ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಪುತ್ರಿ, ಇರಾ ಖಾನ್ (Ira Khan and Nupur Wedding) ಜನವರಿ 10ರಂದು ಉದಯಪುರದಲ್ಲಿ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ವಿವಾಹವಾದರು. ಮಗಳ ಮದುವೆಯಲ್ಲಿ ಆಮೀರ್ ಭಾವುಕರಾಗಿ ಕಣ್ಣೀರಿಟ್ಟರು. ಮಗಳು ಇರಾಳ ಮದುವೆಗೂ ಮುನ್ನ ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಮಗಳ ಮದುವೆಗೆ ನಾನು ಅಳುವುದು ಖಂಡಿತ ಎಂದು ಹೇಳಿದ್ದರು. ಇದೀಗ ಆಮೀರ್ ಕಣ್ಣು ಒರೆಸಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ.
ರಾಜಸ್ಥಾನದ ಉದಯಪುರದಲ್ಲಿ ಇರಾ ಖಾನ್ ಮತ್ತು ನೂಪುರ್ ಶಿಖರೆ ಮದುವೆಯ ಸಂಭ್ರಮ ಜೋರಾಗಿಯೇ ನಡೆದಿದೆ. ಇರಾ ಖಾನ್ ಬಿಳಿ ಗೌನ್‌ನಲ್ಲಿ ಮಿಂಚಿದರು. ಜನವರಿ 3ರಂದು ಈ ಯುವಜೋಡಿ ರಿಜಿಸ್ಟರ್ ಮದುವೆಯಾಗಿದೆ. ಜನವರಿ 10ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು. ಜನವರಿ 8ರ ಬೆಳಗ್ಗೆ ಮೆಹಂದಿ ಕಾರ್ಯಕ್ರಮ ನೆರವೇರಿತ್ತು. ಮೆಹಂದಿ ಸಂಭ್ರಮದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೆಹಂದಿ ಸಮಾರಂಭದಲ್ಲಿ ಇರಾ ಹಾಲ್ಟರ್ ನೆಕ್ ಉಡುಪನ್ನು ಧರಿಸಿದ್ದರು. ಜನವರಿ 13 ರಂದು, ಬಿಕೆಸಿ ಜಿಯೋ ಸೆಂಟರ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ. ಅನೇಕ ಗಣ್ಯರನ್ನು ಇನ್ವೈಟ್ ಮಾಡಿದ್ದಾರೆ ಎನ್ನಲಾಗಿದೆ.
ಇದೀಗ ವೈರಲ್ ಆದ ವಿಡಿಯೊದಲ್ಲಿ ಇರಾ ಮತ್ತು ನೂಪುರ್ ಚುಂಬಿಸಿ ಉಂಗುರ ಬದಲಾಯಿಸಿಕೊಳ್ಳುತ್ತಿದ್ದಂತೆ ಆಮೀರ್ ಭಾವುಕರಾದರು. ಆಮೀರ್ ಖಾನ್ ತನ್ನ ಮಾಜಿ ಪತ್ನಿ ರೀನಾ ದತ್ತಾ ಅವರ ಪಕ್ಕದಲ್ಲಿ ನಿಂತು ಮಗಳನ್ನು ಕಂಡು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: Ira Khan and Nupur Wedding: ಆಮೀರ್ ಖಾನ್ ಪುತ್ರಿಯ ಅದ್ಧೂರಿ ಮದುವೆ; ಗೌನ್‌ನಲ್ಲಿ ಮಿಂಚಿದ ಇರಾ ಖಾನ್!
We're not crying, you are… 🥹🥹
— Fab Occasions™ ( The Fab App ) (@the_fab_app) January 11, 2024
Aamir Khan’s daughter Ira Khan gets married to Nupur Shikhare!! ♥️
Congratulations to both of you for your New Beginnings.. 😊#indianbride #indianwedding #couplelove #couplegoals #irakhan #IraKhanWedding #nupurshikhare #AamirKhan #udaipur pic.twitter.com/dKURiPjDa9
ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಕರಣ್ ಜೋಹರ್, ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ರಾಜ್ ಕುಮಾರ್ ಹಿರಾನಿ, ಅಶುತೋಷ್ ಗೋವಾರಿಕರ್, ಜೂಹಿ ಚಾವ್ಲಾ, ರಾಕೇಶ್ ಓಂಪ್ರಕಾಶ್ ಮೆಹ್ರಾ ಸೇರಿ ಹಲವರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
Baba ve kızı. Çok güzelsiniz..😍
— sunshine☀️ (@Esma0830) January 11, 2024
👨👧💃❣🦋🍀#AamirKhan #IraKhan pic.twitter.com/wo1RoEWqYz
ಆಮೀರ್ ಅಂಬಾನಿ ಕುಟುಂಬಕ್ಕೂ ಆಹ್ವಾನ ನೀಡಿದ್ದಾರೆ. ಜನವರಿ 3ರಂದು ನಡೆದ ಆರತಕ್ಷತೆಯಲ್ಲಿ ಅಂಬಾನಿ ಕುಟುಂಬ ಉಪಸ್ಥಿತಿ ಇತ್ತು. ಇದರೊಂದಿಗೆ ಮುಂಬೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಗೆ ದಕ್ಷಿಣ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿದೆ.
Ira sen ne ara bu kadar büyüdün 😍 #AamirKhan #IraKhan pic.twitter.com/NWdM3XKDSp
— Kybele⚡ (@blackeyedssusan) January 11, 2024
ಇನ್ನು ವಿವಾಹದ ಸಂದರ್ಭದಲ್ಲಿ ನೂಪುರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಮದುಮಗ ಸಾಮಾನ್ಯವಾಗಿ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆದಿತ್ತು.