Site icon Vistara News

Aamir Khan: ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಮುತ್ತಿಟ್ಟ ಆಮೀರ್ ಖಾನ್!

Aamir Khan Greets Ex-Wife Kiran Rao With A Kiss

ಬೆಂಗಳೂರು: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ (Aamir Khan) ಅವರ ಪುತ್ರಿ ಇರಾ ಖಾನ್ (Ira Khan) ಮತ್ತು ನೂಪುರ್ ಶಿಖರೆ (Nupur Shikhare) ಅವರ ವಿವಾಹವು (Marriage) ಬುಧವಾರ (ಜ.3) ಸಂಜೆ ನಡೆಯಿತು. ಈ ಯುವಜೋಡಿಯ ರಿಜಿಸ್ಟರ್ ಮದುವೆಯಾಗಿದೆ. ವಿವಾಹ ಸಂಭ್ರಮದಲ್ಲಿ ಆಮೀರ್ ಖಾನ್ ಮಾಜಿ ಪತ್ನಿ ಮತ್ತು ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರು ಪುತ್ರ ಆಜಾದ್ ಅವರೊಂದಿಗೆ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಫೋಟೊ-ಆಪ್ ಸೆಷನ್‌ಗೆ ಪೋಸ್ ನೀಡುತ್ತಿರುವಾಗ ಕಿರಣ್ ರಾವ್ ಅವರ ಕೆನ್ನೆಗೆ ಆಮೀರ್‌ ಮುತ್ತಿಟ್ಟಿದ್ದಾರೆ. ಫ್ರೇಮ್‌ನಲ್ಲಿ ನೂಪುರ್ ಶಿಖರೆ ಅವರ ತಾಯಿ ಕೂಡ ಇದ್ದರು.

15 ವರ್ಷಗಳ ಕಾಲ ಕಿರಣ್ ರಾವ್ ಅವರ ಜತೆ ಆಮೀರ್‌ ದಾಂಪತ್ಯ ಜೀವನ ನಡೆಸಿದ್ದರು. 2021ರಲ್ಲಿ ಆಮೀರ್‌ ಹಾಗೂ ಕಿರಣ್ ರಾವ್ ವಿಚ್ಛೇದನ ಪಡೆದುಕೊಂಡರು. ಮದುವೆ ಸಮಾರಂಭದಲ್ಲಿ ಆಮೀರ್ ಖಾನ್ ಅವರ ಮಾಜಿ ಪತ್ನಿ ರೀನಾ ದತ್ತಾ ಕೂಡ ಇದ್ದರು. ಮದುವೆ ಸ್ಥಳ ಅತಿಥಿಗಳಿಂದ ತುಂಬಿ ತುಳುಕುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಇನ್ನು ವಿವಾಹದ ಸಂದರ್ಭದಲ್ಲಿ ನೂಪರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಮದುಮಗ ಸಾಮಾನ್ಯವಾಗಿ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆದಿತ್ತು.

ಇದನ್ನೂ ಓದಿ: Aamir Khan: ಆಮೀರ್ ಖಾನ್​ ಮಗಳು ಇರಾ ಖಾನ್ ಮದುವೆ ಶಾಸ್ತ್ರ ಶುರು!

ಇರಾ ಖಾನ್‌ ಮತ್ತು ನೂಪರ್‌ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಆಮೀರ್‌ ಖಾನ್‌ ತಮ್ಮ ಮಗಳ ಮದುವೆ ಬಗ್ಗೆ ಮಾಹಿತಿ ನೀಡಿದ್ದರು.

ಕಳೆದ ವರ್ಷ ತೆರೆಕಂಡ ಆಮೀರ್‌ ಖಾನ್‌ ಅಭಿನಯ್‌ ಬಹು ನಿರೀಕ್ಷಿತ ಚಿತ್ರ ʼಲಾಲ್‌ ಸಿಂಗ್‌ ಛಡ್ಡಾʼ ಬಾಕ್ಸ್‌ ಆಫೀಸ್‌ನಲ್ಲಿ ಸೋತು ಹೋಗಿತ್ತು. ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದಾಗ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. 

Exit mobile version