Site icon Vistara News

Aamir Khan: ಆಮೀರ್ ಖಾನ್ ಮಾಜಿ ಪತ್ನಿಯರು ಭೇಟಿಯಾದಾಗ… ಅಷ್ಟೊಂದು ನಕ್ಕಿದ್ದೇಕೆ?

aamir kiran rina

ಹೊಸದಿಲ್ಲಿ: ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan) ಅವರ ಮಾಜಿ ಪತ್ನಿಯರಾದ ಕಿರಣ್ ರಾವ್ (Kiran Rao) ಮತ್ತು ರೀನಾ ದತ್ತಾ (Reena Dutta) ಅವರು ಒಂದು ಈವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರ ಜತೆ ಆಮೀರ್‌ ಹಾಗೂ ರೀನಾರ ಮಗ ಜುನೈದ್ ಖಾನ್ (Junaid Khan) ಕೂಡ ಕಂಡುಬಂದಿದ್ದಾನೆ.

ಆಮೀರ್ ಖಾನ್‌ ಮತ್ತು ರೀನಾ ದತ್ತಾ 1986ರಲ್ಲಿ ವಿವಾಹವಾದವರು. 2002ರಲ್ಲಿ ಬೇರ್ಪಟ್ಟರು. ನಂತರ 2005ರಲ್ಲಿ ಆಮೀರ್, ಕಿರಣ್ ರಾವ್ ಜತೆಗೆ ದಾಂಪತ್ಯ ಪ್ರವೇಶಿಸಿದರು. 2021ರಲ್ಲಿ ಇಬ್ಬರೂ ಪ್ರತ್ಯೇಕವಾದರು.

ಮುಂಬೈನಲ್ಲಿ ನಡೆದ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿಯರಿಬ್ಬರೂ ಭಾಗವಹಿಸಿದ್ದರು. ಪಾಪರಾಜಿಯೊಬ್ಬ ಈ ಮೂವರ ಚಿತ್ರಗಳನ್ನು Instagramನಲ್ಲಿ ಪೋಸ್ಟ್‌ ಮಾಡಿದ್ದಾನೆ. ಅದರಲ್ಲಿ ಮೂವರೂ ಪ್ರತ್ಯೇಕವಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ರೀನಾ ದತ್ತಾ ಮತ್ತು ಕಿರಣ್ ರಾವ್ ಪುಸ್ತಕದಂಗಡಿಯ ಮುಂದೆ ಒಟ್ಟಿಗೆ ನಿಂತು ನಗುತ್ತಿರುವುದು ಕಂಡುಬಂದಿದೆ. ಪಾಪರಾಜಿ ಒಟ್ಟಿಗೇ ಪೋಸ್‌ ನೀಡಲು ಕೇಳಿದಾಗ ಇಬ್ಬರೂ ಒಂದು ಕ್ಷಣ ನಗುತ್ತಾ ಒಟ್ಟಾದರು. ಬಳಿಕ ಕಿರಣ್‌ ರಾವ್‌, ʼʼಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ತೊಂದರೆ ಕೊಡುವುದು ಬೇಡʼʼ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಿರಣ್ ನೀಲಿ ಶರ್ಟ್ ಮತ್ತು ಫ್ಲಾಟ್‌ಗಳ ಅಡಿಯಲ್ಲಿ ಹಸಿರು ಉಡುಪನ್ನು ಧರಿಸಿದ್ದರು. ಆಮೀರ್ ಕಪ್ಪು ಟಿ-ಶರ್ಟ್, ನೀಲಿ ಡೆನಿಮ್ಸ್ ಮತ್ತು ಕಂದು ಬಣ್ಣದ ಶೂ ಧರಿಸಿದ್ದರು. ಪಟ್ಟೆಯುಳ್ಳ ಉದ್ದನೆಯ ಉಡುಗೆ ಮತ್ತು ಬೂಟುಗಳಲ್ಲಿ ರೀನಾ ಕಾಣಿಸಿಕೊಂಡರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಮೀರ್ ಪುತ್ರ ಜುನೈದ್ ಖಾನ್ ಕೂಡ ಭಾಗವಹಿಸಿದ್ದರು. ಅವರು ಅಂಗಡಿಯ ಆಚೆಗೆ ಆಮೀರ್ ಜೊತೆ ಪೋಸ್ ನೀಡುತ್ತಿದ್ದುದು ಕಂಡುಬಂತು. ಅವರು ನೀಲಿ ಶರ್ಟ್, ಆಲಿವ್ ಹಸಿರು ಪ್ಯಾಂಟ್ ಮತ್ತು ಬೂಟು ಧರಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಜುನೈದ್ ಮತ್ತು ಆಮೀರ್‌ ಪರಸ್ಪರ ಲಘುವಾಗಿ ತಬ್ಬಿಕೊಂಡಿರುವುದು ಕಂಡುಬಂದಿದೆ.

ಇದನ್ನೂ ಓದಿ: IPL 2023: ಆಮೀರ್​ ಖಾನ್​ ಜತೆಗೆ ಫೋಟೊ ತೆಗೆಸಿಕೊಂಡ ಚಹಲ್-ಧನಶ್ರೀ ಜೋಡಿ

Exit mobile version