Site icon Vistara News

Aamir Khan: ಆಮೀರ್‌ ಖಾನ್‌ ಮಾಜಿ ಪತ್ನಿಯ ಡ್ಯಾನ್ಸ್‌ ಫೋಟೊ ವೈರಲ್‌!

Reena dance with Nupur

ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan) ಅವರು ತಮ್ಮ ಪುತ್ರಿ ಇರಾ ಖಾನ್‌ ಅವರ ಮದುವೆ ಜನವರಿ 3ರಂದು ಎಂದು ಘೋಷಿಸಿದ್ದಾಗಿದೆ. ನೂಪುರ್ ಶಿಖರೆ ಅವರೊಂದಿಗಿನ ನಿಶ್ಚಿತಾರ್ಥದ ಹಳೆಯ ಫೋಟೊಗಳನ್ನು ಇದೀಗ ಇರಾ ಖಾನ್‌ ಹಂಚಿಕೊಂಡಿದ್ದಾರೆ. ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರು ನೂಪುರ್ ಅವರೊಂದಿಗೆ ನೃತ್ಯ ಮಾಡಿರುವ ಫೋಟೊಗಳು ವೈರಲ್‌ ಆಗಿವೆ.

ಇಟಲಿಯಲ್ಲಿ ನಡೆದ ಐರನ್‌ಮ್ಯಾನ್‌ ಸೈಕ್ಲಿಂಗ್‌ ಇವೆಂಟ್‌ ಒಂದರಲ್ಲಿ ಇರಾ ಖಾನ್‌ಗೆ ರಿಂಗ್‌ ತೊಡಿಸಿ ನೂಪುರ್ ಶಿಖರೆ ಪ್ರಪೋಸ್‌ ಮಾಡಿದ್ದರು. ಇದಾದ ಬಳಿಕ ನವೆಂಬರ್ 18ರಂದು ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈ ಹಿಂದೆ ನಿಶ್ಚಿತಾರ್ಥದ ಗ್ಲಿಂಪ್‌ಗಳನ್ನು ಹಂಚಿಕೊಂಡಿದ್ದ ಇರಾ, ಇದೀಗ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರೀನಾ ದತ್ತಾ ಅವರೊಂದಿಗೆ ನೂಪುರ್ ನೃತ್ಯ ಮಾಡಿದ್ದಾರೆ.

ಇಟಲಿಯಲ್ಲಿ ನಡೆದ ಐರನ್‌ಮ್ಯಾನ್‌ ಸೈಕ್ಲಿಂಗ್‌ ಇವೆಂಟ್‌ ಒಂದರಲ್ಲಿ ಇರಾ ಖಾನ್‌ಗೆ ರಿಂಗ್‌ ತೊಡಿಸಿ ನೂಪುರ್ ಶಿಖರೆ ಪ್ರಪೋಸ್‌ ಮಾಡಿದ್ದರು. ಇರಾ ಖಾನ್‌ ಹಾಗೂ ನೂಪುರ್ ಶಿಖರೆ ಈ ವಿಡಿಯೊವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದರು. ಈ ಬಗ್ಗೆ ನಟ – ನಟಿಯರು ಕಾಮೆಂಟ್‌ ಮೂಲಕ ಶುಭ ಹಾರೈಸಿದ್ದರು. ಇರಾ ಖಾನ್‌ ಹಾಗೂ ನೂಪುರ್ ಶಿಖರೆ ಎರಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿರುವುದು ಈ ಹಿಂದೆ ಸುದ್ದಿಯಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಪೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ನೆಟ್ಟಿಗರು ಇವರಿಬ್ಬರ ಮದುವೆ ಯಾವಾಗ ಎಂದು ಕಮೆಂಟ್‌ ಮೂಲಕ ಕೇಳುತ್ತಿದ್ದರು.

ಇದನ್ನೂ ಓದಿ: Aamir Khan: ಹೊಸ ಸಿನಿಮಾ ಘೋಷಿಸಿದ ಆಮೀರ್ ಖಾನ್; ‘ತಾರೆ ಜಮೀನ್ ಪರ್’ಗೆ ಲಿಂಕ್‌ ಇದ್ಯಾ?

ಈ ಹಿಂದೆ ಇರಾ ಖಾನ್‌ ಹಾಗೂ ನೂಪುರ್ ಶಿಖರೆ ಈದ್‌ ಹಾಗೂ ದೀಪಾವಳಿಯಲ್ಲಿ ಕುಟುಂಬದೊಂದಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಮೀರ್‌ ಖಾನ್‌ ಕೂಡ ಕ್ರಿಸ್‌ಮಸ್‌ ಸಂದರ್ಭದಲ್ಲಿ ಇವರ ಜತೆ ಕಾಣಿಸಿಕೊಂಡಿದ್ದರು. ಹಾಗೇ ಇರಾ ಮತ್ತು ನೂಪುರ್ ಕ್ರಿಸ್‌ಮಸ್‌ಗೂ ಮುನ್ನ ಜರ್ಮನಿಗೆ ಒಟ್ಟಿಗೆ ಪ್ರಯಾಣಿಸಿದ್ದರು.

Exit mobile version