Site icon Vistara News

Aamir Khan: ಧ್ಯಾನ ಮಾಡಲು ನೇಪಾಳಕ್ಕೆ ಆಮೀರ್‌ ಖಾನ್‌ ಹೋಗಿದ್ಯಾಕೆ?

Aamir Khan flies to Nepal for 10-day meditation programme

ಬೆಂಗಳೂರು: ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan) ʻಲಾಲ್‌ ಸಿಂಗ್‌ ಛಡ್ಡಾʼ ಸಿನಿಮಾ ಬಳಿಕ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದರು. ಇದೀಗ 10 ದಿನಗಳ ವಿಪಸ್ಸನ ಧ್ಯಾನ ಕಾರ್ಯಕ್ರಮಕ್ಕಾಗಿ ನೇಪಾಳಕ್ಕೆ ಹಾರಿದ್ದಾರೆ. ಕಠ್ಮಂಡುವಿನಿಂದ ಸುಮಾರು 12 ಕಿಮೀ ದೂರದಲ್ಲಿರುವ ಬುಧನೀಲಕಂಠದಲ್ಲಿರುವ (Budhanilkantha) ವಿಪಸ್ಸನ ಧ್ಯಾನ ಕೇಂದ್ರದಲ್ಲಿ ನಟ ಭಾಗವಹಿಸಲಿದ್ದಾರೆ. ಇದು ಕಠ್ಮಂಡುವಿನ ಪ್ರಮುಖ ಧ್ಯಾನ ಕೇಂದ್ರಗಳಲ್ಲಿ ಹೆಸರುವಾಸಿಯಾಗಿದೆ.

ನೇಪಾಳದ ವಿಪಸ್ಸನ ಕೇಂದ್ರದ ಅಧಿಕಾರಿ ರೂಪ ಜ್ಯೋತಿ, “ಆಮೀರ್‌ ಖಾನ್‌ 11 ದಿನ ಧ್ಯಾನ ಕಾರ್ಯಕ್ರಮದಲ್ಲಿ ಒಳಗಾಗಲು ಬಂದಿದ್ದಾರೆ. ಅವರು ಈಗಾಗಲೇ ಧ್ಯಾನ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಬುಧನೀಲಕಂಠಕ್ಕೆ ಬಂದು ಧ್ಯಾನ ಪ್ರಾರಂಭಿಸಿದರು” ಎಂದು ಹೇಳಿಕೆ ನೀಡಿದ್ದಾರೆ.

ಆಮೀರ್‌ ಖಾನ್‌ ಮೇ 7ರ ಬೆಳಗ್ಗೆ ವಿಸ್ತಾರಾ ಏರ್‌ಲೈನ್ಸ್‌ ಮೂಲಕ ಕಠ್ಮಂಡು ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ . 2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಯುನಿಸೆಫ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮೀರ್ ಕೊನೆಯ ಬಾರಿಗೆ ನೇಪಾಳಕ್ಕೆ ಭೇಟಿ ನೀಡಿದ್ದರು.

ಕಳೆದ ವರ್ಷ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ನಂತರ, ನಟನೆಯಿಂದ ಬ್ರೇಕ್‌ ತೆಗೆದುಕೊಳ್ಳುವುದಾಗಿ ಆಮೀರ್ ಘೋಷಿಸಿದ್ದರು. ಅದಾದ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಘೋಷಿಸಿಲ್ಲ. ಆಗಾಗ ಚಲನಚಿತ್ರ, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: Aamir Khan: ಜೈನ ಧರ್ಮದ ತತ್ವ ಪರಿಪಾಲನೆಯಲ್ಲಿರುವ ನಟ ಆಮಿರ್‌ ಖಾನ್‌; ಪ್ರಾರ್ಥನಾ ಸಭೆಯಲ್ಲೂ ಭಾಗಿ!

ಸದ್ಯ ಸ್ಪಾನಿಷ್ (Spanish) ಸಿನಿಮಾ ರಿಮೇಕ್, ಆರ್​ಎಸ್ ಪ್ರಸನ್ನ ಅವರ ಚಾಂಪಿಯನ್ಸ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಗಜನಿ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದೇ ವಿಚಾರವಾಗಿ ನಟ ಸಿನಿಮಾದ ಒರಿಜಿನಲ್ ಮೇಕರ್ಸ್ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

Exit mobile version