ಬಾಲಿವುಡ್ ಅಂಗಳದಲ್ಲಿ ಸೋಲಿನ ಮಹಾಪರ್ವವೇ ಮುಂದುವರಿದಿದೆ. ಅದರಲ್ಲೂ ನಟ ಆಮೀರ್ ಖಾನ್‌ಗೆ ಈ ಬಾರಿ ದೊಡ್ಡ ಸೋಲು ಎದುರಾಗಿದೆ. 3 ವರ್ಷ ಶ್ರಮಪಟ್ಟರೂ ಅಭಿಮಾನಿಗಳ ಮನ ಗೆಲ್ಲುವಲ್ಲಿ ಆಮೀರ್ ಖಾನ್ (Aamir Khan) ವಿಫಲವಾಗಿದ್ದು ವಿಪರ್ಯಾಸ ಎಂಬ ಮಾತು ಬಾಲಿವುಡ್ ಗಲ್ಲಿಗಳಲ್ಲೂ ಹರಿದಾಡುತ್ತಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲು. ಈ ಬೆನ್ನಲ್ಲೇ ಆಮೀರ್ ಖಾನ್ ತಮ್ಮ ಸಂಭಾವನೆ ಕೈಬಿಡಲು ನಿರ್ಧರಿಸಿದ್ದಾರಂತೆ. ಲಾಲ್ ಸಿಂಗ್ ಚಡ್ಡಾ ಸಿನಿಮಾಗಾಗಿ ಒಂದೇ ಒಂದು ರೂಪಾಯಿಯನ್ನೂ ಪಡೆಯದಿರಲು ಆಮೀರ್ ಖಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಾಲಿವುಡ್‌ನಲ್ಲಿ ಆಮೀರ್ ಖಾನ್ ತೆಗೆದುಕೊಂಡಿರುವ ನಿರ್ಧಾರ ಸಂಚಲನ ಸೃಷ್ಟಿಸಿದೆ. ಆಮೀರ್ ಖಾನ್ ಇಂತಹ ಸೋಲನ್ನು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಸಿನಿಮಾ ಮಕಾಡೆ ಮಲಗಿದ ಬಳಿಕ ಎಲ್ಲವೂ ಅಲ್ಲೋಲ ಕಲ್ಲೋಲ. ಸುಮಾರು ₹180 ಕೋಟಿ ಸುರಿದು ನಿರ್ಮಿಸಿದ್ದ ಲಾಲ್ ಸಿಂಗ್ ಚಡ್ಡಾ ಥಿಯೇಟರ್‌ನಲ್ಲಿ ಭೀಕರ ಸೋಲು ಕಂಡಿದೆ. ಮತ್ತೊಂದು ಕಡೆ ಒಟಿಟಿ ರೈಟ್ಸ್ ಕೂಡ ಇನ್ನೂ ಕನ್ಫರ್ಮ್ ಆಗಿಲ್ಲ ಎನ್ನಲಾಗಿದೆ.
ಆಮೀರ್ ಪರದಾಟ
ಒಂದಾನೊಂದು ಕಾಲದಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸುತ್ತಿದ್ದ ಬಾಲಿವುಡ್ ಸ್ಟಾರ್ಸ್ ಸಿನಿಮಾಗಳನ್ನ ಈಗ ಕೇಳುವವರೇ ದಿಕ್ಕಿಲ್ಲ. ಅತ್ತ ಥಿಯೇಟರ್‌ನಲ್ಲಿ ಸಿನಿಮಾ ಮಕಾಡೆ ಮಲಗುತ್ತಿದ್ದರೆ, ಮತ್ತೊಂದ್ಕಡೆ ಒಟಿಟಿ ರಿಲೀಸ್‌ಗೂ ಸುಲಭವಾಗಿ ಯಾರೂ ಒಪ್ಪುತ್ತಿಲ್ಲ. ಈ ಪಟ್ಟಿಯಲ್ಲಿ ನಟ ಆಮೀರ್ ಖಾನ್ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಹಾಕಿದ ಬಂಡವಾಳವನ್ನು ವಾಪಸ್ ತೆಗೆಯೋಕು ನಟ ಆಮೀರ್ ಖಾನ್ ಪರದಾಡುವಂತಾಗಿದೆ.
