Site icon Vistara News

Aamir Khan | ನಿಶ್ಚಿತಾರ್ಥ ಮಾಡಿಕೊಂಡ ಆಮಿರ್​ ಖಾನ್ ಪುತ್ರಿ ಇರಾ ಖಾನ್‌!

Aamir Khan

ಬೆಂಗಳೂರು : ಬಾಲಿವುಡ್‌ ನಟ ಆಮಿರ್​ ಖಾನ್ (Aamir Khan)​ ಹಾಗೂ ಮಾಜಿ ಪತ್ನಿ ರೀನಾ ದತ್ತ ಪುತ್ರಿ ಇರಾ ಖಾನ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜತೆ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಈ ಹಿಂದೆಯಷ್ಟೇ ಇಟಲಿಯಲ್ಲಿ ನಡೆದ ಐರನ್‌ಮ್ಯಾನ್‌ ಸೈಕ್ಲಿಂಗ್‌ ಇವೆಂಟ್‌ ಒಂದರಲ್ಲಿ ಇರಾ ಖಾನ್‌ಗೆ ರಿಂಗ್‌ ತೊಡಿಸಿ ನೂಪುರ್ ಶಿಖರೆ ಪ್ರಪೋಸ್‌ ಮಾಡಿದ್ದರು. ಇರಾ ಖಾನ್‌ ಹಾಗೂ ನೂಪುರ್ ಶಿಖರೆ ವಿಡಿಯೊವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದರು. ಈ ಬಗ್ಗೆ ನಟ ನಟಿಯರು ಕಾಮೆಂಟ್‌ ಮೂಲಕ ಶುಭ ಹಾರೈಸಿದ್ದರು. ಇರಾ ಖಾನ್‌ ಹಾಗೂ ನೂಪುರ್ ಶಿಖರೆ ಎರಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿರುವುದು ಈ ಹಿಂದೆ ಸುದ್ದಿಯಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಪೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ನೆಟ್ಟಿಗರು ಇವರಿಬ್ಬರ ಮದುವೆ ಯಾವಾಗ ಎಂದು ಕಮೆಂಟ್‌ ಮೂಲಕ ಕೇಳುತ್ತಿದ್ದರು.

ಇದನ್ನೂ ಓದಿ | Sara Ali Khan | ಬಾಲಿವುಡ್‌ ನಟಿ ಸಾರಾ ಜತೆ ಡೇಟಿಂಗ್ ; ಶುಬ್ಮನ್‌ ಗಿಲ್ ಕೊಟ್ಟ ಉತ್ತರ ಹೀಗಿದೆ

ಇದೀಗ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು , ಶೀಘ್ರವೇ ವಿವಾಹವಾಗಲಿದ್ದಾರೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿದೆ. ನವೆಂಬರ್ 18ರಂದು ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನೂಪುರ್ ಶಿಖರೆ ಫಿಸಿಕಲ್ ಟ್ರೈನರ್ ಆಗಿದ್ದರು. ಆಮಿರ್ ಖಾನ್ ಹಾಗೂ ಇರಾ ಖಾನ್‌ಗೆ ಫಿಸಿಕಲ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಫಿಸಿಕಲ್ ಟ್ರೈನರ್ ಅನ್ನೇ ಇರಾ ಖಾನ್ ಪ್ರೀತಿಸಿದ್ದರು.

ಇದನ್ನೂ ಓದಿ | Ira khan | ನೂಪುರ್ ಶಿಖರೆ ಜತೆ ಎಂಗೇಜ್‌ ಆದ ಆಮಿರ್​ ಖಾನ್ ಪುತ್ರಿ ಇರಾ ಖಾನ್‌: ವಿಡಿಯೊ ವೈರಲ್‌!

Exit mobile version