ಬೆಂಗಳೂರು: ಆಮೀರ್ ಖಾನ್ (Aamir Khan) ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ‘ಗೆ ಅತಿಥಿಯಾಗಿ (The Great Indian Kapil Show) ಬಂದಿದ್ದರು. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ನಟ ಆಮೀರ್ ಖಾನ್ (Aamir Khan) ಪ್ರಚಾರ ಬಯಸದ ವ್ಯಕ್ತಿ ಎನ್ನಬಹುದು. ರಿಯಾಲಿಟಿ ಶೋಗಳಲ್ಲಿ (Reality Show), ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಆಮೀರ್ ಖಾನ್ ಹೆಚ್ಚಾಗಿ ಕಾಣಿಸಿಕೊಳ್ಳೋದಿಲ್ಲ. ಇದೀಗ ಕಪಿಲ್ ಶರ್ಮಾ ಶೋನಲ್ಲಿ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ . ಆಮೀರ್ ಮುಂದೆ ನಟ ಸಲ್ಮಾನ್ ಖಾನ್ (Salman Khan) ಮತ್ತು ಶಾರುಖ್ ಖಾನ್ ( Shah Rukh Khan) ಅವರೊಂದಿಗೆ ಚಿತ್ರದಲ್ಲಿ ನಟಿಸುತ್ತಾರಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಶಾರುಖ್ ಮತ್ತು ಮತ್ತು ಸಲ್ಮಾನ್ ಅವರನ್ನು ಭೇಟಿಯಾದೆ ಎಂದು ಆಮೀರ್ ನೆನಪಿಸಿಕೊಂಡಿದ್ದಾರೆ. “ನಾನು ಇತ್ತೀಚೆಗೆ ಶಾರುಖ್ ಮತ್ತು ಸಲ್ಮಾನ್ ಅವರನ್ನು ಭೇಟಿ ಮಾಡಿ, ಇಷ್ಟು ವರ್ಷಗಳಿಂದ ನಾವು ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಒಟ್ಟಿಗೆ ಸಿನಿಮಾ ಮಾಡದಿದ್ದರೆ ಪ್ರೇಕ್ಷಕರಿಗೆ ಅನ್ಯಾಯವಾಗುತ್ತದೆ. ಕನಿಷ್ಠ ಒಂದು ಸಿನಿಮಾವನ್ನಾದರೂ ಒಟ್ಟಿಗೆ ಮಾಡಬೇಕುʼʼಎಂದು ಹೇಳಿದ್ದೆ ಎಂದು ಮಾತನಾಡಿದ್ದಾರೆ. ಮಾತು ಮುಂದುವರಿಸಿ ʻʻನಾವು ಮೂವರು ಒಳ್ಳೆಯ ಕಥೆ ಮತ್ತು ಚಿತ್ರಕಥೆಯನ್ನು ಹುಡುಕುತ್ತಿದ್ದೇವೆ” ಎಂದು ಹೇಳಿದರು. ಮಾತ್ರವಲ್ಲ ಶೋನಲ್ಲಿ ತಾನು ಧರಿಸಿದ್ದ ಜೀನ್ಸ್ ಅನ್ನು ಸಲ್ಮಾನ್ ಖಾನ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Aamir Khan: ನಾನು ಮುಸ್ಲಿಮನಾಗಿರುವುದರಿಂದ ʻನಮಸ್ತೆʼ ಹೇಳುವ ಅಭ್ಯಾಸವಿರಲಿಲ್ಲ ಎಂದ ಆಮೀರ್ ಖಾನ್!
Aamir Khan in Kapil Sharma Show#Aamirkhan #kapilsharma pic.twitter.com/jxqv347Ydh
— Crazy_Soul (@Crazy_Soul_24) April 30, 2024
ನೆಟ್‌ಫ್ಲಿಕ್ಸ್ ಶೋನಲ್ಲಿ ಕಪಿಲ್ ಶರ್ಮಾ ಆಮೀರ್, ತುಂಬಾ ಯಂಗ್ ಆಗಿ ಕಾಣುವುದರ ಹಿಂದಿನ ರಹಸ್ಯದ ಬಗ್ಗೆ ಕೇಳಿದಾಗ, ಆಮೀರ್ ಪ್ರತಿಕ್ರಿಯಿಸಿದ್ದು ಹೀಗೆ. ʻʻನಾನು ಯಾವುದೇ ಕ್ರೀಮ್ ಬಳಸುವುದಿಲ್ಲʼʼಎಂದರು.
ನಾನು ಮುಸ್ಲಿಮನಾಗಿರುವುದರಿಂದ ʻನಮಸ್ತೆʼ ಹೇಳುವ ಅಭ್ಯಾಸವಿರಲಿಲ್ಲ ಎಂದ ಆಮೀರ್ ಖಾನ್!