ಒಟಿಟಿ ಹುಡುಕಾಟ..?
ನೆಟ್‌ಫ್ಲಿಕ್ಸ್ ಸೇರಿ ಹಲವು ಒಟಿಟಿ ಪ್ಲಾಟ್‌ಫಾರಂಗಳ ಜೊತೆಗೆ ಮಾತುಕತೆ ನಡೆಸಿದ್ದರು ಆಮೀರ್ ಖಾನ್. ಆದರೆ ಎಲ್ಲೋ ಏನೋ ಎಡವಟ್ಟಾಗಿದೆ. ಇದೇ ಕಾರಣಕ್ಕಾಗಿ ಇನ್ನೂ ಲಾಲ್ ಸಿಂಗ್ ಚಡ್ಡಾ ಒಟಿಟಿ ರೈಟ್ಸ್ ಕನ್ಫರ್ಮ್ ಆಗಿಲ್ಲ. ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ₹180 ಕೋಟಿ ಬಂಡವಾಳ ಸುರಿದಿದ್ದರು ಆಮೀರ್. ಆದರೆ ₹150 ಕೋಟಿ ಗಡಿಯನ್ನೂ ದಾಟಿಲ್ಲ ಲಾಲ್ ಸಿಂಗ್ ಚಡ್ಡಾ ಕಲೆಕ್ಷನ್. ಹೀಗೆ ಲೆಕ್ಕ ಹಾಕಿದರೆ ₹150 ಕೋಟಿಯಲ್ಲಿ ಅರ್ಧದಷ್ಟು ಮೊತ್ತವೂ ನಿರ್ಮಾಪಕರ ಕೈಸೇರಿಲ್ಲ ಎನ್ನಬಹುದು. ಹೀಗಾಗಿ ಒಟಿಟಿ ರೈಟ್ಸ್ ಮೂಲಕ ದೊಡ್ಡ ಮೊತ್ತಕ್ಕಾಗಿ ಚಿತ್ರತಂಡದಿಂದ ಹುಡುಕಾಟ ಸಾಗಿದೆ.
ಒಟ್ಟಾರೆ ಬಾಲಿವುಡ್ ಸ್ಟಾರ್ ನಟರಿಗೆ ಸಾಲು ಸಾಲಾಗಿ ಶಾಕ್ ಸಿಗುತ್ತಿದೆ. ಜಗತ್ತಿನ ತುಂಬಾ ತಮ್ಮದೇ ಹವಾ ಇಟ್ಟುಕೊಂಡಿದ್ದ ಸಿನಿಮಾ ಇಂಡಸ್ಟ್ರಿ ಬಾಲಿವುಡ್. ಆದರೆ ಈಗ ಹಾಕಿದ ಬಂಡವಾಳ ಬಂದರೆ ಸಾಕಪ್ಪಾ ಎಂಬ ಪರಿಸ್ಥಿತಿ ಇದೆ. ಈ ಪಟ್ಟಿಯಲ್ಲಿ ಇನ್ನೂ ಹಲವು ಬಾಲಿವುಡ್ ಸ್ಟಾರ್‌ಗಳು ಇದ್ದಾರೆ. ಅದರಲ್ಲೂ ಲಾಲ್ ಸಿಂಗ್ ಚಡ್ಡಾ ಸೋಲು ದೊಡ್ಡ ಪಾಠ ಕಲಿಸಿದೆ.
ಇದನ್ನೂ ಓದಿ: laal singh chaddha | ಆಮೀರ್ ಖಾನ್ ಸಿನಿಮಾಗೆ ಒಟಿಟಿ ರೈಟ್ಸ್ ಕೇಳುವವರೇ ದಿಕ್ಕಿಲ್ವಾ?