ಬೆಂಗಳೂರು: ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನೂಪುರ್ ಶಿಖಾರೆ (Nupur Shikhare) ಜತೆ ಇರಾ ಖಾನ್ ಜನವರಿ 3ರಂದು ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಆಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್.
ಇರಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಮಹಾರಾಷ್ಟ್ರದ ಆಚರಣೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇರಾ ಅವರ ಮದುವೆ ಶಾಸ್ತ್ರದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು. ಆಮೀರ್ ಅವರ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಅವರ ಮಗ ಆಜಾದ್ ರಾವ್ ಖಾನ್ ಸೇರಿದಂತೆ ಎಲ್ಲಾ ಅತಿಥಿಗಳ ಜತೆ ಡಿನ್ನರ್ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ.
ಇರಾ ಖಾನ್ ಮತ್ತು ನೂಪರ್ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಆಮೀರ್ ಖಾನ್ ತಮ್ಮ ಮಗಳ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ʼʼಇರಾ ಖಾನ್ ಆಯ್ಕೆ ಮಾಡಿಕೊಂಡ ನೂಪುರ್ ತುಂಬಾ ಒಳ್ಳೆಯ ವ್ಯಕ್ತಿ. ಇರಾ ಖಾನ್ ಖಿನ್ನತೆಗೆ ಜಾರಿದ್ದಾಗ ಆತ ಅವಳ ಜತೆಗಿದ್ದು, ಆಕೆಗೆ ಸಹಾಯ ಮಾಡಿದ್ದ. ಬೆಂಬಲ ಸೂಚಿಸಿದ್ದ. ಆಕೆಯ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಬ್ಬರೂ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆʼʼ ಎಂದು ಆಮೀರ್ ಖಾನ್ ಹೇಳಿದ್ದರು.
Aamir Khan’s Daughter Ira Khan To Tie The Knot With Nupur Shikhare on January 13 #AamiKhan #Irakhan #NupurShikhare #Wedding pic.twitter.com/yKC8WGxhoF
— Bollywood Ghanta (@BollywoodGhnta) December 20, 2023
ಇದನ್ನೂ ಓದಿ: Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್ ನಟ ಆಮೀರ್ ಖಾನ್ ಗ್ರೇಟ್ ಎಸ್ಕೇಪ್
ʼʼಮಗಳ ಮದುವೆ ದಿನ ಖಂಡಿತಾ ನಾನು ಅಳುತ್ತೇನೆ. ನಾನು ತುಂಬ ಭಾವುಕನಾಗಿರುವುದರಿಂದ ನನ್ನ ಬಗ್ಗೆ ಈಗಲೇ ಕುಟುಂಬ ಸದಸ್ಯರು ಎಚ್ಚರಿಕೆ ವಹಿಸತೊಡಗಿದ್ದಾರೆ. ನಗು ಮತ್ತು ಕಣ್ಣೀರನ್ನು ನನಗೆ ನಿಯಂತ್ರಿಸಲು ಸಾಧ್ಯವಿಲ್ಲʼʼ ಎಂದು ಆಮೀರ್ ಖಾನ್ ಭಾವುಕರಾಗಿ ಹೇಳಿದ್ದರು.