ಬೆಂಗಳೂರು: ಆಮೀರ್ ಖಾನ್ (Aamir Khan) ನಟನೆಯಿಂದ ವಿರಾಮ ತೆಗೆದುಕೊಂಡಿರಬಹುದು, ಆದರೆ ಅವರು ಸಾಧ್ಯವಾದಷ್ಟು ಸಿನಿಮಾ ನಿರ್ಮಾಣದತ್ತ ಗಮನ ಹರಿಸುತ್ತಿದ್ದಾರೆ. ದಿ ಚಾಂಪಿಯನ್ಸ್ ರಿಮೇಕ್, ಜಯ ಜಯ ಜಯ ಹೇ ರಿಮೇಕ್, ಪ್ರೀತಮ್ ಪ್ಯಾರೆ, ಲಪಟ ಲೇಡೀಸ್ ಮತ್ತು ಲವ್ ಟುಡೇ ಹೀಗೆ ಈ ಎಲ್ಲ ಸಿನಿಮಾಗಳ ಭಾಗವಾಗಿದ್ದಾರೆ ಎನ್ನುವಾಗಲೇ ಹೊಸ ಸುದ್ದಿಯೊಂದು ಬಂದಿದೆ. ಆಮಿರ್ ಖಾನ್ ಭಾರತೀಯ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ (Ujjwal Nikam) ಅವರ ಜೀವನ ಆಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾವನ್ನು ದಿನೇಶ್ ವಿಜಾನ್ (Dinesh Vijan) ನಿರ್ದೇಶನ ಮಾಡುತ್ತಿದ್ದಾರೆ. ಎಂದು ವರದಿಯಾಗಿದೆ.
ಈ ಬಗ್ಗೆ ಆಮಿರ್ ಅವರು ಸ್ವತಃ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆಯೇ ಅಥವಾ ಬೇರೆ ಪಾತ್ರ ನಟಿಸಲಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ. ಆದರೆ ಈ ಬಗ್ಗೆ ಈಗಾಗಲೇ ಮಾತು ಕತೆ ನಡೆದಿದ್ದು, ತಂಡ ಪಾತ್ರವರ್ಗಕ್ಕೆ ಸಂಬಂಧಿಸಿದಂತೆ ಪ್ಲ್ಯಾನ್ ಮಾಡುತ್ತಿದೆ ಎಂತಲೂ ವರದಿಯಾಗಿದೆ. ಇದರಲ್ಲಿ ಆಮಿರ್ ನಟನೆ ಅಥವಾ ನಿರ್ಮಾಪಕನಾಗಿ ಈ ಪ್ರಾಜೆಕ್ಟ್‌ಗೆ ಭಾಗವಾಗಬಹುದು” ಎನ್ನಲಾಗುತ್ತಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈ ಹಿಂದೆ ಟ್ವೀಟ್ ಮಾಡಿದದ್ದರು. ಆಮಿರ್ ಖಾನ್ 2024ರ ಕ್ರಿಸ್ಮಸ್ ಗೆ ತಮ್ಮ ಮುಂದಿನ ಸಿನಿಮಾವನ್ನು ರಿಲೀಸ್ ಮಾಡಬಿದ್ದಾರೆ. ಆಮೀರ್ ಖಾನ್ ಪ್ರೊಡಕ್ಷನ್ಸ್ ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಇದರ ಟೈಟಲ್ ಇನ್ನು ಅಂತಿಮವಾಗಿಲ್ಲ. 2024 ರ ಡಿಸೆಂಬರ್ 20 ರಂದು ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಮುಂದಿನ ವರ್ಷದ ಜನವರಿ 20 ರಂದು ಸಿನಿಮಾ ಸಟ್ಟೇರಲಿದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Aamir Khan: ಆಮೀರ್ ಖಾನ್ ಮಾಜಿ ಪತ್ನಿಯರು ಭೇಟಿಯಾದಾಗ… ಅಷ್ಟೊಂದು ನಕ್ಕಿದ್ದೇಕೆ?
ಉಜ್ವಲ್ ನಿಕಮ್ ಪ್ರಸಿದ್ಧ ಭಾರತೀಯ ವಕೀಲರಾಗಿದ್ದಾರೆ. ಕೊಲೆ ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಕೆಲಸ ಮಾಡಿದ್ದಾರೆ. 1993ರ ಬಾಂಬೆ ಸ್ಫೋಟ, ಪ್ರಮೋದ್ ಮಹಾಜನ್ ಪ್ರಕರಣ, 2008ರ ಮುಂಬೈ ದಾಳಿ ಮತ್ತು ಗುಲ್ಶನ್ ಕುಮಾರ್ ಹತ್ಯೆ ಪ್ರಕರಣಗಳಲ್ಲಿ ಶಂಕಿತರನ್ನು ವಿಚಾರಣೆಗೆ ಒಳಪಡಿಸುವಲ್ಲಿ ಸಹಾಯ ಮಾಡಿದರು. ಉಜ್ವಲ್ ಅವರು 2013ರ ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣ, 2016ರ ಕೋಪರ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಆಗಿದ್ದರು. 2016 ರಲ್ಲಿ, ಅವರು 2016 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.
ಆಮೀರ್ ಖಾನ್ ಅವರು ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಚಿತ್ರ ಭಾರತೀಯ ಕ್ರಿಕೆಟಿಗ ಲಾಲಾ ಅಮರನಾಥ್ ಅವರ ಜೀವನಾಧಾರಿತ ಚಿತ್ರವಾಗಲಿದೆ ಎಂತಲೂ ವರದಿಯಾಗಿದೆ.