ನೆಟ್‌ಫ್ಲಿಕ್ಸ್‌ನ ʻದಿ ಗ್ರೇಟ್ ಇಂಡಿಯನ್ ಕಪಿಲ್ ಶೋʼನ (The Great Indian Kapil Show) ಇತ್ತೀಚಿನ ಸಂಚಿಕೆಯಲ್ಲಿ, ನಟ ತನ್ನ ವೃತ್ತಿಜೀವನದ ಕುರಿತು ಹೇಳಿಕೊಂಡರು. ಜತೆಗೆ ಪಂಜಾಬ್ ಜನರ ನಮ್ರತೆಯನ್ನು ಶ್ಲಾಘಿಸಿದರು. ʻʻನಾನು ಮುಸ್ಲಿಂನಾಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಹೇಳುವ ಅಭ್ಯಾಸವಿರಲಿಲ್ಲ. ಪಂಜಾಬ್‌ನಲ್ಲಿ ಚಿತ್ರೀಕರಣಕ್ಕೆಂದು ಎರಡೂವರೆ ತಿಂಗಳುಗಳನ್ನು ಕಳೆದ ನಂತರ, ನನಗೆ ‘ನಮಸ್ತೆ’ ಎಂದು ಕೈ ಮುಗಿದು ಹೇಳುವ ಶಕ್ತಿ ಅರ್ಥವಾಯಿತುʼʼಎಂದು ಹೇಳಿಕೊಂಡಿದ್ದಾರೆ.
vAamir Khan talking about working with Shah Rukh Khan and Salman Khan together in a film at Kapil Sharma's show ♥️🔥#ShahRukhKhan #SalmanKhan #AamirKhanpic.twitter.com/rUWliQzvRU
— Shah Rukh Khan Warriors FAN Club (@TeamSRKWarriors) April 30, 2024
ಆಮೀರ್ ಮಾತನಾಡಿ ʻʻಈ ಕತೆ ನನಗೆ ತುಂಬ ಹತ್ತಿರವಾದದ್ದು. ದಂಗಲ್ ಸಿನಿಮಾವನ್ನು ಪಂಜಾಬ್‌ನಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿಯ ಜನರನ್ನು ನಿಜವಾಗಿಯೂ ಇಷ್ಟಪಟ್ಟೆ. ಪಂಜಾಬಿ ಸಂಸ್ಕೃತಿಯು ಪ್ರೀತಿಯಿಂದ ತುಂಬಿದೆ. ದಂಗಲ್ ಸಿನಿಮಾಗಾಗಿ ನಾವು ಅಲ್ಲಿ ಹೋದಾಗ ಚಿತ್ರೀಕರಣ ಮಾಡುತ್ತಿದ್ದ ಸ್ಥಳ ಒಂದು ಪಟ್ಟ ಹಳ್ಳಿ. ನಾವು ಆ ಸ್ಥಳದಲ್ಲಿ ಮತ್ತು ಆ ಮನೆಯಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಶೂಟ್ ಮಾಡಿದ್ದೇವೆ. ಅಲ್ಲಿ ಶೂಟ್‌ಗೆಂದು ಬೆಳಗ್ಗೆ 5 ಗಂಟೆಗೆ ಕಾರ್‌ನಲ್ಲಿ ತಲುಪುತ್ತಿದ್ದಾಗ ಜನ ನನಗೆ ಕೈ ಮುಗಿದು ಸ್ವಾಗತಿಸುತ್ತಿದ್ದರು. ಮನೆಯ ಹೊರಗೆ ನಿಂತು ‘ಸತ್ ಶ್ರೀ ಅಕಾಲ’ (ನಮಸ್ತೆ) ಎಂದು ಕೈ ಮುಗಿದು ಹೇಳುತ್ತಿದ್ದರು. ಶೂಟ್ ಆಗಿ ಪ್ಯಾಕ್‌ಅಪ್ ಆದ ಬಳಿಕವೂ ಮನೆ ಹೊರಗೆ ನಿಂತು ಕೈ ಮುಗಿದು ‘ಗುಡ್ ನೈಟ್’ ಎಂದು ಹೇಳುತ್ತಿದ್ದರುʼʼಎಂದರು.
ನಟ ಮಾತು ಮುಂದುವರಿಸಿ ʻʻನಾನು ಮುಸ್ಲಿಮನಾಗಿರುವುದರಿಂದ ಕೈ ಜೋಡಿಸಿ ಜನರಿಗೆ ನಮಸ್ತೆ ಹೇಳುವ ಅಭ್ಯಾಸವಿರಲಿಲ್ಲ. ಮುಸ್ಲಿಮರು ಪರಸ್ಪರ ಶುಭಾಶಯ ಹೇಳುವ ರೀತಿ ಕೈ ಎತ್ತಿ, ತಲೆ ಬಾಗಿಸಿ ಹೇಳುತ್ತಾರೆ. ಆದರೆ ಪಂಜಾಬ್‌ನಲ್ಲಿ ಆ ಎರಡೂವರೆ ತಿಂಗಳು ಕಳೆದ ನಂತರ, ನನಗೆ ‘ನಮಸ್ತೆ’ಯ ಶಕ್ತಿ ಅರ್ಥವಾಯಿತು. ಪಂಜಾಬ್‌ನ ಜನರು ಎಲ್ಲರಿಗೂ ತುಂಬಾ ಗೌರವ ನೀಡುತ್ತಾರೆʼʼಎಂದು ಹೇಳಿದರು. ಆಮೀರ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ (2022) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.