು. ಈ ಚಿತ್ರದ ಹೆಸರು ‘ಸಿತಾರೆ ಜಮೀನ್ ಪರ್’ ಏಕೆಂದರೆ ನಾವು ಅದೇ ಥೀಮ್‌ನೊಂದಿಗೆ ಮುಂದೆ ಹೋಗುತ್ತಿದ್ದೇವೆ. ‘ತಾರೆ ಜಮೀನ್ ಪರ್’ ಭಾವನಾತ್ಮಕ ಚಿತ್ರವಾಗಿತ್ತು. ಈ ಚಿತ್ರ ನಿಮ್ಮನ್ನು ನಗಿಸುತ್ತದೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮಗೆ ಮನರಂಜನೆ ನೀಡುತ್ತದೆʼಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Lalita Lajmi Passes Away: ಬಾಲಿವುಡ್‌ ನಟ ಗುರುದತ್‌ ಸಹೋದರಿ, ‌’ತಾರೆ ಜಮೀನ್‌ ಪರ್’ ನಟಿ ಲಲಿತಾ ಲಜ್ಮಿ ಇನ್ನಿಲ್ಲ

ನಟ ಮಾತು ಮುಂದುವರಿಸಿʻʻ ಆದರೆ ಸಿನಿಮಾ ಥೀಮ್ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಬಹಳ ಯೋಚನೆ ಮಾಡಿ ಇಟ್ಟುಕೊಂಡಿದ್ದೇವೆ. ನಮ್ಮೆಲ್ಲರಲ್ಲೂ ನ್ಯೂನತೆ ಹಾಗೂ ದೌರ್ಬಲ್ಯಗಳು ಇರುತ್ತವೆ. ಜತೆಗೆ ನಮ್ಮೆಲ್ಲರಿಗೂ ಏನಾದರೂ ವಿಶೇಷತೆಯೂ ಇರುತ್ತದೆ. ಆ ಚಿತ್ರದಲ್ಲಿ ವಿಶೇಷ ಮಗು ಇಶಾನ್ ಪಾತ್ರವಾಗಿತ್ತು. ನನ್ನ ಪಾತ್ರವು ‘ತಾರೆ ಜಮೀನ್ ಪರ್’ನಲ್ಲಿ ಆ ಪಾತ್ರಕ್ಕೆ ಸಹಾಯ ಮಾಡಿತ್ತು. ‘ಸಿತಾರೆ ಜಮೀನ್ ಪರ್’ನಲ್ಲಿ, ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುವ ಆ ಒಂಬತ್ತು ಹುಡುಗರು ನನಗೆ ಸಹಾಯ ಮಾಡುತ್ತಾರೆ, ಹಾಗಾಗಿ ಕಥೆ ವಿರುದ್ಧವಾಗಿರಲಿದೆʼʼಎಂದರು.

ತಾರೆ ಜಮೀನ್ ಪರ್’ ಸಿನಿಮಾದಲ್ಲಿ ಹುಡುಗನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಹೆತ್ತವರು ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ಶಿಕ್ಷಕ ಆಮೀರ್‌ ಖಾನ್ ಭೇಟಿಯಾಗುತ್ತಾರೆ. ಈ ಸಿನಿಮಾದಲ್ಲಿ ದರ್ಶೀಲ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ‘ತಾರೆ ಜಮೀನ್ ಪರ್’ 21 ಡಿಸೆಂಬರ್ 2007 ರಂದು ಬಿಡುಗಡೆಯಾಗಿತ್ತು.

Exit mobile version