ಬೆಂಗಳೂರು: ಬಾಲಿವುಡ್ ನಟ ಆಮೀರ್ ಖಾನ್ (Aamir Khan ) ಈ ಹಿಂದೆ ಅಷ್ಟೇ ನಟನೆಯಿಂದ ದೂರ ಇರುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆಮೀರ್ ಖಾನ್ ತಮ್ಮ ಪ್ರೊಡಕ್ಷನ್ಸ್ ಹೌಸ್ ಆಫೀಸ್‌ನಲ್ಲಿ ಕಳಶ ಪೂಜೆ ಮಾಡಿದ್ದಾರೆ. ಹಿಂದು ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ನೂ ವಿಶೇಷ ಎಂದರೆ ಮಾಜಿ ಪತ್ನಿ ಕಿರಣ್ ರಾವ್ ಅವರು ಆಮೀರ್ ಅವರಿಗೆ ಸಾಥ್ ಕೊಟ್ಟಿದ್ದಾರೆ.
ಸಿನಿಮಾದಲ್ಲಿ ನಟನೆಯಿಂದ ದೂರವಿದ್ದರೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದಾಗಿ ಆಮೀರ್ ಖಾನ್ ಹೇಳಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು. ಇದರ ಬೆನ್ನಲ್ಲೇ ಹಿಂದೂ ಸಂಪ್ರದಾಯದಂತೆ ಹಣೆಗೆ ಕುಂಕುಮವಿಟ್ಟು, ನೆಹರು ಟೋಪಿ ಧರಿಸಿ ಬಿಳಿ ಶಲ್ಯ ಹಾಕಿ ಮಾಜಿ ಪತ್ನಿ ಕಿರಣ್ ರಾವ್ ಜತೆಗೂಡಿ ಕಳಶ ಪೂಜೆ ಮಾಡಿದ್ದಾರೆ. ಈ ಬಗ್ಗೆ ಆಮೀರ್ ಖಾನ್ ಅಭಿಮಾನಿಗಳು ಕಮೆಂಟ್ ಮಾಡಿದ್ದು ʻʻಈ ಫೋಟೊ ಹೃದಯಸ್ಪರ್ಶಿಯಾಗಿದೆʼʼ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ | Lagaan Movie | ಲಗಾನ್‌ಗೆ 21 ವರ್ಷ, ಮತ್ತೆ ಸೇರಿದ ಆಮೀರ್ ಟೀಮ್
ನಟನೆಯಿಂದ ದೂರ ಸರಿದಿದ್ದೇನೆ!
ಆಮೀರ್ ಈ ಹಿಂದೆ ಹೇಳಿಕೆ ನೀಡಿ ʻʻನಾನು 35 ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕೆಲಸ ಹೊರತು ಪಡಿಸಿ ಇನ್ನೆಲ್ಲೂ ಮನಸ್ಸನ್ನೂ ಕೇಂದ್ರೀಕರಿಸಲಿಲ್ಲ. ಈಗ ನನ್ನ ಕುಟುಂಬದ ಕಡೆ ಗಮನ ಕೊಡುವ ಸಮಯ ಬಂದಿದೆ. ಇಷ್ಟುದಿನ ಇದ್ದುದಕ್ಕಿಂತಲೂ ವಿಭಿನ್ನವಾದ ಜೀವನ ನಡೆಸಲು ಮನಸಾಗಿದೆ. ಮುಂದಿನ ಒಂದರಿಂದ ಒಂದೂವರೆ ವರ್ಷ ನಾನು ನಟನೆಯಲ್ಲಿ ಇರುವುದಿಲ್ಲʼʼ ಎಂದು ತಿಳಿಸಿದ್ದರು.
ಆಮೀರ್ ಅವರ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಛಡ್ಡಾ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. ಈ ಸಿನಿಮಾದ ಹೀನಾಯ ಸೋಲಿನಿಂದ ಆಮೀರ್ ಖಾನ್ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಸದ್ಯ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಆಮೀರ್ ಖಾನ್ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿ ಮುಂದಿನ ಸಿನಿಮಾ ಪ್ರಾಜೆಕ್ಟ್ ಪ್ರಾರಂಭಿಸಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಅಷ್ಟೇ ಆಮೀರ್ ಅವರು ತಮ್ಮ ತಂದೆಯ ಕಷ್ಟಕರ ದಿನಗಳನ್ನು ನೆನೆದು ಸಂದರ್ಶನವೊಂದರಲ್ಲಿ ಭಾವುಕರಾಗಿದ್ದರು. ತಮ್ಮ ಬಾಲ್ಯದಲ್ಲಿ ಕುಟುಂಬ ಬಹಳ ಆರ್ಥಿಕ ಸಮಸ್ಯೆಯನ್ನು ಎದುರಿಸಿತ್ತು. ಅದರಲ್ಲಿಯೂ ತಂದೆ ತಾಹಿರ್ ಹುಸೇನ್ ಚಲನಚಿತ್ರ ನಿರ್ಮಾಪಕರಾಗಿದ್ದರು. ತಂದೆ ಸಾಲವನ್ನು ಮರುಪಾವತಿಸಲಾಗಿದೇ ಅವರು ಎದುರಿಸಿದ್ದ ಸಂಕಷ್ಟಗಳನ್ನು ನೆನೆದು ನಟ ಕಣ್ಣೀರು ಹಾಕಿದ್ದರು.
ಮಾಜಿ ಪತ್ನಿ ಕಿರಣ್ ರಾವ್ ಸಾಥ್!
ಆಮೀರ್ ಮತ್ತು ಕಿರಣ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು 2021ರಲ್ಲಿ ವಿಚ್ಛೇದನ ಪಡೆಯುವದರ ಮೂಲಕ ಕೊನೆಗೊಳಿಸಿದ್ದರು. ಮಗ ಆಜಾದ್ ರಾವ್ ಖಾನ್ ಸಲುವಾಗಿ ಆಮೀರ್ ಮತ್ತು ಕಿರಣ್ ರಾವ್ ಇಬ್ಬರೂ ಪೋಷಕರಾಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಆಮೀರ್ ಹಾಗೂ ಕಿರಣ್ ರಾವ್ ಅವರು ಒಟ್ಟಿಗೆ ಆಗಾಗ ಫಿಲ್ಸ್ ಪಾರ್ಟಿಗಳಲ್ಲಿ ಇತರ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ | Aamir Khan | ತಮ್ಮ ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಆಮೀರ್ ಖಾನ್!